ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಮೂರ್ಚೆ ಬಿದ್ದು ಒದ್ದಾಡುತ್ತಿದ್ದವನ ರಕ್ಷಿಸಿದ ಶ್ರೀರಾಮುಲು

Published 25 ಫೆಬ್ರುವರಿ 2024, 15:33 IST
Last Updated 25 ಫೆಬ್ರುವರಿ 2024, 15:33 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಎಸ್‌.ಪಿ ಸರ್ಕಲ್‌ ಬಳಿ ಶನಿವಾರ ರಾತ್ರಿ ಮೂರ್ಚೆ ಬಿದ್ದು ‌ಒದ್ದಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಬಿಜೆಪಿ ನಾಯಕ ಬಿ. ಶ್ರೀರಾಮುಲು ಆರೈಕೆ ಮಾಡಿ, ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಶನಿವಾರ ನಡೆದ ಬಳ್ಳಾರಿಯ ಕೋಟೆ ಮಲ್ಲೇಶ್ವರ ರಥೋತ್ಸವದಲ್ಲಿ ಶ್ರೀರಾಮುಲು ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೊರಟಿದ್ದಾಗ ರಸ್ತೆಯಲ್ಲಿ ಮಹೇಶ್‌ ಎಂಬಾತ ಬಿದ್ದು ಒದ್ದಾಡುತ್ತಿದ್ದರಿಂದ ಕೂಡಲೇ ಅವರ ಬಳಿಗೆ ಧಾವಿಸಿದ ರಾಮುಲು,  ಮನೆಯೊಂದರ ಬಳಿಗೆ ಹೊತ್ತೊಯ್ದ ಆರೈಕೆ ಮಾಡಿದ್ದಾರೆ.

ನಂತರ ಅವರ ಕುಟುಂಬಸ್ಥರನ್ನು ಸ್ಥಳಕ್ಕೆ ಕರೆಸಿ, ಹಣಕಾಸಿನ ನೆರವು ನೀಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಕುರಿತ ವಿಡಿಯೊವನ್ನು ಶ್ರೀರಾಮುಲು ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT