ಸಿರುಗುಪ್ಪ: ತಾಲ್ಲೂಕಿನ ಬೈರಗಾಮದಿನ್ನೆ ಗ್ರಾಮದ ಟ್ರ್ಯಾಕ್ಟರ್ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನಕ್ಕೆ ತೆರಳುವ ಪಾದಯಾತ್ರಿಗಳಿಗೆ ನಾಲ್ಕನೇ ವರ್ಷದ ಅನ್ನಸಂತರ್ಪಣೆ ಮತ್ತು ವಿಶ್ರಾಂತಿ ವ್ಯವಸ್ಥೆ ಆಯೋಜಿಸಲಾಗಿತ್ತು.

ನೂರಾರು ಕಿಲೋಮೀಟರ್ ದೂರದಿಂದ ಪಾದಯಾತ್ರೆ ಕೈಗೊಳ್ಳುವ ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರ ಈ ಸೇವಾ ಕಾರ್ಯವನ್ನು ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿ ಪಾದಯಾತ್ರಿಗಳಿಗೆ ಶುಚಿಯಾದ ಅನ್ನಪ್ರಸಾದ ಹಾಗೂ ಸುಸಜ್ಜಿತ ವಿಶ್ರಾಂತಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪಾದಯಾತ್ರಿಗಳು ಪ್ರಸಾದ ಸೇವೆ ಸ್ವೀಕರಿಸಿ, ವಿಶ್ರಾಂತಿ ಪಡೆದು ಯಾತ್ರೆ ಮುಂದುವರಿಸಿದರು. ಬೈರಗಾಮದಿನ್ನೆ ಗ್ರಾಮದ ಟ್ರ್ಯಾಕ್ಟರ್ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮದ ಹಿರಿಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.