ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ: ‘ಬೆಳ್ಳಿ ಸಂಭ್ರಮ ಗೌರವ’ ಪ್ರಶಸ್ತಿ ಪ್ರಕಟ

ವಿಜಯಪುರ
Published 23 ಜುಲೈ 2023, 21:02 IST
Last Updated 23 ಜುಲೈ 2023, 21:02 IST
ಅಕ್ಷರ ಗಾತ್ರ

ವಿಜಯಪುರ: ಇದೇ 29 ಮತ್ತು 30ರಂದು ವಿಜಯಪುರದಲ್ಲಿ ಆಯೋಜಿಸಿರುವ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ‘ಬೆಳ್ಳಿ ಸಂಭ್ರಮ ಗೌರವ’ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ 14 ಮಂದಿ ಸಾಧಕರು ಹಾಗೂ ‘ಬೆಳ್ಳಿ ಸಂಭ್ರಮ ಪುಸ್ತಕ’ ಪ್ರಶಸ್ತಿಗೆ 16 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ ತಿಳಿಸಿದರು. 

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಬುದ್ಧ ಭಾರತ’ ಎಂಬ ಆಶಯದಲ್ಲಿ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಎರಡು ದಿನ ನಡೆಯಲಿರುವ ಈ ಸಮ್ಮೇಳನದಲ್ಲಿ ವಿವಿಧ ಗೋಷ್ಠಿ, ಉಪನ್ಯಾಸ, ಸಂವಾದ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರು ಜುಲೈ 30ರಂದು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

‘ಬೆಳ್ಳಿ ಸಂಭ್ರಮ ಗೌರವ’ ಪ್ರಶಸ್ತಿ :  ಆರ್‌.ದೊಡ್ಡೇಗೌಡ, ಬೆಂಗಳೂರು (ಸಾಹಿತ್ಯ), ವೀರಹನುಮಾನ, ರಾಯಚೂರು (ಸಾಹಿತ್ಯ), ಶ್ರೀಶೈಲ ನಾಗರಾಳ, ಕಲಬುರಗಿ (ಸಾಹಿತ್ಯ), ಡಾ.ಗವಿಸಿದ್ದಪ್ಪ ಪಾಟೀಲ, ಹುಮನಾಬಾದ್‌ (ಸಾಹಿತ್ಯ), ಮುರ್ತುಜಾ ಬೇಗಂ ಕೊಡಗಲಿ ಇಳಕಲ್ಲ (ಸಾಹಿತ್ಯ), ಹಾರೋಹಳ್ಳಿ ರವೀಂದ್ರ ಮೈಸೂರು (ಸಾಹಿತ್ಯ), ಪರಶುರಾಮ ಶಿವಶರಣ, ವಿಜಯಪುರ (ಸಾಹಿತ್ಯ), ನರೇಂದ್ರ ನಾಗವಾಲ, ಮೈಸೂರು (ಸಮಾಜಸೇವೆ), ಮುಳ್ಳೂರ ಶಿವಮಲ್ಲು, ಚಾಮರಾಜನಗರ (ದಲಿತ ಚಳವಳಿ), ಡಾ.ಸಂಜೀವಕುಮಾರ ಮಾಲಗತ್ತಿ, ಧಾರವಾಡ (ಪತ್ರಿಕಾರಂಗ),‌ ರಾಜು ವಿಜಯಪುರ, ಹುಬ್ಬಳ್ಳಿ (ಪತ್ರಿಕಾರಂಗ), ಸೌಜನ್ಯ ಕರಡೋಣಿ, ಧಾರವಾಡ (ಚಿತ್ರಕಲೆ), ಸಿ.ಆರ್‌. ನಟರಾಜ ಕೋಲಾರ (ಸಂಗೀತ), ದೇವು ಕೆ. ಅಂಬಿಗ, ವಿಜಯಪುರ (ಸಿನಿಮಾ) ಆಯ್ಕೆ ಮಾಡಲಾಗಿದೆ.

‘ಬೆಳ್ಳಿ ಸಂಭ್ರಮ ಪುಸ್ತಕ’ ಪ್ರಶಸ್ತಿ: ಬಿದಲೋಟಿ ರಂಗನಾಥ್‌, ಡಾ.ಸದಾಶಿವ ದೊಡಮನಿ, ಡಾ.ಶಾಂತನಾಯ್ಕ ಶಿರಗಾನಹಳ್ಳಿ, ರೇಣುಕಾ ಹೆಳವರ, ಪಿ.ಆರಡಿ ಮಲ್ಲಯ್ಯ ಕಟ್ಟೇರ, ಡಾ.ಪ್ರಸನ್ನ ನಂಚಾಪುರ, ಡಾ.ಗಿರೀಶ ಮೂಗ್ತಿಹಳ್ಳಿ, ಪ್ರಭುಲಿಂಗ ನೀಲೂರೆ, ಗೌಡಗೆರೆ ಮಾಯುಶ್ರೀ, ಡಾ.ಎಚ್‌.ಡಿ. ಉಮಾಶಂಕರ, ಸೋಮಲಿಂಗ ಗೆಣ್ಣೂರ, ಡಾ.ಎಂ.ಬಿ.ಕಟ್ಟಿ, ಡಾ.ಹೊಂಬಯ್ಯ ಹೊನ್ನಲಗೆರೆ, ಡಾ.ಅಮರೇಶ ಯತಗಲ್‌, ಡಾ.ಪೂರ್ಣಿಮಾ ಧಾಮಣ್ಣವರ, ರಾಯಸಾಬ ದರ್ಗಾದವರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

‘ದಲಿತ ಸಾಹಿತ್ಯ ಪರಿಷತ್ತು ಅತ್ಯುತ್ತಮ ಸಂಘಟಕ ಸಾಧಕಶ್ರೀ ಪ್ರಶಸ್ತಿ’ಯನ್ನು ಪರಿಷತ್‌ ವಿಭಾಗೀಯ ಸಂಯೋಜಕ ಗಣಪತಿ ಚಲವಾದಿ, ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ತಾಯರಾಜ್‌ ಮರ್ಚಟಹಾಳ, ಸಿಂಧನೂರು ತಾಲ್ಲೂಕು ಅಧ್ಯಕ್ಷ ಹುಸೇನಪ್ಪ ಅಮರಾಪುರ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT