ಆನೇಕಲ್ : ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಸೂರು ಮಡಿವಾಳ ಗ್ರಾಮವನ್ನು ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ‘ಗ್ರೀನ್ ವಿಲೇಜ್’ ಪ್ರಶಸ್ತಿ ನೀಡಿ ಗೌರವಸಿದೆ.

ಪ್ರಶಸ್ತಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ ನಾರಾಯಣರೆಡ್ಡಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿ ಅವರಿಗೆ ಸೋಮವಾರ ಹಸ್ತಾಂತರಿಸಲಾಯಿತು.

ಮರಸೂರು ಮಡಿವಾಳ ಗ್ರಾಮವನ್ನು ಆದಿತ್ಯಾ ಬಿರ್ಲಾ ಜನಕಲ್ಯಾಣ ಸ್ವಯಂ ಸೇವಾ ಸಂಸ್ಥೆ ದತ್ತು ಪಡೆದು ಗಿಡಗಳನ್ನು ನೆಟ್ಟು ಪೋಷಿಸುತ್ತಿದೆ. ಸೋಲಾರ್ ಬೀದಿ ದೀಪಗಳನ್ನು ಅಳವಡಿಕೆ, ಕೆರೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಪರಿಸರ ಸಂರಕ್ಷಣಾ ಕಾರ್ಯಕ್ರಮ ರೂಪಿಸಿದೆ.

ಗ್ರಾಮ ಪಂಚಾಯಿತಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಸೇರಿದಂತೆ ಪರಿಸರ ಸ್ನೇಹಿ ಕ್ರಮ ವಹಿಸಿರುವುದರಿಂದ ಗ್ರೀನ್ ವಿಲೇಜ್ ಪ್ರಶಸ್ತಿ ದೊರೆತಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಾಪುರ ರಾಮಚಂದ್ರ, ಪಂಚಾಯಿತಿ ಅಧ್ಯಕ್ಷೆ ಮಂಜುಳ ನಾರಾಯಣರೆಡ್ಡಿ, ಉಪಾಧ್ಯಕ್ಷೆ ಚಂದ್ರಕಲಾ, ಮಾಜಿ ಅಧ್ಯಕ್ಷರಾದ ಪ್ರಭಾಕರರೆಡ್ಡಿ, ರಮೇಶ್ ರೆಡ್ಡಿ, ಮಂಜುಳ ಸೋಮಶೇಖರ್, ಸದಸ್ಯರಾದ ಮುನಿಯಮ್ಮ, ನಿರ್ಮಲ, ಆದಿತ್ಯಾ ಬಿರ್ಲಾ ಗ್ರೂಪ್ನ ಮಾನವ ಸಂಪನ್ಮೂಲ ಅಧಿಕಾರಿ ಲಕ್ಷ್ಮೀನಾರಾಯಣ್, ತಾಂತ್ರಿಕ ಅಧಿಕಾರಿ ಸೋಮಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.