ಹೂವಿನ ಹಡಗಲಿ: ಸೋಲು- ಗೆಲುವು ಸಾಮಾನ್ಯ. ಕ್ರೀಡೆಯಲ್ಲಿ ಆರೋಗ್ಯಕರ ಸ್ಪರ್ಧೆ ಮುಖ್ಯ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹುಲುಗಪ್ಪ ಹೇಳಿದರು.

ಪಟ್ಟಣದ ಜಿಪಿಜಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರಾಥಮಿಕ ಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕು ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಜಯಶಾಲಿಗಳಾಗಿ ಜಿಲ್ಲಾಮಟ್ಟದಲ್ಲಿ ಪ್ರತಿನಿಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಗುರಿಯನ್ನು ಹೊಂದಿ ಆಟವನ್ನಾಡಿ ಎಂದರು.

ಪ್ರಗತಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾದ ಪರಮೇಶ್ವರಪ್ಪ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿ ಆರೋಗ್ಯಕ್ಕೆ ಕ್ರೀಡಾಕೂಟಗಳು ಸಹಕಾರಿ ಯಾಗಿವೆ ಎಂದರು.

ಆಟಗಳು ಮನುಷ್ಯನನ್ನು ಎತ್ತರಕ್ಕೆ ಬೆಳೆಸುತ್ತವೆ. ಎಲ್ಲ ಮಕ್ಕಳು ಉತ್ತಮ ಪ್ರದರ್ಶನ ನೀಡಿ ಯಶಸ್ಸಿನ ಕಡೆ ಹೆಜ್ಜೆ ಹಾಕಿ ಎಂದರು.

ಜಿ.ಪಂ.ಸದಸ್ಯೆ ಶೋಭಾ ಬೆಂಡಿಗೇರಿ ಪ್ರತಿಜ್ಞಾನ ವಿಧಿ ಬೋಧಿಸಿದರು. ಜಿ.ಪಂ.ಸದಸ್ಯರಾದ ವಸಂತ ತಹಸೀ ಲ್ದಾರ್ ಬಸವರಾಜ ಸೋಮಣ್ಣನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಪಾರಿ ಬಸವರಾಜ, ಜಿ.ಪಂ.ಸದಸ್ಯರಾದ ವಸಂತ, ನಳಿನಾ ವೀರಭದ್ರಪ್ಪ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ರೇಣುಕಮ್ಮ, ತಾ.ಪಂ.ಉಪಾಧ್ಯಕ್ಷೆ ಮಂಗಳಾ ಹಾಲೇಶ್, ಡಿ.ಮಲ್ಲೇಶ ನಾಯ್ಕ, ದೈಹಿಕ ಪರಿವೀಕ್ಷಕ ಮಂಜುನಾಥ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಲ್.ವಿ.ಗುಡ್ಯಾ ನಾಯ್ಕ, ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ವತ್ಥನಾರಾಯಾಣ, ತಾಲ್ಲೂಕು ಪ್ರಾಥಮಿಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಜಾತಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪಾರಿ ಬಸವರಾಜ ಸ್ವಾಗತಿಸಿದರು. ಪ್ರಕಾಶ್ ಜೈನ್ ಪ್ರಾರ್ಥನೆ ಹಾಡಿದರು. ವಿ.ಬಿ.ಜಗದೀಶ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.