ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ರೈಲಿಗೆ ಸಿಲುಕಿ ಎಮ್ಮೆ ಸಾವು: ದಿಢೀರ್‌ ಬ್ರೇಕ್‌ನಿಂದಾಗಿ ಚಕ್ರ ಜಾಮ್

Published : 7 ಆಗಸ್ಟ್ 2024, 0:13 IST
Last Updated : 7 ಆಗಸ್ಟ್ 2024, 0:13 IST
ಫಾಲೋ ಮಾಡಿ
Comments

ಬಳ್ಳಾರಿ: ಬಳ್ಳಾರಿಯ ಕಂಟೋನ್ಮೆಂಟ್‌ ಬಳಿಯ ವೀರಶೈವ ಕಾಲೇಜು ಎದುರು ಮಂಗಳವಾರ ಎಮ್ಮೆಯೊಂದು ಸರಕು ಸಾಗಣೆ ರೈಲಿಗೆ ಸಿಲುಕಿ ಸಾವಿಗೀಡಾಗಿದೆ.  

ಕಲ್ಲಿದ್ದಲು ತುಂಬಿದ್ದ ರೈಲು ಆಂಧ್ರ ಪ್ರದೇಶ ಕಡೆಯಿಂದ ಕೊಪ್ಪಳದ ಗಿಣಿಗೇರಾಗೆ ತೆರಳುತ್ತಿತ್ತು. ಮಧ್ಯಾಹ್ನ 2.45ಕ್ಕೆ ರೈಲು ಚಲಿಸುತ್ತಿರುವಾಗಲೇ ಎಮ್ಮೆಯೊಂದು ಹಳಿಗಳ ಮೇಲೆ ಬಂದಿದೆ. ಆಗ ಲೋಕೊ ಪೈಲಟ್‌ ಏಕಾಏಕಿ ಬ್ರೇಕ್‌ ಹಾಕಿದ್ದಾರೆ. ಆದರೂ, ಎಂಜಿನ್‌ ಎಮ್ಮೆಗೆ ಡಿಕ್ಕಿ ಹೊಡೆದಿದೆ.

ಏಕಾಏಕಿ ಬ್ರೇಕ್‌ ಹಾಕಿದ್ದರಿಂದ ರೈಲು ಗಾಲಿಗಳು ಕೆಲ ಹೊತ್ತು ಜಾಮ್‌ ಆಗಿದ್ದವು. ಹೀಗಾಗಿ ಕೆಲಹೊತ್ತು ರೈಲು ಕಂಟೋನ್ಮೆಂಟ್‌ ಪ್ರದೇಶದಲ್ಲೇ ನಿಂತಿತ್ತು. ಗೇಟ್‌ ಬಂದ್‌ ಮಾಡಿದ್ದರಿಂದ ಸುತ್ತಮುತ್ತಲೂ ಪ್ರದೇಶದಲ್ಲಿ ವಾಹನಗಳು ಮತ್ತು ಪ್ರಯಾಣಿಕರ ರೈಲಿನ ಸಂಚಾರ ಸ್ಥಗಿತವಾಗಿ ಜನರು ಪರದಾಡಿದರು. 

ಕೆಲವು ಹೊತ್ತಿನ ಬಳಿಕ ಸರಕು ಸಾಗಣೆ ರೈಲು ಚಲಿಸಿದ ಬಳಿಕ ಪ್ರಯಾಣಿಕ ರೈಲಿನ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT