ಕೊಟ್ಟೂರು: ಪಟ್ಟಣದಲ್ಲಿ ಕಳೆದ 8ರಂದು ಕ್ಷುಲ್ಲಕ ಕಾರಣಕ್ಕಾಗಿ ವಕೀಲ ಪಿ. ಪ್ರಭುದೇವ ಅವರೊಂದಿಗೆ ಪಿಎಸ್‌ಐ ಕೃಷ್ಣನಾಯ್ಕ ಅನುಚಿತವಾಗಿ ವರ್ತಿಸಿದ ಪ್ರಕರಣ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ.

ಕೃಷ್ಣನಾಯ್ಕ ವಿರುದ್ಧ ಕೂಡ್ಲಿಗಿ ನ್ಯಾಯಾಲಯದಲ್ಲಿ ವಕೀಲ ಪ್ರಭುದೇವ ಅವರು ಅನುಚಿತ ವರ್ತನೆ, ಅಕ್ರಮ ತಡೆ, ಪ್ರಾಣ ಬೆದರಿಕೆ ಆಪಾದನೆ ಮೇಲೆ ದೂರು ದಾಖಲಿಸಿದ್ದಾರೆ.

ಸೋಮವಾರ ಕೂಡ್ಲಿಗಿ ಪ್ರಥಮ ದರ್ಜೆ ನ್ಯಾಯಾಂಗ ದಂಡಾಧಿಕಾರಿಗಳು ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣವನ್ನು ವಿಚಾರಣೆ ನಡೆಸಿದರು.

ಪಿಎಸ್‌ಐ ವರ್ತನೆ ಕುರಿತು ಬಳ್ಳಾರಿ ಜಿಲ್ಲಾ ಎಸ್ಪಿ ಅವರು ತನಿಖೆ ನಡೆಸಲು ನಿರ್ದೇಶನ ನೀಡಿದ್ದಾರೆ. ಪ್ರಕರಣವನ್ನು ತನಿಖೆ ಮಾಡಿ ವರದಿಯನ್ನು ಮಾರ್ಚ್ 2012ರ ಒಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.