ಆನೇಕಲ್ : ದೆಹಲಿ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಸ್ಮಾರಕ ಮಾದರಿಯಲ್ಲಿ ದೇವರಕೊಂಡಪ್ಪ ವೃತ್ತದ ಸಮೀಪ ಅಮರ್ ಜವಾನ್ ಸ್ಮಾರಕ ನಿರ್ಮಿಸಲಾಗಿದೆ. ಭಾನುವಾರ ಉದ್ಘಾಟನೆಗೊಳ್ಳಲಿದೆ ಎಂದು ಸ್ಮಾರಕ ಸಮಿತಿ ಅಧ್ಯಕ್ಷ ಗಣೇಶ್ ಕುಮಾರ್ ತಿಳಿಸಿದರು.

ದೇಶಕ್ಕಾಗಿ ಹಗಲಿರುಳೆನ್ನದೇ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡುತ್ತಿರುವ ಸೈನಿಕರ ತ್ಯಾಗ ಮತ್ತು ಸೇವೆ ಶಾಶ್ವತವಾಗಿ ಸ್ಮರಿಸುವ ನಿಟ್ಟಿನಲ್ಲಿ ಅಮರ್ ಜವಾನ್ ಸ್ಮಾರಕ ನಿರ್ಮಾಣ ಮಾಡುವ ತೀರ್ಮಾನ ಕೈಗೊಂಡು ಜಾಗೃತ ಯುವ ಭಾರತ ಸಂಘಟನೆ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ಸ್ಮಾರಕ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು, ಯುವಕರಲ್ಲಿ ಸೈನಿಕರ ಬಗ್ಗೆ ಗೌರವ ಮೂಡಿಸಲು ಮತ್ತು ಸೈನ್ಯಕ್ಕೆ ಸೇರಲು ಸ್ಪೂರ್ತಿ ನೀಡುವ ಸಲುವಾಗಿ ಅಮರ್ ಜವಾನ್ ಸ್ಮಾರಕ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ, ಅಮರ್ ಜವಾನ್ ಸ್ಮಾರಕ ಉದ್ಘಾಟಿಸುವರು. ಶಾಸಕ ಬಿ.ಶಿವಣ್ಣ, ಸಂಸದರಾದ ಡಿ.ಕೆ.ಸುರೇಶ್, ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಪುರಸಭಾ ಅಧ್ಯಕ್ಷ ಎನ್.ಎಸ್.ಪದ್ಮನಾಭ, ರಾಜಾಪುರ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಆನೇಕಲ್‌ನ ಮೌಲಾನ ಮಹಮದ್ ಮನ್ಸೂರ್ ಆಲಿ ರಶದಿ, ಫಾದರ್ ಐವಾನ್ ಮೆಂಡೋನ್ಸಾ ಪಾಲ್ಗೊಳ್ಳಲಿದ್ದಾರೆ.

ಸ್ಮಾರಕ ಉದ್ಘಾಟನೆ ಅಂಗವಾಗಿ ರಾಜೇಶ್, ಗೌರೀಶಾಚಾರ್ ಮತ್ತು ಸಂಗಡಿಗರಿಂದ ದೇಶಭಕ್ತಿಗೀತೆಗಳ ಗಾಯನ, ಡೀ ಡಾನ್ಸ್ ಖ್ಯಾತಿ ಮಾಸ್ಟರ್ ಜಗದೀಶ್ ತಂಡದಿಂದ ದೇಶಭಕ್ತಿ ನೃತ್ಯ, ನಿವೃತ್ತ ಸೈನಿಕರಿಂದ ಕವಾಯತು, ನಿವೃತ್ತ ಸೈನಿಕರಿಗೆ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.