ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಅಸಂಘಟಿತ ಕಾರ್ಮಿಕರ ಸೌಲಭ್ಯ ಅಕ್ಕಿಗಿರಣಿ ಹಮಾಲಿಗಳಿಗೂ ಅನ್ವಯಿಸಿ’

Published : 24 ಸೆಪ್ಟೆಂಬರ್ 2024, 15:55 IST
Last Updated : 24 ಸೆಪ್ಟೆಂಬರ್ 2024, 15:55 IST
ಫಾಲೋ ಮಾಡಿ
Comments

ಕಂಪ್ಲಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ್ ಅಕ್ಕಿ ಗಿರಣಿ ಹಮಾಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಎಸ್. ಶಿವರಾಜ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಬಳಿಕ ಸಂಘದ ಅಧ್ಯಕ್ಷ ಮೈನುದ್ಧೀನ್ ಮಾತನಾಡಿ, 23 ವಲಯಗಳ ಅಸಂಘಟಿತ ಕಾರ್ಮಿಕರಿಗೆ ಜಾರಿಗೊಳಿಸಿದ ಸೌಲಭ್ಯಗಳು ಅಕ್ಕಿಗಿರಣಿ ಹಮಾಲಿ ಕಾರ್ಮಿಕರಿಗೂ ಅನ್ವಯಿಸುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಹಮಾಲಿ ಕಾರ್ಮಿಕರು ಸಹಜ ಮರಣ ಹೊಂದಿದ್ದಲ್ಲಿ ₹1ಲಕ್ಷ ಪರಿಹಾರ ನೀಡಬೇಕು, ಶವ ಸಂಸ್ಕಾರದ ಪರಿಹಾರದ ಮೊತ್ತವನ್ನು ₹25,000ಕ್ಕೆ ಹೆಚ್ಚಿಸಬೇಕು, ಕಾರ್ಮಿಕರ ಭವಿಷ್ಯ ನಿಧಿ, ಪಿಂಚಣಿ ಯೋಜನೆ ಜಾರಿಗೊಳಿಸಬೇಕು. 60 ವರ್ಷ ಮೀರಿದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ₹1ಲಕ್ಷ ನಿವೃತ್ತಿ ಪರಿಹಾರ ನೀಡಬೇಕು. ಅಕ್ಕಿಗಿರಣಿ, ಉಗ್ರಾಣ, ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಹಮಾಲಿಗಳಿಗೆ ಕಾಯಕ ನಿಧಿ, ಭವಿಷ್ಯನಿಧಿ, ವಿಮಾ ಸೌಲಭ್ಯ, ಬೋನಸ್ ನೀಡಬೇಕು, ವಸತಿರಹಿತ ಹಮಾಲರಿಗೆ ವಸತಿ ಸೌಕರ್ಯ, ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಸಂಘದ ಗೌರವ ಅಧ್ಯಕ್ಷ ನರಸಪ್ಪ, ಪದಾಧಿಕಾರಿಗಳಾದ ಶಾಂತಪ್ಪ ಪೂಜಾರ್, ತಳವಾರ ಪರಶುರಾಮ, ವಲಿಸಾಬ್, ರಾಮಣ್ಣ, ನಾಯಕರ ಬಸವರಾಜ, ಕೆ. ಮಲ್ಲೇಶ್, ಶಿವಲಿಂಗಪ್ಪ, ರಾಘವೇಂದ್ರ ನಾಯಕ್, ಹೊಂದಲಿ ಮೆಹಬೂಬ್‍ಸಾಬ್, ನಬೀಸಾಬ್, ಶೆಕ್ಷಾವಲಿ, ಎಚ್. ನಾಗರಾಜ, ಸಿ. ಬಸವರಾಜ, ಬಸವ, ರಮೇಶ, ಗನ್ನಿ, ಪೀರಾಸಾಬ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT