ಕಂಪ್ಲಿ: ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣಗಳು ನೈಸರ್ಗಿಕ ಪ್ರಕ್ರಿಯೆ ಗಳಾಗಿದ್ದು, ಅವುಗಳನ್ನು ಭಾವನಾತ್ಮಕ ವಾಗಿ ನೋಡದೆ ವೈಜ್ಞಾನಿಕ ಮನೋ ಭಾವದಿಂದ ನೋಡುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಶೇಖರ್ ಹೊರಪೇಟೆ ತಿಳಿಸಿದರು.

ಪತಂಜಲಿ ಯೋಗ ಸಮಿತಿ ಕಂಪ್ಲಿ ಘಟಕ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಪಟ್ಟಣದ ಹೊಸ ಮಠದಲ್ಲಿ ಮಹಿಳೆ ಮತ್ತು ವಿಜ್ಞಾನ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಮಹಿಳೆ ವೈಜ್ಞಾನಿಕ ಮನೋಭಾವ ರೂಢಿಸಿಕೊಂಡಲ್ಲಿ ಇಡೀ ಕುಟುಂಬ ವನ್ನೇ ವೈಜ್ಞಾನಿಕ ತಳಹದಿ ಮೇಲೆ ಕಟ್ಟಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.

ಆಯುಷ್ ವೈದ್ಯಾಧಿಕಾರಿ ಡಾ. ಸಂತೋಷ ತಾಡಪತ್ರಿ ಮಾತನಾಡಿ, ಮಕ್ಕಳಿಗೆ ಕುರುಕಲು ಆಹಾರ (ಜಂಕ್ ಫುಡ್) ನೀಡುವ ಬದಲು ಮನೆಯಲ್ಲಿ ತಾಯಂದಿರು ಪೌಷ್ಟಿಕ ಆಹಾರ ಸಿದ್ಧಪಡಿಸಿ ನೀಡುವುದು ಒಳ್ಳೆಯದು ಎಂದರು.

ಎಸ್.ಜಿ. ಚಿತ್ರಗಾರ ಕೌಟುಂಬಿಕ ದೌರ್ಜನ್ಯ ಕುರಿತು ಮಾತನಾಡಿದರು.

ಪುರಸಭೆ ಸದಸ್ಯ ಕೆ.ಎಂ. ಹೇಮಯ್ಯ ಸ್ವಾಮಿ ಕಾರ್ಯಾಗಾರ ಅಧ್ಯಕ್ಷತೆ ವಹಿಸಿದ್ದರು. ಪತಂಜಲಿ ಯೋಗ ಸಮಿತಿ ರಾಜ್ಯ ಮಹಿಳಾ ಪ್ರಭಾರಿ ಶಾಂತಾ ಕಾರ್ಯಾಗಾರ ಉದ್ಘಾಟಿಸಿದರು. ನಂತರ ಮಹಿಳೆ ಯರಿಗೆ ಯೋಗ ತರಬೇತಿ ನೀಡಲಾಯಿತು.

ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಟಿ. ಕೊಟ್ರೇಶ್, ಬಳ್ಳಾರಿ ಬಸಪ್ಪ, ಕರವೇ ಕಂಪ್ಲಿ ವಿಧಾನಸಭಾಕ್ಷೇತ್ರ ಅಧ್ಯಕ್ಷ ಎ. ರವೀಂದ್ರ ಹಾಜರಿದ್ದರು.

ಜಾಗೃತಿ ಕಾರ್ಯಕ್ರಮ
ಹೊಸಪೇಟೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಾಹಿನಿ ಸಂಸ್ಥೆ ತಾಲ್ಲೂಕಿನ 10 ಮುದ್ದಾಪುರ ದಲ್ಲಿ ಕೌಟುಂಬಿಕ ಮಹಿಳಾ ದೌರ್ಜನ್ಯ ಕುರಿತು ಒಂದು ದಿನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಂಗಳವಾರ ನಡೆಯಿತು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಸಹಾಯಕ ಯಮನೂರು ಕಾರ್ಯಕ್ರಮ ಉದ್ಘಾಟಿಸಿದರು.
ತಾಪಂ ಸದಸ್ಯ ಗಂಗಮ್ಮ, ವಾಹಿನಿ ಸಂಸ್ಥೆಯ ಶಿವಕುಮಾರ, ಇಲಾಖೆ ಮೇಲ್ವಚಾರಕಿ ನಾಗವೇಣಿ ಸೇರಿದಂತೆ ಇತರರು ಹಾಜರಿದ್ದರು. ಮಹಿಳೆಯ ಇಂದಿನ ಹಾಗೂ ಹಿಂದಿನ ಸ್ಥಿತಿಗತಿ ಮುಂದೆ ಆಗಬೇಕಾದ ಕ್ರಮಗಳ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.