ಸಿರುಗುಪ್ಪ: ಅಂಧತ್ವವನ್ನು ಹುಟ್ಟಿನಿಂದಲೇ ಬಳುವಳಿಯಾಗಿ ಪಡೆದಿರುವ ಬಡ ಕುಟುಂಬವೊಂದರ ನಾಲ್ವರು ಸದಸ್ಯರು ನಿತ್ಯವು ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಶೇಂಗಾ ಮಾರಾಟ ಮಾಡಿ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ.

ಈ ಮುಸಿ್ಲಂ ಕುಟುಂಬದಲ್ಲಿರುವ ಮೂವರು ಸೋದರರು ಹುಟ್ಟಿನಿಂದಲೇ ಅಂಧರು. ಇವರೊಂದಿಗೆ ಇರುವ ಸಹೋದರಿ ಕೂಡಾ ಅಂಧೆ. ಆದರೆ, ಇವರಾ್ಯರೂ ಭಿಕ್ಷೆ ಬೇಡದೆ, ತಮ್ಮ ಬದುಕಿಗೆ ಬೇಕಾದ ಆದಾಯವನು್ನ ಶೇಂಗಾ ಮಾರಾಟ ಮಾಡುವ ಮೂಲಕ ಪಡೆಯುತ್ತಾರೆ. ಶೇಂಗಾ ಮಾರಿ ಗಳಿಸಿದ ಲಾಭದಲ್ಲಿಯೇ ತಮ್ಮ ಸಂಸಾರ ಜೀವನ ಸಾಗಿಸುತ್ತಿದ್ದಾರೆ. ದುಡಿದು ಗಳಿಸಿದ ಆದಾಯದಲ್ಲಿಯೇ ಕಷ್ಟದ ನಡುವೆಯೂ ಸಂತೃಪ್ತಿಯ ಜೀವನ ಸಾಗಿಸುತ್ತಿದ್ದಾರೆ. ತಾವಷ್ಟೇ ಬದುಕುವುದಲ್ಲ; ಇತರರಿಗೂ ಮಾದರಿಯಾಗಿ ಜೀವನ ನಿರ್ವಹಿಸುತ್ತಿದ್ದಾರೆ. ಅವರ ಸೇವೆ ಹಲವರಿಗೆ ಪ್ರೇರಣೆಯಾಗಿದೆ. ಇತರರಿಗೆ ಮಾದರಿಯಾಗಿದ್ದಾರೆ.

ಕೆಲವರು ಅನುಕಂಪ ಬೇಡ, ಅವಕಾಶ ಕೊಡಿ ಎನ್ನುವರು. ನಿಜವಾದ ಅಂಗವಿಕಲರಿಗೆ ಸೌಲಭ್ಯ ದೊರಕುವುದೇ ಕಷ್ಟವಾಗಿದೆ. ದೈಹಿಕ ಅಸಮರ್ಥರು ಎಲ್ಲಿಗೆ ಹೋಗಬೇಕು, ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು ಎಂಬಿತ್ಯಾದಿ ಮಾಹಿತಿ ಬಗೆ್ಗಯೂ ಇವರಿಗೆ ಆಸಕ್ತಿಯಿಲ್ಲ. ಕಾಯಕವೊಂದೇ ಅವರ ಮುಂದಿರುವ ಬದುಕು. ಅದೇ ದಾರಿಯಾಗಿದೆ.

ಹಿರಿಯ ಸಹೋದರ 40 ವರ್ಷ ವಯಸ್ಸಿನ ಅಹ್ಮದ್ ಹುಸೇನ್, 36ರ ಹರೆಯದ ನೂರ್ ಬಾಷಾ, 25ರ ರೆಹಮಾನ್, 15 ವರ್ಷ ವಯಸ್ಸಿನ ಸೋದರಿ ಉಮ್ಮಿ ಪೂರ್ಣ ಅಂಧರು. ಎಲ್ಲರೂ ಬಾಡಿಗೆ ಮನೆಯಲ್ಲಿ ಆಸರೆ ಪಡೆದಿದ್ದಾರೆ.

ಇವರಲ್ಲಿ ನೂರ್ ಬಾಷಾನನ್ನು ಪೋಲಿಯೊ ಪೀಡಿತ ಮಹಿಳೆ ವಿವಾಹವಾಗಿ, ತನ್ನಂತೆಯೇ ಅಂಗವಿಕಲ ಆಗಿರುವವನಿಗೆ ಬಾಳು ನೀಡಿ ಸಹಾಯ ಹಸ್ತ ಚಾಚಿದ್ದು, ಅವರ ಮಕ್ಕಳು ಅಂಗವೈಕಲ್ಯಕ್ಕೆ ತುತ್ತಾಗದೆ ಆರೋಗ್ಯವಂತರಾಗಿರುವುದು ಕುಟುಂಬಕ್ಕೆ ನೆಮ್ಮದಿ ತಂದಿದೆ.
ಮಾರುಕಟ್ಟೆಯಲ್ಲಿ ನಿತ್ಯ ಶೇಂಗಾ ಖರೀದಿಸಿ, ಕುಟುಂಬದ ಸದಸ್ಯರೆಲ್ಲಾ ಸೇರಿ ಸ್ವಚ್ಛಮಾಡಿ ಹುರಿದು, ಬೆಳಿಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡುವುದು ಇವರ ನಿತ್ಯದ ಕಾಯಕ.

ಶೇಂಗಾ ಮಾರಿ ಬಂದ ಲಾಭದಲ್ಲಿ ಜೀವನ ನಿರ್ವಹಣೆಗೆ ಉಳಿಸಿಕೊಂಡು, ಉಳಿದ ಹಣವನು್ನ ಮಾರನೇ ದಿನದ ವ್ಯಾಪಾರಕ್ಕೆ ಉಪಯೋಗಿಸುತ್ತಾ ಜೀವನೋಪಾಯ ಕಂಡುಕೊಂಡಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ತಂದೆ– ತಾಯಿಯನು್ನ ಕಳೆದುಕೊಂಡಿರುವ ಈ ಕುಟುಂಬದ ಬಹುತೇಕರು ಅಂಧರಾಗಿದ್ದರೂ ಯಾರ ಸಹಾಯ ನಿರೀಕ್ಷಿಸದೇ ಸ್ವಾವಲಂಬಿಯಾಗಿ ಬುದುಕು ಸಾಗಿಸುತ್ತಿದ್ದು, ವ್ಯಾಪಾರ ಮಾಡುವಾಗ ಸ್ಪರ್ಶ ಜ್ಞಾನದಿಂದಲೇ ಹಣದ ಮೌಲ್ಯ ಅರಿತು, ಮೋಸ ಮಾಡುವ ಗ್ರಾಹಕನಿಗೆ ಎಚ್ಚರಿಕೆ ನೀಡುತ್ತಾರೆ.

ರೆಹಮಾನ್ ತಾಲ್ಲೂಕು ಆಸ್ಪತ್ರೆ ಎದುರು ಕುಳಿತು ಶೇಂಗಾ ಮಾರಿದರೆ, ನೂರ್ ಬಾಷಾ ನಿತ್ಯವೂ ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯ್ತಿ ಕಚೇರಿ ಎದುರು ಕುಳಿತು ಶೇಂಗಾ ಮಾರಾಟ ಮಾಡುತ್ತಾರೆ. ಈತನ ಪತ್ನಿ ಬಟ್ಟೆ ಹೊಲೆಯುತ್ತ ಜೀವನ ನಿರ್ವಹಣೆಗೆ ನೆರವಾಗುತ್ತಿದ್ದಾರೆ.

ರಜಾ ದಿನಗಳಲ್ಲಿ ಇವರಿಗೆ ವ್ಯಾಪಾರವೇ ಇಲ್ಲದಂತಾಗುವುದರಿಂದ ಆದಾಯ ದೊರೆಯುವುದಿಲ್ಲ. ಕುಟುಂಬಕ್ಕೆ ಸರ್ಕಾರ ನೀಡುವ ಮಾಸಾಶನ ಬಿಟ್ಟರೆ ಬೇರೆ ಯಾವುದೇ ಸೌಲಭ್ಯಗಳು ದೊರೆತಿಲ್ಲ ಎಂಬುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.