ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮೂಲಕ ತಾಲ್ಲೂಕಿನ ಮುದೇನೂರು ಕೆರೆಗೆ ನೀರು ಬಿಡುವಂತೆ ಒತ್ತಾಯಿಸಿ ಮುದೇನೂರು ಮತ್ತು ನಂದಿಹಳ್ಳಿ ಗ್ರಾಮಗಳ ರೈತರು ಇಲ್ಲಿನ ಎಸ್ಎಲ್ಐಎಸ್ ವಿಭಾಗೀಯ ಕಚೇರಿಗೆ ಮುತ್ತಿಗೆ ಹಾಕಿದರು.

ಕೆರೆಗೆ ನೀರು ಬಿಡುವುದಕ್ಕೆ ಅಡ್ಡಿಪಡಿಸುತ್ತಿರುವ ನಂದಿಹಳ್ಳಿಯ ಶಿಕ್ಷಕರೊಬ್ಬರ ನಿಲುವನ್ನು ಖಂಡಿಸಿದ ಪ್ರತಿಭಟನಾಕಾರರು, ಕೇವಲ ಒಬ್ಬರ ಹಿತಾಸಕ್ತಿ ಕಾಪಾಡುವುದಕ್ಕಿಂತ ಇಡೀ ಊರಿಗೆ ಒಳಿತಾಗುವ ತೀರ್ಮಾನ ಕೈಗೊಳ್ಳಿ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.

ಸಿಂಗಟಾಲೂರು ನೀರಾವರಿ ಯೋಜನೆಯಿಂದ ಪ್ರಾಯೋಗಿಕವಾಗಿ ಕೆರೆಗೆ ನೀರು ಹರಿಸುವ ಸಂದರ್ಭದಲ್ಲಿ ನಂದಿಹಳ್ಳಿಯ ಶಿಕ್ಷಕರಾದ ಪ್ರಕಾಶ್ ಮತ್ತು ಜಗದೀಶ ಎಂಬುವವರು ಅಡ್ಡಿಪಡಿಸಿ, ತಮ್ಮ ಜಮೀನಿನಲ್ಲಿ ನೀರು ಹರಿಸುವುದರಿಂದ ಆಗಿರುವ ಬೆಳೆಹಾನಿಗೆ ಪರಿಹಾರ ಕೊಡಬೇಕು ಮತ್ತು ನೀರು ಹರಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆರೆಗೆ ನೀರು ಹರಿಸುವುದನ್ನು ನಿಲ್ಲಿಸಿದ್ದರು.

ಅಧಿಕಾರಿಗಳ ಈ ನಿರ್ಧಾರವನ್ನು ಖಂಡಿಸಿದ ಮುದೇನೂರು ಮತ್ತು ನಂದಿಹಳ್ಳಿಯ ಗ್ರಾಮಸ್ಥರು, ಕೆರೆ ತುಂಬಿದರೆ ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಅಂತರ್ಜಲ ಅಭಿವೃದ್ಧಿಯಾಗಿ ಸುತ್ತಮುತ್ತಲಿನ ಕೊಳವೆ ಬಾವಿಗಳು ಪುನಶ್ಚೇತನಗೊಳ್ಳುವ ಆಶಾಭಾವನೆಯಿಂದ ಜಮೀನುಗಳಲ್ಲಿ ಹಾದು ಹೋಗಿರುವ ಕಾಲುವೆಗಳಿಗೆ ಪರಿಹಾರ ಕೂಡ ಪಡೆದಿಲ್ಲ.

ಇರುವ ಅಲ್ಪಸ್ವಲ್ಪ ಜಮೀನು ಕಳೆದುಕೊಂಡಿದ್ದರೂ ಊರಿಗೆ ಒಳ್ಳೆಯದಾಗುವ ಕೆಲಸಕ್ಕೆ ಯಾರೂ ಅಡ್ಡಿಪಡಿಸಿಲ್ಲ. ಆದರೂ ಅಧಿಕಾರಿಗಳು ಯಾರದೋ ಹಿತ ಕಾಯುವುದಕ್ಕಾಗಿ ಎರಡು ಗ್ರಾಮಗಳ ಹಿತ ಬಲಿ ಕೊಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಈ ಹಿಂದೆ ಮಳೆಯ ನೀರು ನೈಸರ್ಗಿಕವಾಗಿ ಹಳ್ಳದ ಮೂಲಕ ಹರಿದು ಮುದೇನೂರು ಕೆರೆಯಲ್ಲಿ ಸಂಗ್ರಹವಾಗುತ್ತಿತ್ತು. ಇದೀಗ ಹಳ್ಳದ ಮಧ್ಯೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಲುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಕೆರೆಗೆ ನೀರು ಸಂಗ್ರಹವಾಗಲು ತೊಂದರೆಯಾಗಿದೆ.

ಹಳ್ಳಕ್ಕೆ ಅಂಡರ್ ಪಾಸ್ ನಿರ್ಮಿಸಲಾಗಿದ್ದರೂ ಮಳೆಯ ನೀರು ಈ ಮೂಲಕವಾಗಿ ಕೆರೆಗೆ ಹೋಗದೇ ಪೋಲಾಗುತ್ತಿದೆ. ಮಳೆಯ ನೀರು ನೈಸರ್ಗಿಕವಾಗಿ ಕೆರೆ ಸೇರುವಂತೆ ಕಾಮಗಾರಿ ಕೈಗೊಳ್ಳಲು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿ.ಬಿ. ಮಲ್ಲಿಕೇಶಿ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸೋಗಿ ಹಾಲೇಶ್, ವಿ.ಬಿ. ಶಿವಾನಂದ, ಕೊಟ್ರಯ್ಯ, ಬಸವರಾಜ, ಅರಣಿ ಬಸವರಾಜ, ಪರಶೆಟ್ಟಿ ಪ್ರಕಾಶ, ಯಮನೂರುಸ್ವಾಮಿ ನೇತೃತ್ವದಲ್ಲಿ ರೈತರು ಭಾಗವಹಿಸಿದ್ದರು.

ನೀರು ಬಿಡುವ ಭರವಸೆ: ಪ್ರತಿಭಟನಾ ನಿರತರೊಂದಿಗೆ ಕರ್ನಾಟಕ ನೀರಾವರಿ ನಿಗಮದ ಮುನಿರಾಬಾದ್ ವೃತ್ತದ ಅಧೀಕ್ಷಕ ಅಭಿಯಂತರ ಮಂಜಪ್ಪ, ಹಡಗಲಿ ಎಸ್ಎಲ್ಐಎಸ್ ವಿಭಾಗೀಯ ಕಚೇರಿಯ ಕಾರ್ಯಪಾಲಕ ಎಂಜಿನಿಯರ್ ಓದೋ ಗಂಗಪ್ಪ ಮಾತನಾಡಿ, ತಾಂತ್ರಿಕ ತೊಂದರೆಯನ್ನು ನಿವಾರಿಸಿ ಕೂಡಲೇ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆ ಕೈಬಿಟ್ಟರು.

ಕೆರೆ ಒತ್ತುವರಿ ತೆರವುಗೊಳಿಸಲು ಆಗ್ರಹ
ಹೂವಿನಹಡಗಲಿ: ತಾಲ್ಲೂಕಿನ ಮುದೇನೂರು ಕೆರೆಯ ಬಹು ಭಾಗವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ಕೆರೆ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಬೇಕೆಂದು ನಂದಿಹಳ್ಳಿ ಮತ್ತು ಮುದೇನೂರು ಗ್ರಾಮಸ್ಥರು ಆಗ್ರಹಿಸಿದರು.

ಸೋಮವಾರ ಉಭಯ ಗ್ರಾಮಗಳ ರೈತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಕೆರೆ ಒತ್ತುವರಿ ಮಾಡಿಕೊಂಡು ಜಮೀನು ಸಾಗುವಳಿ ಮಾಡಿಕೊಂಡಿರುವ ಕೆಲವರು ಹಳ್ಳದ ಮೂಲಕ ನೈಸರ್ಗಿಕವಾಗಿ ಕೆರೆಗೆ ನೀರು ಹರಿದು ಬರುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿಯೂ ಕೆರೆ ತುಂಬಲಾರದ ಪರಿಸ್ಥಿತಿ ಬಂದಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.

ಮುದೇನೂರು ಕೆರೆ ತುಂಬಿದರೆ ಅಂತರ್ಜಲ ಅಭಿವೃದ್ಧಿಯಾಗಿ ಸುತ್ತಮುತ್ತಲಿನ ಎಲ್ಲ ಕೊಳವೆ ಬಾವಿಗಳು ಪುನಶ್ಚೇತನ ಕಾಣಲಿವೆ. ನಂದಿಹಳ್ಳಿ ಮತ್ತು ಮುದೇನೂರು ಗ್ರಾಮದ ಜನ, ಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಲಿದೆ.

ಕೆರೆ ಒತ್ತುವರಿ ಮಾಡಿಕೊಂಡು ಜಮೀನು ಸಾಗುವಳಿ ಮಾಡುತ್ತಿರುವ ಕೆಲವರು ಪ್ರಕೃತಿದತ್ತವಾಗಿ ಹಳ್ಳದ ನೀರು ಕೆರೆಗೆ ಹರಿಯುದಕ್ಕೆ ವಿರೋಧಿಸುತ್ತಿರುವುದರಿಂದ ಎರಡು ಗ್ರಾಮಗಳ ಜನರಿಗೆ ತೊಂದರೆಯಾಗುತ್ತದೆ. ಕೂಡಲೇ ಕೆರೆ ಒತ್ತುವರಿ ತೆರವುಗೊಳಿಸಿ ಕೆರೆ ತುಂಬಲು ಅಡ್ಡಿಪಡಿಸುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ವಿ.ಬಿ. ಮಲ್ಲಿಕೇಶಿ, ಕೊಟ್ರಯ್ಯ, ನಾಗರಾಜ, ಯಮನೂರ ಸ್ವಾಮಿ ಇತರರು ತಹಶೀಲ್ದಾರರನ್ನು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.