ಕೊಟ್ಟೂರು: ಮನುಷ್ಯನ ಅಂಗಗಳಲ್ಲಿ ಕಣ್ಣು ಅತ್ಯಂತ ಪ್ರಮುಖವಾದುದು, ಯಾರೊಬ್ಬರೂ ಅದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಚಾನುಕೋಟಿ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಡೋಣೂರು ಚಾನುಕೋಟಿ ಮಠ ಮತ್ತು ಎಂ.ಆರ್.ಟಿ. ಗ್ರಾಮಾಂತರ ಕಣ್ಣಿನ ಆಸ್ಪತ್ರೆ ಕೊಂಡ್ಲಹಳ್ಳಿ ಜಂಟಿಯಾಗಿ ಹಮ್ಮಿ ಕೊಂಡ್ದ್ದಿದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಶ್ರೀಮಠದಿಂದ ಕಳೆದ 17 ವರ್ಷ ಗಳಲ್ಲಿ 31 ಉಚಿತ ನೇತ್ರ ಚಿಕಿತ್ಸಾ ಶಿಬಿರ ವನ್ನು ನಡೆಸಿದ್ದೇವೆ. ಇದರಲ್ಲಿ 2500 ಜನರಿಗೆ ನೇತ್ರ ಚಿಕಿತ್ಸೆ ಮಾಡಲಾಗಿದೆ. 22 ಸಾವಿರ ಜನರ ನೇತ್ರ ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮುದಾಯ ಆರೋಗ್ಯ ಕೇಂದ್ರ ಡಾ. ಸುಲೋಚನಾ, ನೇತ್ರ ತಜ್ಞರಾದ ಡಾ. ನಾಗರಾಜ್ ಅನೇಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಅವರ ಸೇವೆ ಬಡವರಿಗೆ ನಿರಂತರವಾಗಿ ಸಿಗುವಂತಾಗಲಿ ಎಂದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಕಾಸಲ ಸಾವಿತ್ರಮ್ಮ ಮತ್ತು ಉಪಾಧ್ಯಕ್ಷ ಹರಪನಹಳ್ಳಿ ಗುರುಬಸವರಾಜ್, ಡೋಣೂರು ಚಾನುಕೋಟಿ ಮಠದ ಸೇವೆ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಶಿಬಿರದ ಸಾನ್ನಿಧ್ಯ ವಹಿಸಿದ್ದ ಶ್ರೀ ಮಲ್ಲಿಕಾರ್ಜುನ ಶಿವಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ದರು. ನಂದಿಪುರ ಕ್ಷೇತ್ರ ಶ್ರೀಮಹೇಶ್ವರ ಸ್ವಾಮೀಜಿ, ಪ್ರತಿಭಾವಂತ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಿಸಿದರು.

ಕೊಟ್ಟೂರು ಹಾಗೂ ಸುತ್ತಮುತ್ತಲ ಹಳ್ಳಿಗಳಿಂದ ಇನ್ನೂರಕ್ಕೂ ಹೆಚ್ಚು ಕಣ್ಣಿನ ತೊಂದರೆ ಇರುವವರು ಶಿಬಿರದಲ್ಲಿ ಭಾಗವಹಿಸಿದ್ದರು. ನೇತ್ರ ತಜ್ಞ ಡಾ. ನಾಗರಾಜ್, ಸಹಾಯಕ ಸಬ್ ಇನ್ಸಪೆಕ್ಟರ್ ಕೊಟ್ರೇಶ ಇದ್ದರು. ಪ್ರಶಾಂತ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.