ಆನೇಕಲ್: ಇಲ್ಲಿನ ಶ್ರೀರಾಮ ಕುಟೀರದಲ್ಲಿ ಸಂಪೂರ್ಣ ಮಹಿಳೆಯರೇ ಅಭಿನಯಿಸಿದ ‘ಸೀತಾಪಹರಣ’ ನಾಟಕ ಗಮನ ಸೆಳೆಯಿತು. ಒಂದೇ ಕುಟುಂಬ ಹತ್ತು ಸದಸ್ಯರು ಬಣ್ಣ ಹಚ್ಚಿದ್ದು ವಿಶೇಷವಾಗಿತು.

ಮೆಣಸಿನಹಳ್ಳಿಯ ಬಸವೇಶ್ವರ ಕಲಾ ಮಂಡಳಿ ಸೀತಾಪಹರಣ ನಾಟಕ ಪ್ರದರ್ಶನ ಏರ್ಪಡಿಸಿತ್ತು. ಪುರಸಭೆ ಸದಸ್ಯೆ, ಶಿಕ್ಷಕಿ, ಟೆಕಿ, ವಿದ್ಯಾರ್ಥಿಗಳು ಮತ್ತು ಗೃಹಿಣಿರು ಸೇರಿದಂತೆ ಹಲವು ವೃತ್ತಿಯಲ್ಲಿರುವ ಮಹಿಳೆಯರು ಮೊದಲ ಬಾರಿಗೆ ಬಣ್ಣ ಹಚ್ಚಿದರೂ ಪಾತ್ರಗಳಿಗೆ ಕುಂದು ಬಾರದಂತೆ ನಟಿಸಿ ಪ್ರೇಕ್ಷಕರಿಂದ ಚಪ್ಪಳೆ ಗಿಟ್ಟಿಸಿಕೊಂಡರು.

ಎಂ.ಚಂದ್ರಪ್ಪ ಮತ್ತು ಎಂ.ಸಿ.ಯೋಗನಂದೀಶ್ ಆರಾಧ್ಯ ಅವರ ನಿರ್ದೇಶನದಲ್ಲಿ ಮೂಡಿ ಬಂದ ನಾಟಕದಲ್ಲಿ ದಶರಥನಾಗಿ ಪಲ್ಲವಿ ಸಂದೇಶ್, ಶ್ರೀರಾಮನಾಗಿ ಚೈತ್ರ ಭರತ್, ಲಕ್ಷ್ಮಣನಾಗಿ ಮಂಜುಳ ಮಂಜುನಾಥ್, ಭರತನಾಗಿ ಭಾರತಿ ಬಸವರಾಜು, ಶತೃಘ್ನನಾಗಿ ಭಾರ್ಗವಿ ಮಂಜುನಾಥ್, ರಾವಣನಾಗಿ ರೇಣುಕಾ ಕುಮಾರ್, ಕೈಕೆಯಾಗಿ ಸಹನ ಸಂತೋಷ್, ಸೀತೆಯಾಗಿ ಪ್ರಶಾಂತಿ ವಿನೋಧ್ ಕುಮಾರ್, ಕಲಹಂಸಿಕೆಯಾಗಿ ಧನ್ಯ, ಸಖಿಯಾರಗಿ ಪೂರ್ಣಶ್ರೀ, ಕೃತಿ, ಗುಹ ಮತ್ತು ಜಟಾಯು ಆಗಿ ದೀಪಕ್ ಜೀವ ತುಂಬಿದರು.

ಪ್ಪಾಳೆ ಮತ್ತು ಶಿಳ್ಳೆಗಳ ಸದ್ದಿನೊಂದಿಗೆ ಕಲಾವಿದರು ಪಾತ್ರವನ್ನು ಅಭಿನಯಿಸಿದರು. ಗುಹ ಪಾತ್ರವನ್ನು ಹೊರತು ಪಡಿಸಿ ಎಲ್ಲಾ ಪಾತ್ರಗಳಲ್ಲಿ ಮಹಿಳೆಯರು ಅಭಿನಯಿಸಿ ನೋಡುಗರ ಮನಗೆದ್ದರು. ನಿದೇಶಕ ಆನೇಕಲ್ಎಂ.ಚಂದ್ರಪ್ಪ ಮತ್ತು ಕುಟುಂಬದ 10ಕ್ಕೂ ಹೆಚ್ಚು ಸದಸ್ಯರು ನಾಟಕದಲ್ಲಿ ಕಾಣಿಸಿಕೊಂಡರು.

ಪೌರಾಣಿಕ ನಾಟಕಗಳು ಎಂದರೆ ಪುರುಷ ಪ್ರಧಾನ ಪಾತ್ರಗಳೇ ಹೆಚ್ಚಿರುತ್ತವೆ. ಆದರೆ ಮಹಿಳೆಯರಲ್ಲಿನ ನಾಟಕ ಕಲೆಯನ್ನು ಸಮಾಜಕ್ಕೆ ಪರಿಚಯಿಸಲು ಸೀತಾಪಹರಣ ನಾಟಕವನ್ನು ಮಹಿಳೇಯರೇ ಪ್ರದರ್ಶನ ಮಾಡಿದ್ದಾರೆ. ಇದಕ್ಕಾಗಿ 15 ದಿನಗಳಿಗೂ ಹೆಚ್ಚು ಕಾಲ ತಾಲೀಮು ನಡೆಸಲಾಗಿತು. ರಾಮ, ರಾವಣರ ಪಾತ್ರಗೂ ಮಹಿಳಾ ಪಾತ್ರಧಾರಿಗಳೇ ಜೀವ ತುಂಬಿದ್ದು ವಿಶೇಷವಾಗಿತ್ತು ಎಂದು ನಾಟಕದ ನಿರ್ದೇಶಕ ಎಂ.ಚಂದ್ರಪ್ಪ ತಿಳಿಸಿದರು.

‘ಮನೆಯ ಕೆಲಸಗಳನ್ನು ನಿಭಾಯಿಸಿಕೊಂಡು ಕಳೆದ 15 ದಿನಗಳಿಂದಲೂ ನಾಟಕ ಅಭ್ಯಾಸ ಮಾಡಿದ್ದೇವು. ನಾಟಕ ಪ್ರದರ್ಶನ ಯಶಸ್ವಿಯಾಗಿರುವುದು ಖುಷಿ ತಂದಿದೆ’ ಎಂದು ಭರತ ಪಾತ್ರಧಾರಿಯಾಗಿದ್ದ ಚಂದಾಪುರ ಪುರಸಭೆ ಸದಸ್ಯೆ ಭಾರತಿ ಬಸವರಾಜು ಸಂತಸ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.