ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೀರಶೈವ ಸಮಾಜಕ್ಕೆ ನಿವೇಶನ ನೀಡಲು ಕ್ರಮ: ಶಾಸಕ ಬಿ.ಶಿವಣ್ಣ

Published 13 ಆಗಸ್ಟ್ 2024, 15:38 IST
Last Updated 13 ಆಗಸ್ಟ್ 2024, 15:38 IST
ಅಕ್ಷರ ಗಾತ್ರ

ಆನೇಕಲ್ : ಪಟ್ಟಣದ ಶ್ರೀರಾಮ ಕುಟೀರದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಧರ್ಮಜಾಗೃತಿ ಸಮಾವೇಶ, ಪ್ರತಿಭಾ ಪುರಸ್ಕಾರ ಮತ್ತು ಆನೇಕಲ್‌ ಟೌನ್‌ ಶಾಖೆ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಶಾಸಕ ಬಿ.ಶಿವಣ್ಣ ಉದ್ಘಾಟಿಸಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುನಲ್ಲಿ ಶ್ರೇಷ್ಠ ದರ್ಜೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು.

ಶಾಸಕ ಬಿ.ಶಿವಣ್ಣ ಮಾತನಾಡಿ, ವೀರಶೈವ ಧರ್ಮದ ಮಠಗಳು ಸ್ವಾತಂತ್ರ್ಯ ಪೂರ್ವದಿಂದಲೂ ಶಿಕ್ಷಣ ಮತ್ತು ದಾಸೋಹ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿವೆ. ಸಾವಿರಾರು ಮಂದಿ ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಲು ದಾರಿ ತೋರಿವೆ. ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಜಾತಿ ಮತ ನಡುವೆ ತಾರತಮ್ಯ ಮಾಡದೆ ಎಲ್ಲ ಸಮಾಜದ ಜನರಿಗೂ ಶಿಕ್ಷಣ ನೀಡುವ ಮೂಲಕ ಅಕ್ಷರ ಕ್ರಾಂತಿ ಉಂಟು ಮಾಡಿದರು. ಈ ಪರಂಪರೆಯು ನಿರಂತರವಾಗಿ ನಡೆಯುವಂತಾಗಬೇಕು ಎಂದರು.

ವೀರಶೈವ ಲಿಂಗಾಯತ ಮಹಾಸಭಾ ಆನೇಕಲ್‌ ಶಾಖೆಯು ರಚನಾತ್ಮಕ ಕಾರ್ಯಕ್ರಮ ರೂಪಿಸಿರುವುದು ಅರ್ಥಪೂರ್ಣವಾಗಿದೆ. ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳಿಗೆ ಜವಾಬ್ದಾರಿ ಹೆಚ್ಚಿದೆ. ಗುರಿ ಸಾಧಿಸಬೇಕೆಂಬ ಛಲ ಮೂಡಿಸಬೇಕು. ಪಟ್ಟಣದಲ್ಲಿ ವೀರಶೈವ ಲಿಂಗಾಯತ ಮಹಾಸಭಾಗೆ ನಿವೇಶನ ನೀಡುವ ಸಂಬಂಧ ಪುರಸಭೆಯೊಂದಿಗೆ ಚರ್ಚಿಸಲಾಗುವುದು. ಪಟ್ಟಣದ ಪ್ರಮುಖ ವೃತ್ತವೊಂದಕ್ಕೆ ಬಸವೇಶ್ವರರ ಹೆಸರಿಡುವ ಸಂಬಂಧ ಪ್ರಕ್ರಿಯೆ ನಡೆಸಲಾಗುವುದು ಎಂದರು.

ರಾಜಾಪುರ ಸಂಸ್ಥಾನ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಧಾರ್ಮಿಕ ಕಾರ್ಯ ನಿರಂತರವಾಗಿ ನಡೆಯುವಂತಾಗಬೇಕು. ಮಕ್ಕಳಲ್ಲಿ ಸಂಸ್ಕಾರ ನೀಡಿ ವೀರಶೈವ ಪರಂಪರೆಯ ಸಿದ್ಧಾಂತ, ತತ್ವಗಳ ಅರಿವು ಮೂಡಿಸಬೇಕು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹೇಶ್‌, ಭಾರತಿ ವಿರೂಪಾಕ್ಷಯ್ಯ, ಕಾಂತರಾಜು, ಭಾರತಿ ಬಸವರಾಜು, ಇಂದಿರಾ ಶಿವಕುಮಾರ್, ಪುಷ್ಪರಾಜಶೇಖರ್‌ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು

ಗುಮ್ಮಳಾಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ನಾಗಲಾಪುರ ಮಠದ ತೇಜೇಶಲಿಂಗ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.ಎಸ್.ಬಸವರಾಜು, ಎಸ್‌ಎಸ್‌ಎನ್‌ ಪ್ರತಿಷ್ಠಾನದ ರಾಜಶೇಖರ್, ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್‌, ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಹಿನ್ನಕ್ಕಿ ಜಯಣ್ಣ, ಟೌನ್‌ ಅಧ್ಯಕ್ಷ ಎಸ್‌.ಆರ್‌.ಎಸ್.ಚಂದ್ರಶೇಖರ್, ಮುಖಂಡರಾದ ಕೆ.ಎಸ್‌.ನಟರಾಜ್‌, ಆರ್‌.ಎಸ್.ಪ್ರಕಾಶ್‌, ಬಿ.ಎಸ್‌.ನೀಲಕಂಠಯ್ಯ, ಎಚ್.ಎಸ್.ನಂಜಪ್ಪ, ಮಹೇಶ್‌, ಭಾರತಿ ವಿರೂಪಾಕ್ಷಯ್ಯ, ಮಮತ, ಪರಮಶಿವಯ್ಯ, ರಾಜಶೇಖರ್‌, ಬ್ಯಾಗಡದೇನಹಳ್ಳಿ ಶಿವಣ್ಣ, ಚಿಕ್ಕರೇವಣ್ಣ, ಕುಸುಮ ನಟರಾಜ್‌, ಅರುಣ್‌ ಆರಾಧ್ಯ, ನವಕುಮಾರ್, ಮಹದೇವ್‌, ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT