ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಕಣ ಸೂರ್ಯಗ್ರಹಣ: ಒಂದೆಡೆ ಉತ್ಸಾಹ, ಮತ್ತೊಂದೆಡೆ ಭಯ

ಹೊಸಪೇಟೆ
Last Updated 26 ಡಿಸೆಂಬರ್ 2019, 4:01 IST
ಅಕ್ಷರ ಗಾತ್ರ

ಹೊಸಪೇಟೆ:ಕಂಕಣಸೂರ್ಯಗ್ರಹಣದ ಹಿನ್ನೆಲೆಯಲ್ಲಿ ನಗರದ ಜನತೆಯಲ್ಲಿ ಭಯ ಮನೆ ಮಾಡಿದ್ದು, ಬಹುತೇಕರು ಮನೆ ಬಿಟ್ಟು ಹೊರಬಂದಿಲ್ಲ. ಇನ್ನೊಂದೆಡೆ ಭಾರತ ಜ್ಞಾನ ವಿಜ್ಞಾನ ಸಮಿತಿ ನಗರದ ರೋಟರಿ ವೃತ್ತದಲ್ಲಿ ಹಮ್ಮಿಕೊಂಡಿರುವ ಸೂರ್ಯಗ್ರಹಣ ವೀಕ್ಷಣೆ ಕಾರ್ಯಕ್ರಮದಲ್ಲಿ ಜನ, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಬೆಂಗಳೂರಿನಿಂದ ತರಿಸಿದ ಮೂನ್ನೂರಕ್ಕೂ ಹೆಚ್ಚು ಕನ್ನಡಕಗಳ ಸಹಾಯದೊಂದಿದೆ ಗ್ರಹಣವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಜನ ಗ್ರಹಣ ನೋಡಲು ಬರುತ್ತಿದ್ದಾರೆ. ಆದರೆ, ಕನ್ನಡಕಗಳಿಗೆ ಕೊರತೆ ಉಂಟಾಗಿದೆ. ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿದೆ. ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದೆ.

ಬಹುತೇಕ ಹೋಟೆಲ್, ದರ್ಶಿನಿಗಳು ಬಾಗಿಲು ಮುಚ್ಚಿವೆ. ನಗರಸಭೆ ನೀರು ಕೂಡ ಸರಬರಾಜು ಮಾಡಿಲ್ಲ. ಪೋಷಕರು ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸದ ಕಾರಣ ಹಾಜರಾತಿ ಕಡಿಮೆ ಇದೆ. ಮಧ್ಯಾಹ್ನ ಹನ್ನೆರೆಡು ಗಂಟೆಯವರೆಗೆ ತಾಲ್ಲೂಕಿನ ಹಂಪಿ ವಿರೂಪಾಕ್ಷ ದೇವಸ್ಥಾನ ಮುಚ್ಚಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT