ಮಂಗಳವಾರ, ಆಗಸ್ಟ್ 16, 2022
29 °C

ನೀರಿನ ಮೂಲ ಸಂರಕ್ಷಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ಸ್ವಚ್ಛತೆ ಕಡೆಗೆ ಶಾಸಕರ ನಡಿಗೆ ಎಂಬ ಧ್ಯೇಯಂದಂತೆ ಪ್ರತಿ ತಿಂಗಳ ಮೊದಲನೇ ಭಾನುವಾರ ತಾಲ್ಲೂಕಿನಲ್ಲಿ ಎಸ್‌ಬಿಜಿ ತಂಡದಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಾ ಶರತ್ ಬಚ್ಚೇಗೌಡ ತಿಳಿಸಿದರು.

ತಾಲ್ಲೂಕಿನ ಜಡಗೇನಹಳ್ಳಿಯಲ್ಲಿ ಕರಗ ಪರಮೇಶ್ವರಿ ದೇವಾಲಯದ ಬಳಿ ಇರುವ ಕಲ್ಯಾಣಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಳೆ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರ ಸ್ಥಿತಿಗೆ ತಲುಪಲಿದೆ. ಇದಕ್ಕಾಗಿ ನದಿ ಮೂಲಗಳಿಲ್ಲದ ತಾಲ್ಲೂಕಿಗೆ ಕಲ್ಯಾಣಿ, ಕೆರೆ, ಕಾಲುವೆಗಳು ಪ್ರಮುಖ ಜಲಮೂಲಗಳಾಗಿವೆ ಎಂದರು.

ಈಗಾಗಲೇ ತಾಲ್ಲೂಕಿನಲ್ಲಿ ಹಲವು ಕಲ್ಯಾಣಿಗಳನ್ನು ಗುರುತಿಸಿ ಸ್ವಚ್ಛ ಮಾಡಲಾಗಿದೆ ಎಂದರು. 

ಎಸ್‌ಬಿಜಿ ತಂಡದ ಸದಸ್ಯ ಚಿಕ್ಕ ಅರಳಗೆರ ಮುನಿರಾಜು, ಜಿಲ್ಲಾ ಪಂಚಾಯತಿ ಸದಸ್ಯ ವೈ.ಎಸ್.ಎಂ. ಮಂಜುನಾಥ್, ಮುಖಂಡರಾದ ವಾಗಟ ನರೇಂದ್ರ, ಕರಿಬೀರನ ಹೊಸಹಳ್ಳಿ ಮಂಜುನಾಥ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು