ಬಳ್ಳಾರಿ: ತ್ಯಾಗ ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯದ ಸವಿ ಅನುಭವಿಸುತ್ತಿರುವವರು ದೇಶಕ್ಕಾಗಿ ಕೊಡುಗೆ ನೀಡದಿದ್ದರೂ, ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕಿದೆ ಎಂದು ಸ್ಥಳೀಯ ಸರಳಾದೇವಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಡಿ.ಗಂಗಣ್ಣ ಅಭಿಪ್ರಾಯಪಟ್ಟರು.

ಕಾಲೇಜಿನ ಆವರಣದಲ್ಲಿ ಬುಧವಾರ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಹೋರಾಡಿದ ಮಹನಿಯರ ಕುರಿತು ಅರಿಯಬೇಕು ಎಂದರು.

ವೈ.ಜನಾರ್ದನರೆಡ್ಡಿ, ಡಾ.ಮಾನಕರಿ ಶ್ರೀನಿವಾಸಾ ಚಾರ್ಯ, ಡಾ.ರಾಮ ಕೃಷ್ಣ, ಬಿ.ಶ್ರೀನಿವಾಸಮೂರ್ತಿ, ಡಾ.ಹೊನ್ನೂರಾಲಿ, ಡಾ.ಗೋಪಾಲರೆಡ್ಡಿ, ಡಾ.ಜಗನ್ನಾಥ, ಎಸ್.ಪಿ. ನಾಗನಗೌಡ, ಶಶಿಕಾಂತ, ಡಾ. ಕಲಾವತಿ, ಆರ್.ಎಂ. ಶ್ರೀದೇವಿ, ಡಾ.ಸರೋಜಾ ,ಡಾ.ಶೈಲಜಾ. ಎಸ್.ಎಂ. ಪಂಚಾಕ್ಷರಿ, ದೇವಣ್ಣ, ಎಂ.ಎಂ. ಈಶ್ವರ್, ಮನೋಹರನ್, ಕೊಟ್ರಪ್ಪ, ಪಂಪನಗೌಡ, ಡಾ.ಕೆ.ಬಸಪ್ಪ, ಹರೀಶ್ ಗುಜ್ಜಾರ್, ಟಿ.ವೀರಭದ್ರಪ್ಪ ಉಪಸ್ಥಿತರಿದ್ದರು.

ನ್ಯಾಯಾಲಯದಲ್ಲಿ ಧ್ವಜಾರೋಹಣ
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬುಧವಾರ ಬೆಳಿಗ್ಗೆ ಜಿಲ್ಲಾ ನ್ಯಾಯಾಧೀಶೆ ಎಂ.ಜಿ. ಉಮಾ ಧ್ವಜಾರೋಹಣ ನೆರವೇರಿಸಿದರು.

ಸಮಾಜದಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿ ಕೊಡುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ವಕೀಲರು ಗ್ರಂಥಾಲಯದಲ್ಲಿನ ಪುಸ್ತಕಗಳ ಅಧ್ಯಯನ ಮಾಡಿ, ಸಮಗ್ರವಾಗಿ ಕಾನೂನು ಅರಿತು, ಸಾರ್ವಜನಿಕರಿಗೆ ಸಹಾಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ವಕೀಲರ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಎನ್. ತಿಪ್ಪಣ್ಣ ಶಂಕುಸ್ಥಾಪನೆ ನೆರವೇರಿಸಿದರು. ವಕೀಲರ ಸಂಘದ ಅಧ್ಯಕ್ಷ ಎ.ಜಿ. ಶಿವಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷ ಯರ್ರಿಗೌಡ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಪ್ರಾರ್ಥಿಸಿದರು. ಟಿ.ಎಂ. ಜಡೇಶ ವಂದಿಸಿದರು.

ಹೊಸಪೇಟೆ ವರದಿ
ಹೊಸಪೇಟೆನಗರ ಸೇರಿದಂತೆ ತಾಲ್ಲೂಕಿನ ಶಾಲಾ ಕಾಲೇಜು, ಸಂಘ ಸಂಸ್ಥೆಗಳು 66ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಿದವು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ಧ್ವಜಾರೋಹಣ ನೇರವೆರಿಸಿದರು.

ಹೊಸಪೇಟೆಯ ವಿಕಾಸ ಬ್ಯಾಂಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ, ಹಿರೇಮಠ ಧ್ವಜಾರೋಹಣ ಮಾಡಿದರು. ಬ್ಯಾಂಕಿನ ನಿದೇಶಕರಾದ ಛಾಯಾ ದಿವಾಕರ್, ರಮೇಶ ಪುರೋಹಿತ್, ಎ.ಚಂದ್ರಹಾಸ, ಎಂ.ವೆಂಕಪ್ಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಇ.ಉಮಾದೇವಿ ಹಾಜರಿದ್ದರು.

ಅರವಿಂದ ನಗರದ ನೇತಾಜಿ ಶಾಳೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಬಾಲರಂಗಯ್ಯ ಧ್ವಜಾರೋಹಣ ಮಾಡಿದರು. ಪ್ರಾಚಾರ್ಯ ಎ.ಶೋಭಾವತಿ, ಆಡಳಿತಾಧಿಕಾರಿ ಎ.ರಘ, ಮುಖ್ಯಗುರು ಜಿ.ಆನಂದಗೌಡ ಹಾಜರಿದ್ದರು.

ಗಾದಿಗನೂರು ಸರ್ಕಾರಿ ಶಾಲೆಯಲ್ಲಿ ಮುಖ್ಯಗುರು ಅಂಬಣ್ಣ ಧ್ವಜಾರೋಹಣ ಮಾಡಿದರು. ಎಸ್ಡಿಎಂಸಿ ಸದಸ್ಯರು ಗ್ರಾಮಸ್ಥರು ಶಿಕ್ಷಕರು ಪಾಲ್ಗೊಂಡು ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಿದರು.

ಹೊಸಪೇಟೆ ನಗರಸಭೆಯಲ್ಲಿ ನಡೆದ ಕಾರ್ಯಕ್ರಮ ವನ್ನು ನಗರದ ಪ್ರಥಮ ಪ್ರಜೆ ಎಂ.ಅಮ್ಜದ್ ಧ್ವಜಾರೋಹಣದೊಂದಿಗೆ ನೆರವೇರಿಸಿದರು. ಉಪಾಧ್ಯಕ್ಷೆ ಪುಷ್ಪಾಗಾಂಧಿ, ಸದಸ್ಯರು ಪೌರಾಯುಕ್ತ ಕೆ.ರಂಗಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.