ಬಳ್ಳಾರಿ: ಕೈಗಾರಿಕೆ ಸ್ಥಾಪನೆಗಾಗಿ ಭೂಮಿ ಕಳೆದುಕೊಳ್ಳಲಿರುವ ರೈತರು ಭೂಮಿಗೆ ಅಧಿಕ ಪ್ರಮಾಣದ ದರಕ್ಕೆ ಬೇಡಿಕೆ ಸಲ್ಲಿಸುವ ಬದಲು, ಕಾರ್ಖಾನೆಗಳ ಮಾಲೀಕರು ಬಂಡವಾಳ ಪಾಲುದಾರಿಕೆ (ಇಕ್ವಿಟಿ ಶೇರ್) ಹಾಗೂ ಮಾರುಕಟ್ಟೆ ಪಾಲುದಾರಿಕೆ (ಮಾರ್ಕೆಟ್ ಶೇರ್) ನೀಡುವಂತೆ ಒತ್ತಾಯಿಸಬೇಕು ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಸಲಹೆ ನೀಡಿದರು,

ಆರ್ಸೆಲಾರ್ ಮಿತ್ತಲ್ ಕಂಪೆನಿಯು ತಾಲ್ಲೂಕಿನ ಕುಡುತಿನಿ ಗ್ರಾಮದ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಉಕ್ಕಿನ ಕಾರ್ಖಾನೆಗಾಗಿ ಭೂಮಿ ಕಳೆದು ಕೊಳ್ಳಲಿರುವ ರೈತರು ಹೆಚ್ಚಿನ ದರ ನಿಗದಿ ಮಾಡುವಂತೆ ಕೋರಿ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸ ಲಾಗಿದ್ದ ರೈತರೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೂ. 36 ಸಾವಿರ ಕೋಟಿ ವೆಚ್ಚದ ಬೃಹತ್ ಕಾರ್ಖಾನೆ ಸ್ಥಾಪಿಸಲು ಮುಂದೆ ಬಂದಿರುವ ಕಂಪೆನಿಗೆ ಭೂಮಿ ನೀಡುವುದರಿಂದ ಅಭಿವೃದ್ಧಿಗೆ ಕಾಣಿಕೆ ಸಲ್ಲಿಸಿದಂತಾಗುತ್ತದೆ. ಆದರೆ, ಲಾಭದ ಪ್ರಮಾಣವನ್ನು ಗಣನೆಗೆ ತೆಗೆದು ಕೊಂಡು, ಭೂಮಿಗೆ ಒಂದು ಬಾರಿ ಅಧಿಕ ಪ್ರಮಾಣದ ದರ ನೀಡುವಂತೆ ಒತ್ತಾಯಿಸುವ ಬದಲು, ಸದಾ ದೊರೆಯುವ ಬಂಡವಾಳ ಪಾಲು ದಾರಿಕೆ ಹಾಗೂ ಮಾರುಕಟ್ಟೆ ಪಾಲು ದಾರಿಕೆ ನೀಡುವಂತೆ ಒತ್ತಾಯಿಸಿದರೆ, ಮುಂದಿನ ತಲೆಮಾರುಗಳಿಗೂ ಅದರ ಲಾಭ ದೊರಕಲಿದೆ ಎಂದು ಅವರು ಕಿವಿಮಾತು ಹೇಳಿದರು.

ಕೈಗಾರಿಕೆ ಸ್ಥಾಪಿಸುವ ಯಾವುದೇ ಕಂಪನಿಯು ಭೂಮಿ ಕಳೆದುಕೊಂಡ ರೈತರ ಕುಟುಂಬಗಳ ಒಬ್ಬ ಸದಸ್ಯನಿಗೆ ಉದ್ಯೋಗ ನೀಡುತ್ತದೆ. ಆದರೆ, ಸೂಕ್ತ, ಉನ್ನತ ಉದ್ಯೋಗ ಪಡೆಯಲು ಅರ್ಹ ಅಭ್ಯರ್ಥಿಗಳೇ ದೊರೆಯದ್ದರಿಂದ ಕೇವಲ ‘ಡಿ’ ದರ್ಜೆಯ ಉದ್ಯೋಗ ಪಡೆಯಲಾಗು ತ್ತದೆ. ಇದನ್ನು ಅರಿತು ತಮ್ಮ ಕುಟುಂಬದ ಯುವಕರಿಗೆ ಸೂಕ್ತ ಶಿಕ್ಷಣ ಕೊಡಿಸಿ, ಕೈಗಾರಿಕಾ ತರಬೇತಿ ಪಡೆದು, ತಾಂತ್ರಿಕ/ ಆಡಳಿತಾತ್ಮಕ ವಿಭಾಗದ ಉದ್ಯೋಗ ಪಡೆಯ ಬಹುದು. ಈ ಬಗ್ಗೆ ಇಲ್ಲಿನ ರೈತ ಕುಟುಂಬಗಳ ಸಮೀಕ್ಷೆ ನಡೆಸಿ, ಕನಿಷ್ಠ ಶೇ 5ರಷ್ಟು ಯುವಕರಿಗೆ ಸೂಕ್ತ ರೀತಿಯ ತರಬೇತಿ ಕೊಡಿಸಲು ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗು ವುದು ಎಂದು ಅವರು ಭರವಸೆ ನೀಡಿದರು.

‘ರೈತರು ಕೇವಲ ನಾಳೆ ಅಥವಾ ನಾಳಿದ್ದುಗಳ ಕುರಿತು ಆಲೋಚಿಸು ವುದು ಬೇಡ. 30 ವರ್ಷಗಳ ನಂತರದ ನಿಮ್ಮ ತಲೆಮಾರಿನ ಭವಿಷ್ಯದ ಬಗ್ಗೆ ಆಲೋಚಿಸಿ. ಅಭಿವೃದ್ಧಿಗೆ ಪ್ರೇರಣೆ ನೀಡಿದ ರೈತರು, ತಾವೂ ಅಭಿವೃದ್ಧಿ ಹೊಂದುವುದರ ಬಗ್ಗೆ ವಿಚಾರ ಮಾಡಿ’ ಎಂದ ಅವರು, ದರ ಹೆಚ್ಚಿಸುವಂತೆ ಕೂಗಾಡಿದರೆ ಏನೂ ಆಗುವುದಿಲ್ಲ. ತಲೆ ಉಪಯೋಗಿಸಬೇಕು. ಎಂದು ಹೇಳಿದರು.

ರೈತರ ಬೇಡಿಕೆಗೆ ಅನುಗುಣವಾಗಿ ದರ ಹೆಚ್ಚಿಸುವಂತೆಯೂ ಸರಕಾರ ದೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು. ಒಂದು ವಾರ ದೊಳಗೆ ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ನಿರ್ಧಾರ ಪ್ರಕಟಿಸಲಾಗು ವುದು. ಹಿರಿಯ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್ ಅವರ ಮಾರ್ಗಸೂಚಿಯ ಮರು ಪರಿಶೀಲನೆ ಯನ್ನೂ ನಡೆಸಲಾಗುವುದು ಎಂದು ಬಿಸ್ವಾಸ್ ಆಶ್ವಾಸನೆ ನೀಡಿದರು.

ಪಶ್ಚಿಮ ಬಂಗಾಲದಲ್ಲಿ ಕಾರ್ ತಯಾರಿಕೆ ಕಾರ್ಖಾನೆ ಸ್ಥಾಪಿಸಲು ಭೂಮಿ ಕೋರಿದ್ದ ಟಾಟಾ ಕಂಪನಿ, ಅಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಗುಜರಾತ್ಗೆ ತನ್ನ ನೆಲೆಯನ್ನು ಬದಲಿಸಿತು. ಗುಜರಾತ್ ಸರಕಾರ ಎಕರೆಗೆ ಕೇವಲ ಒಂದು ರೂಪಾಯಿ ದರದಲ್ಲಿ ಭೂಮಿ ನೀಡಿ, ಅಭಿವೃದ್ಧಿಗೆ ತೆರೆದುಕೊಂಡಿತು ಎಂದು ಅವರು ವಿವರಿಸಿದರು. ಕೇವಲ ಉದ್ಯೋಗ ನೀಡುವಂತೆ ಕೋರದೆ, ಸ್ಥಳೀಯರಿಗೆ ಅನುಕೂಲ ಆಗುವಂತೆ ಕಂಪೆನಿಯು ಕೈಗೊಳ್ಳುವ ವಿವಿಧ ಸಿವಿಲ್ ಕಾಮಗಾರಿಗಳ ತುಂಡು ಗುತ್ತಿಗೆಯನ್ನು ಸ್ಥಳೀಯರಿಗೇ ನೀಡುವಂತೆ ಒಪ್ಪಂದ ಮಾಡಿಕೊಳ್ಳ ಲಾಗುವುದು ಎಂದು ತಿಳಿಸಿದರು.

ರೈತರು ಕಳೆದುಕೊಳ್ಳಲಿರುವ ಭೂಮಿ ಬರಡು ಎಂದು ಭಾವಿಸಿ ದರ ನಿಗದಿ ಮಾಡದೆ ಸೂಕ್ತ ದರ ನೀಡಬೇಕು. ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಕೇವಲ 500 ಮೀಟರ್ ವ್ಯಾಪ್ತಿಯ ಭೂಮಿಗೆ ಅಧಿಕ ದರ ನಿಗದಿ ಮಾಡಲಾಗಿದ್ದು, ಅದನ್ನು 1000 ಮೀಟರ್ಗೆ ವಿಸ್ತರಿಸಬೇಕು, ಬೇರೆ ಜಿಲ್ಲೆ ಮತ್ತು ರಾಜ್ಯಗಳಲ್ಲಿ ನೀಡಿರುವಂತೆ ರೈತರ ಭೂಮಿಗೆ ದರ ನೀಡಬೇಕು ಎಂದು ಕುಡತಿನಿ ಮತ್ತು ಹರಗಿನಡೋಣಿ ಗ್ರಾಮಗಳ ರೈತ ಮುಖಂಡರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.