ಬಳ್ಳಾರಿ: ವಿಪ್ರೊ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಬಳ್ಳಾರಿ ನಗರದ ವ್ಯಕ್ತಿಯೊಬ್ಬರಿಗೆ ₹54 ಲಕ್ಷ ವಂಚಿಸಲಾಗಿದೆ.

ಈ ಸಂಬಂಧ ನಗರದ ‘ಸೈಬರ್, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ನಿಯಂತ್ರಣಾ (ಸಿಇಎನ್) ಠಾಣೆ’ಯಲ್ಲಿ ಬುಧವಾರ ಎಫ್ಐಆರ್ ದಾಖಲಾಗಿದೆ.

ವಂಚನೆಗೊಳಗಾದ ವ್ಯಕ್ತಿ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, 2023ರ ಜುಲೈನಲ್ಲಿ ಹೈದರಾಬಾದ್ನ ಮಾದಪುರ ಎಂಬಲ್ಲಿರುವ ವಿಪ್ರೊ ಕಂಪನಿಯಲ್ಲಿ ಕೆಲಸಕ್ಕೆಂದು ಸಂದರ್ಶನ ನೀಡಿ ಬಂದಿದ್ದರು. ಆದರೆ, ಕೆಲಸ ಸಿಕ್ಕಿರಲಿಲ್ಲ ಎನ್ನಲಾಗಿದೆ.

ನಂತರ ಮೊಬೈಲ್ನಲ್ಲಿ ಪರಿಚಿತರಾಗಿದ್ದ ಚಂದನಾ ಮತ್ತು ರಜತ್ ಎಂಬುವವರು ವಿಪ್ರೊದಲ್ಲಿ ಹಿರಿಯ ವ್ಯವಸ್ಥಾಪಕ ಹುದ್ದೆ ನೀಡುವುದಾಗಿ ವ್ಯಕ್ತಿಯನ್ನು ನಂಬಿಸಿದ್ದರು. ಅವರು ಹೇಳಿದಂತೆ ಒಂದು ವರ್ಷದ ಅವಧಿಯಲ್ಲಿ 90ಕ್ಕೂ ಅಧಿಕ ಬಾರಿ ಹಂತ ಹಂತವಾಗಿ ₹54,15,000 ಹಾಕಿದ್ದಾರೆ.

ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾದ ಬಳಿಕ ವ್ಯಕ್ತಿ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಬ್ಯಾಂಕ್ ಮಾಹಿತಿ ಕಲೆ ಹಾಕುತ್ತಿರುವುದಾಗಿಯೂ, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿರುವುದಾಗಿಯೂ ಸಿಇಎನ್ ಠಾಣೆ ಡಿವೈಎಸ್ಪಿ ಸಂತೋಷ್ ಚೌಹಾಣ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.