ಮರಿಯಮ್ಮನಹಳ್ಳಿ ತಾಂಡಾದ ಮತಗಟ್ಟೆ ಸಂಖ್ಯೆ 64ರಲ್ಲಿ ಮಂಗಳವಾರ ಬೆಳಿಗ್ಗೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ನೇಮರಾಜ ನಾಯ್ಕ ಅವರು ಪತ್ನಿ ವಾಣಿ ಅವರೊಂದಿಗೆ ಮತ ಚಲಾಯಿಸಿದರು.
ಮರಿಯಮ್ಮನಹಳ್ಳಿ ತಾಂಡಾದ ಮತಗಟ್ಟೆ ಸಂಖ್ಯೆ 65ರಲ್ಲಿ ಮಂಗಳವಾರ ಬೆಳಿಗ್ಗೆ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ಕಂಡು ಬಂದಿತು.
ಮರಿಯಮ್ಮನಹಳ್ಳಿ ತಾಂಡಾದ ಮತಗಟ್ಟೆ ಸಂಖ್ಯೆ 64ರಲ್ಲಿ ಮಂಗಳವಾರ ಬೆಳಿಗ್ಗೆ ಯುವತಿ ಗೌತಮಿ ಅವರು ಮೊದಲ ಬಾರಿ ಮತದಾನ ಮಾಡಿ ಸಂಭ್ರಮಿಸಿದರು.
ಮರಿಯಮ್ಮನಹಳ್ಳಿ ತಾಂಡಾದ ಮತಗಟ್ಟೆ ಸಂಖ್ಯೆ 64ರಲ್ಲಿ ಮಂಗಳವಾರ ಬೆಳಿಗ್ಗೆ ಯುವತಿ ಎಲ್.ಕಾವ್ಯಾಂಜಲಿ ಅವರು ಮೊದಲ ಬಾರಿ ಮತದಾನ ಮಾಡಿ ಸಂಭ್ರಮಿಸಿದರು.
ಮರಿಯಮ್ಮನಹಳ್ಳಿಯ ಮತಗಟ್ಟೆ ಸಂಖ್ಯೆ 60ರಲ್ಲಿ ಮಂಗಳವಾರ ಬೆಳಿಗ್ಗೆ ಪದ್ಮಶ್ರೀ ಮಂಜಮ್ಮ ಜೋಗತಿ ಅವರು ಭಾಗ್ಯಮ್ಮ ಜೋಗತಿ ಸಂಗಡ ಬಂದು ಮತದಾನ ಮಾಡಿದರು.