ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಪ್ಲಿ | ತುಂಗಭದ್ರಾ ನದಿ ಸೇತುವೆ: ರಕ್ಷಣಾ ಸರಳು ದುರಸ್ತಿ ಆರಂಭ

Published 10 ಆಗಸ್ಟ್ 2024, 16:09 IST
Last Updated 10 ಆಗಸ್ಟ್ 2024, 16:09 IST
ಅಕ್ಷರ ಗಾತ್ರ

ಕಂಪ್ಲಿ: ಇಲ್ಲಿಯ ಕೋಟೆ ಪ್ರದೇಶದ ಬಳಿಯ ತುಂಗಭದ್ರಾ ನದಿ ನಿರಂತರ ಪ್ರವಾಹದಿಂದ ಸೇತುವೆಯ ಎರಡು ಬದಿಯ ಕಬ್ಬಿಣದ ರಕ್ಷಣಾ ಸರಳುಗಳು ಹಾಳಾಗಿದ್ದು, ಗಂಗಾವತಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ನದಿ ಪ್ರವಾಹ ಬಂದಾಗ ರಕ್ಷಣಾ ಸರಳು ಹಾಳಾಗುತ್ತಿರುವುದರಿಂದ ಈ ಬಾರಿ ರಕ್ಷಣಾ ಕಬ್ಬಿಣದ ಸರಳುಗಳನ್ನು ಮಡಿಚಬಹುದಾದ(ಫೋಲ್ಡಿಂಗ್) ನೂತನ ಮಾದರಿಯಲ್ಲಿ ಅಳವಡಿಸುತ್ತಿರುವುದು ವಿಶೇಷ.

ಕಳೆದ ಕೆಲ ದಿನಗಳ ಹಿಂದೆ ಜಲಾಶಯ ಭರ್ತಿಯಾಗಿ ನದಿ ತುಂಬಿ ಹರಿಯುವಾಗ ಭಾರಿ ತ್ಯಾಜ್ಯವು ಜೊತೆಗೆ ತೇಲಿ ಬಂದಿದ್ದರಿಂದ ರಕ್ಷಣಾ ಕಂಬಿಗಳು ಅಲಲ್ಲಿ ಜಖಂಗೊಂಡಿದ್ದವು. ಅಲ್ಲದೆ, ಸೇತುವೆ ಮೇಲಿನ ರಕ್ಷಣಾ ಕಂಬಿಗಳ ಸುಮಾರು 60 ಪಿಲ್ಲರ್ ಗಳು ಹಾಳಾಗಿದ್ದು, ಅವುಗಳ ಮರು ನಿರ್ಮಾಣ ಕಾಮಗಾರಿಯೂ ಆರಂಭಗೊಂಡಿದೆ.

ಮೌಲಾಸೇನ್ ಕಾಮಗಾರಿ ನಿರ್ವಹಣೆ ಮತ್ತು ಬಟಾರಿ ರಾಜಶೇಖರ್ ಮೇಲ್ವಿಚಾರಕರಾಗಿ ಸೇತುವೆ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಸೇತುವೆ ಮೇಲೆ ಪಾದಾಚಾರಿಗಳು ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ. ಸೇತುವೆ ಎರಡು ಬದಿ ರಕ್ಷಣಾ ಸರಳು ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ಬೈಕ್, ವಾಹನಗಳ ಸಂಚಾರಕ್ಕೆ ಅನುಮತಿ ನೀಡುವ ನಿರೀಕ್ಷೆ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT