ಸಂಡೂರು : ‘ಬನ್ನಿಹಟ್ಟಿ ಗ್ರಾಮದ ರೈಲ್ವೆ ಯಾರ್ಡ್ನಲ್ಲಿನ ಕಬ್ಬಿಣದ ಅದಿರು, ಯರ್ರಯ್ಯನಹಳ್ಳಿ ಗ್ರಾಮದ ಹೊರ ವಲಯದ ಸ್ಥಳದಲ್ಲಿನ ಗ್ರಾವೆಲ್ನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿದ್ದು, ಈ ಕೃತ್ಯಕ್ಕೆ ಸಂಡೂರು ತಾಲ್ಲೂಕು ಆಡಳಿತ, ಪೊಲೀಸ್ ಅಧಿಕಾರಿಗಳು ಪರೋಕ್ಷವಾಗಿ ಸಹಕಾರ ನೀಡಿದ್ದಾರೆ. ಅಕ್ರಮ ಗ್ರಾವೆಲ್ನಿಂದ ಸರ್ಕಾರದ ಬೊಕ್ಕಸಕ್ಕೆ ಕೊಟ್ಯಾಂತರ ರೂಪಾಯಿಗಳು ನಷ್ಠವಾಗಿದ್ದು, ಈ ಎರಡು ಅಕ್ರಮಗಳನ್ನು ಸರ್ಕಾರವು ಸಿಬಿಐ ತನಿಖೆಗೆವಹಿಸಿಬೇಕು’ ಎಂದು ಬಳ್ಳಾರಿ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ಜಿ.ಟಿ.ಪಂಪಾಪತಿ ಒತ್ತಾಯಿಸಿದರು.

ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರ್ರೆಯ್ಯನಹಳ್ಳಿ ಗ್ರಾಮದ ಬಳಿಯಲ್ಲಿ ಸುಮಾರು 4 ಎಕರೆಯ ಪ್ರದೇಶದಲ್ಲಿ ಅಂದಾಜು 12ಮೀಟರ್ ಎತ್ತರದಲ್ಲಿ 4ಲಕ್ಷ ಟನ್ ಗ್ರಾವೆಲ್ನ್ನು ಅಕ್ರಮವಾಗಿ ತೆಗೆದು ಸಾಗಿಸಲಾಗಿದ್ದು, ಸರ್ಕಾರಕ್ಕೆ ಕನಿಷ್ಠ ₹10ಕೋಟಿ ಹಣ ನಷ್ಠವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು 1.ಎಕರೆ 47ಸೇಂಟ್ಸ್ ಜಮೀನಿನಲ್ಲಿ ಕೇವಲ 12ಸಾವಿರ ಟನ್ ಗ್ರಾವೆಲ್ ತೆಗೆದಿದ್ದು, ₹40ಲಕ್ಷ ಹಣ ಮಾತ್ರ ನಷ್ಠವಾಗಿದೆ ಎಂದು ನ್ಯಾಯಾಲಯದಲ್ಲಿ ಪಿಸಿಆರ್ ಹಾಕಿ ಹಗರಣ ಮುಚ್ಚಿಹಾಕಲು ಅಧಿಕಾರಿಗಳ ಮುಂದಾಗಿರುವುದು ಎಷ್ಟು ಸರಿ? ಎಂದು ಕಿಡಿಕಾರಿದರು.

‘ಬನ್ನಿಹಟ್ಟಿ ಗ್ರಾಮದ ಹೊರವಲಯದಲ್ಲಿನ ರೈಲ್ವೆ ಯಾರ್ಡ್ನಲ್ಲಿ ಸಹ ದೊಡ್ಡ ಪ್ರಮಾಣದಲ್ಲಿ ಕಬ್ಬಿಣ ಅದಿರಿನ ಹಗರಣ ಕಂಡುಬಂದಿದ್ದು ಸುಮಾರು 15ಸಾವಿರ ಟನ್ ಕಬ್ಬಿಣ ಅದಿರುನ್ನು ಹತ್ತು ವರ್ಷಗಳ ಕಾಲ ಸಂಗ್ರಹಮಾಡಿದ್ದು, ಹಲವಾರು ವರ್ಷಗಳಿಂದ ಟೆಂಡರ್ ಕರೆದಿಲ್ಲ. ಆ ಸ್ಥಳದಲ್ಲಿ ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳದಿವೆ. ಸುವರ್ಣ ಸ್ಟೀಲ್ ನಿಂದ ಮೂರು ಸಾವಿರ ಟನ್ 36 ಗ್ರೇಡ್ ಅದಿರನ್ನು ತಂದು ಹಾಕಲಾಗಿದೆ. ಅವರು 206 ಟ್ರೀಪ್ಗಳನ್ನು ತಂದಿದ್ದು, ದಾಖಲೆಗಳ ಪ್ರಕಾರ 121 ಟ್ರೀಪ್ ಮಾತ್ರ ಮೂಮೆಂಟ್ ಮಾಡಿದ್ದಾರೆ. 16ಸಾವಿರ ಟನ್ ರೇಖೆಗೆ ಹಾಕಲಾಗಿದ್ದು, 800 ಟನ್ ಮಾತ್ರ ರೈಲ್ವೆ ಸೈಟ್ಗೆ ಹಾಕಲಾಗಿದ್ದು, ಸುಮಾರು ರೂ.8ಸಾವಿರ ಅದಿರನ್ನು ಲೂಟಿ ಮಾಡಲಾಗಿದೆ ಸರ್ಕಾರಕ್ಕೆ ರೂ.4.80ಕೋಟಿ ತೆರಿಗೆ ನಷ್ಠವಾಗಿದ್ದು, ಈ ಎಲ್ಲ ಅಕ್ರಮಗಳಿಗೆ ಸಂಡೂರಿನ ಪೊಲೀಸ್ ಅಧಿಕಾರಿಯೊಬ್ಬರು ಪ್ರಮುಖ ಕಾರಣರಾಗಿದ್ದಾರೆ’ ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ‘ಯರ್ರಯ್ಯನಹಳ್ಳಿ ಗ್ರಾಮದಲ್ಲಿ ಅಕ್ರಮ ಗ್ರಾವೆಲ್, ಬನ್ನಿಹಟ್ಟಿ ರೈಲ್ವೆ ಯಾರ್ಡ್ನಲ್ಲಿ ಅಕ್ರಮ ಕಬ್ಬಿಣ ಅದಿರು ಸಂಗ್ರಹ, ಸುಶೀಲಾನಗರ ಗ್ರಾಮದ ಬಳಿಯ ಟೋಲ್ಗೇಟ್ನಲ್ಲಿ ಲಾರಿಗಳಿಂದ ಹಣ ವಸೂಲಿ ಸೇರಿದಂತೆ ಸಂಡೂರುನಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಯನ್ನು ಸರ್ಕಾರವು ಶೀಘ್ರವಾಗಿ ತಡೆಯಬೇಕು. ಈ ಅಕ್ರಮಗಳನ್ನು ತನಿಖೆ ಮಾಡುವಂತೆ ಒತ್ತಾಯಿಸಿ ರಾಜ್ಯದ ಮುಖ್ಯಮಂತ್ರಿ, ರಾಜ್ಯಪಾಲರಿಗೆ ದೂರು ನೀಡಲಾಗುವುದು’ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣ, ಸಂಡೂರಿನ ಬಿಜೆಪಿ ಮಂಡಲದ ಅಧ್ಯಕ್ಷ ಅಶೋಕ್ ಕುಮಾರ್, ಪಕ್ಷದ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.