ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮತ್ತಿಹಳ್ಳಿಯಲ್ಲಿ ಮಡುಗಟ್ಟಿದ ಮೌನ

ವಿ.ಸಿದ್ದರಾಮಣ್ಣ ಅಂತಿಮ ದರ್ಶನ ಪಡೆದ ಮೂವತ್ತಕ್ಕೂ ಹೆಚ್ಚು ಮಠಾಧೀಶರು
Published 13 ಆಗಸ್ಟ್ 2024, 15:38 IST
Last Updated 13 ಆಗಸ್ಟ್ 2024, 15:38 IST
ಅಕ್ಷರ ಗಾತ್ರ

ಹರಪನಹಳ್ಳಿ: ಸೋಮವಾರ ಲಿಂಗೈಕ್ಯರಾದ ಬಸವ ತತ್ವ ಪ್ರಚಾರಕ ವಿ.ಸಿದ್ದರಾಮಣ್ಣ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಮತ್ತಿಹಳ್ಳಿಯಲ್ಲಿ ಮಂಗಳವಾರ ನಡೆಯಿತು.

ದಾವಣಗೆರೆ, ಶಿರಮಾಗೊಂಡನಹಳ್ಳಿ, ಸಿದ್ದಯ್ಯನಕೋಟೆ, ಬೀದರ್ ಜಿಲ್ಲೆಯ ಬಸವಕಲ್ಯಾಣ, ಬಾಲ್ಕಿ, ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮೂವತ್ತಕ್ಕೂ ಹೆಚ್ಚು ಮಠಾಧೀಶರು, ಬಸವಣ್ಣನವರ ವಚನ ಪ್ರಚಾರಕರು, ಶರಣ ಸಾಹಿತ್ಯ ಪರಿಷತ್‍ ಪದಾಧಿಕಾರಿಗಳು ಲಿಂ.ವಿ.ಸಿದ್ದರಾಮಣ್ಣ ಅವರ ಅಂತಿಮ ದರ್ಶನ ಪಡೆದರು.

ಬೀದರ್‌, ದಾವಣಗೆರೆ, ಭಾಲ್ಕಿ, ಬಸವಕಲ್ಯಾಣದ ಬಸವ ಬಳಗ ಮತ್ತು ಭಜನೆ ಕಲಾವಿದರು ವಚನಗಳನ್ನು ಹಾಡುವ ಮೂಲಕ ಸಿದ್ದರಾಮಣ್ಣ ಶರಣರಿಗೆ ನುಡಿನಮನ ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ ತೆರಳಿ ಸಂಜೆ 4.30ಕ್ಕೆ ಅವರ ಸ್ವಂತ ಜಮೀನಿನಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮನೆಯ ಆವರಣದಲ್ಲಿ ಜರುಗಿದ ನುಡಿನಮನದಲ್ಲಿ ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ, ‘ಸಿದ್ದರಾಮ ಶರಣರು ಮತ್ತಿಹಳ್ಳಿಯಲ್ಲಿ ಜನಿಸಿದ್ದೇ ಪವಾಡ. ಕುಟುಂಬ ತೊರೆದು ಬಸವಕಲ್ಯಾಣ ತಲುಪಿ, ಅಲ್ಲಿ ಬಸವಣ್ಣನವರ ವಚನಗಳನ್ನು ಪ್ರಚುರಪಡಿಸಿದ್ದಾರೆ. ಬದುಕಿನ ಕೊನೆಯ ಕ್ಷಣಗಳನ್ನು ಸ್ವ ಗ್ರಾಮ ಮತ್ತಿಹಳ್ಳಿಯಲ್ಲಿದ್ದು ಶರಣರ ತತ್ವ ಪಸರಿಸುವ ಇಚ್ಚೆಯಿಂದ ಬಂದಿದ್ದ ಸಿದ್ದರಾಮಣ್ಣ ಶರಣರ ಸೇವೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ಪಡೆಯುವ ಮುನ್ನವೇ ಲಿಂಗೈಕ್ಯರಾಗಿದ್ದು, ಮತ್ತಿಹಳ್ಳಿಗಷ್ಟೇ ಅಲ್ಲ ಕಲ್ಯಾಣದ ನಾಡಿಗೆ ನೋವು ತಂದಿದೆ ಎಂದು ಹೇಳಿದರು.

ವಿಶ್ವ ಬಸವ ಧರ್ಮ ಟ್ರಸ್ಟ್ ಅಧ್ಯಕ್ಷರಾದ ಅನುಭವ ಮಂಟಪದ aಧ್ಯಕ್ಷ ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಇಳಕಲ್ ವಿಜಯ ಮಹಾಂತೇಶ್ವರಮಠದ ಗುರುಮಹಾಂತ ಸ್ವಾಮೀಜಿ, ಗುರುಬಸವ ಪಟ್ಟದ್ದೇವರು, ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಸಿದ್ದಯ್ಯನಕೋಟೆ ಬಸವಲಿಂಗ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂಜಾರ ಷಣ್ಮುಖಪ್ಪ, ಬಸವರಾಜ್, ಬಣಕಾರ ರಾಜಶೇಖರ, ಮತ್ತಿಹಳ್ಳಿ ಅಜ್ಜಣ್ಣ, ಶೇಖರಗೌಡ ಪಾಟೀಲ್, ಡಾ.ಎ.ಕೆ.ಸಂತೋಷ, ಐಗೋಳ ಚಿದಾನಂದ ಪಾಲ್ಗೊಂಡಿದ್ದರು.

ವಿ.ಸಿದ್ದರಾಮಣ್ಣ ಅವರ ಅಂತಿಮ ದರ್ಶನ ಪಡೆದ ವಿವಿಧ ಶರಣರು ಪೂಜೆ ಸಲ್ಲಿಸಿದರು. ವಿಶ್ವ ಬಸವ ಧರ್ಮ ಟ್ರಸ್ಟ್ ಅಧ್ಯಕ್ಷರಾದ ಅನುಭವ ಮಂಟಪದ ಬಸವಲಿಂಗ ಪಟ್ಟದ್ದೇವರು ಇಳಕಲ್ ವಿಜಯ ಮಹಾಂತ ಸ್ವಾಮೀಜಿ ಬಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಸಿದ್ದಯ್ಯನಕೋಟೆ ಬಸವಲಿಂಗಸ್ವಾಮೀಜಿ ಪಂಚಮಸಾಲಿ ಮಠದ ವಚಾನನಂದ ಸ್ವಾಮೀಜಿ ಗಂಗಾಂಭಿಕ ತಾಯಿ ಮಾತಾ ಗಾಯತ್ರಿ ತಾಯಿ ಸತ್ಯಮೇದಾವಿ ಭಾರತಿ ತಾಯಿ ಪಾಲ್ಗೊಂಡಿದ್ದರು
ವಿ.ಸಿದ್ದರಾಮಣ್ಣ ಅವರ ಅಂತಿಮ ದರ್ಶನ ಪಡೆದ ವಿವಿಧ ಶರಣರು ಪೂಜೆ ಸಲ್ಲಿಸಿದರು. ವಿಶ್ವ ಬಸವ ಧರ್ಮ ಟ್ರಸ್ಟ್ ಅಧ್ಯಕ್ಷರಾದ ಅನುಭವ ಮಂಟಪದ ಬಸವಲಿಂಗ ಪಟ್ಟದ್ದೇವರು ಇಳಕಲ್ ವಿಜಯ ಮಹಾಂತ ಸ್ವಾಮೀಜಿ ಬಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಸಿದ್ದಯ್ಯನಕೋಟೆ ಬಸವಲಿಂಗಸ್ವಾಮೀಜಿ ಪಂಚಮಸಾಲಿ ಮಠದ ವಚಾನನಂದ ಸ್ವಾಮೀಜಿ ಗಂಗಾಂಭಿಕ ತಾಯಿ ಮಾತಾ ಗಾಯತ್ರಿ ತಾಯಿ ಸತ್ಯಮೇದಾವಿ ಭಾರತಿ ತಾಯಿ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT