ಸಿರುಗುಪ್ಪ ನಗರಕ್ಕೆ ರಾಷ್ಟ್ರೀಯ ಹೆದ್ದಾರಿ ಶಾಪವಾಗಿದೆ. ರಸ್ತೆಯಲ್ಲಿನ ಕುಣಿಗಳು ಮತ್ತು ಇಲ್ಲಿನ ಧೂಳಿಗೆ ಹೆದರಿ ದೂರದ ಊರಿಂದ ಬರುವವರು ಹಿಂಜರಿಯುತ್ತಿದ್ದಾರೆ. ಜೀವದ ಭಯದಲ್ಲಿ ನಿತ್ಯ ಓಡಾಡುವ ಪರಿಸ್ಥಿತಿಯಿದೆ
ನಾಗರಾಜ ವಾಹನ ಚಾಲಕ ಸಿರುಗುಪ್ಪ
ನಗರದಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಚರಂಡಿಗಳಲ್ಲಿ ತ್ಯಾಜ್ಯ ತುಂಬಿದ ಕಾರಣ ಮಳೆ ನೀರು ಹೆದ್ದಾರಿಯ ಮೇಲೆ ಹರಿದು ಬರುತ್ತಿದೆ. ಇದರಿಂದ ಹೆದ್ದಾರಿ ಕೆಟ್ಟು ಹೋಗಿದೆ. ನಗರಸಭೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು
ಶಾಕೀರ್ ಹುಸೇನ್, ಎ.ಇ.ಇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹೊಸಪೇಟೆ