ಕಂಪ್ಲಿ: ಪಟ್ಟಣದ ದೇವಾಂಗ ಸಮುದಾಯದ ರಾಮಲಿಂಗ ದೇವಸ್ಥಾನದ ಕಲ್ಲಿನ ಕಂಬವೊಂದರಲ್ಲಿ ನಾಲ್ಕು ಸಾಲಿನ ಕನ್ನಡ ಲಿಪಿಯುಳ್ಳ ತೆಲುಗು ಭಾಷೆಯ ಶಾಸನವನ್ನು ಸಂಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ತಳವಾರ ನರಸಿಂಹ ಮತ್ತು ಪತ್ರಕರ್ತ ಬಂಗಿ ದೊಡ್ಡ ಮಂಜುನಾಥ ಪತ್ತೆ ಮಾಡಿದ್ದಾರೆ.

ಕಂಬದ ಕೆಳಭಾಗದಲ್ಲಿ ‘ಯೇಂಪುರಿತಿ ಪ್ಪನಕೂಂತ ರುಚಿನ ವಿರಮಯೀ ಬಸವನಗುಡಿ ಕಟಿಂಚೆನು ಯೀ ಪೆ’ ಎಂಬ ಅಕ್ಷರಗಳಿವೆ. ಇದನ್ನು ಇತಿಹಾಸ ಸಂಶೋಧಕರಾದ ತಳವಾರ ನರಸಿಂಹ, ಗಂಗಾವತಿಯ ಕೋಲ್ಕಾರ ಶರಣಬಸಪ್ಪ, ಶಾಸನ ತಜ್ಞರಾದ ಚಿತ್ರದುರ್ಗದ ಬಿ. ರಾಜಶೇಖರಪ್ಪ, ಧನಪಾಲ್, ಗೋಪಿನಾಥ್, ಮರಿ ಜೋಸೆಫ್ ಅವರು ಓದಿ, ಚಿನ್ನ ವೀರಮ್ಮ ಎಂಬಾಕೆ ಬಸವನಗುಡಿ ಕಟ್ಟಿಸಿದ್ದು ಎಂದು ಅರ್ಥೈಸಿದ್ದಾರೆ.

ಕಂಪ್ಲಿ ತಾಲ್ಲೂಕಿನಲ್ಲಿ 22 ಶಾಸನಗಳು ಪತ್ತೆಯಾಗಿದ್ದು, ಅದರಲ್ಲಿ ಕಣವಿ ತಿಮ್ಮಲಾಪುರ ಗ್ರಾಮದಲ್ಲಿ ದೊರೆತ ಕೃಷ್ಣದೇವರಾಯನ ಶಾಸನ ಮತ್ತು ಕಂಪ್ಲಿ ರಾಮಲಿಂಗ ದೇವಸ್ಥಾನದ ಕಂಬದಲ್ಲಿರುವ ಶಾಸನ ತೆಲುಗಿನಲ್ಲಿದೆ.

ರಾಮಲಿಂಗ ದೇವಸ್ಥಾನದ ಗರ್ಭಗುಡಿಯಲ್ಲಿರುವ ಲಿಂಗವು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಸ್ಥಾಪಿತವಾಗಿರಬಹುದು ಎನ್ನಲಾಗಿದೆ. ದೇವಸ್ಥಾನದ ನಾಲ್ಕು ಕಂಬಗಳು ನಾಲ್ಕು ರೀತಿಯ ಶೈಲಿಯಲ್ಲಿವೆ. ಶಿವನ ದೇವಸ್ಥಾನದಲ್ಲಿ ಶಂಕು, ಚಕ್ರ ವೈಷ್ಣವ ಲಾಂಛನ ಇರುವ ಕಂಬವೊಂದಿದೆ. ಬಹುಶಃ ಎಲ್ಲಿಯೋ ಇದ್ದ ಕಂಬಗಳನ್ನು ತಂದು ದೇವಸ್ಥಾನ ನಿರ್ಮಾಣಕ್ಕೆ ಬಳಸಿರುವ ಸಾಧ್ಯತೆ ಇದೆ. ಅದರಲ್ಲಿ ಒಂದು ಕಂಬದಲ್ಲಿ ಮಾತ್ರ ನಾಲ್ಕು ಸಾಲಿನ ಶಾಸನ ಇರುವುದನ್ನು ಕಾಣಬಹುದು ಎಂದು ಮಾಹಿತಿ ನೀಡಿದ್ದಾರೆ.

ಹಿಟ್ನಾಳ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಇತಿಹಾಸ ಉಪನ್ಯಾಸಕ ಕೆ. ಅಂಜನಯ್ಯ, ದೇವಾಂಗ ಸಮಾಜದ ಅಧ್ಯಕ್ಷ ಸಪ್ಪರದ ರಾಘವೇಂದ್ರ ಸಹಕರಿಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.