ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆ ಆರ್ಥಿಕತೆಗೆ ಬುನಾದಿ: ನಿಸರ್ಗ ನಾರಾಯಣಸ್ವಾಮಿ

ಕ್ಷೀರ ಉತ್ಪಾದನೆಯಲ್ಲಿ ತಾಲ್ಲೂಕು ಮುಂಚೂಣಿ: ನಿಸರ್ಗ ನಾರಾಯಣಸ್ವಾಮಿ
Last Updated 8 ಫೆಬ್ರುವರಿ 2021, 1:03 IST
ಅಕ್ಷರ ಗಾತ್ರ

ದೇವನಹಳ್ಳಿ: ಶ್ರಮಪಟ್ಟು ಕೃಷಿ ಮತ್ತು ಪಶುಪಾಲನೆಯಲ್ಲಿ ಒಂದಿಷ್ಟು ಹಣ ಗಳಿಸಿ ಮಕ್ಕಳ ಶೈಕ್ಷಣಿಕ ‌ಅಭ್ಯುದ
ಯಕ್ಕೆ ಶ್ರಮಿಸಬೇಕು. ಮಕ್ಕಳು ಕೂಡ ‍ಪೋಷಕರ ನಿರೀಕ್ಷೆ ಹುಸಿ ಮಾಡಬಾರದು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ನಗರೇಶ್ವರ ಕಲ್ಯಾಣ ಮಂದಿರದಲ್ಲಿ ಭಾನುವಾರ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕ್ಷೀರ ಉತ್ಪಾದನೆಯಲ್ಲಿ ತಾಲ್ಲೂಕು ಮುಂಚೂಣಿಯಲ್ಲಿದೆ. ಇನ್ನಷ್ಟು ಉತ್ಪಾದನೆಯಲ್ಲಿ ಹೆಚ್ಚಳವಾಗಬೇಕೆ ಹೊರತು ಕ್ಷೀಣವಾಗಬಾರದು. ಕೊರೊನಾ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಚೇತನ ನೀಡಿರುವುದು ಹಾಲು ಉತ್ಪಾ
ದನೆ ಎಂಬುದನ್ನು ಮರೆಯಬಾರದು. ಬಮೂಲ್ ಒಕ್ಕೂಟ ಪಶು ಪಾಲಕರಿಗೆ ಮತ್ತಷ್ಟು ಆರ್ಥಿಕ ಚೇತರಿಕೆಯಾಗುವ ಪ್ರೋತ್ಸಾಹ
ದಾಯಕ ಯೋಜನೆ ನೀಡಬೇಕು ಎಂದು ಹೇಳಿದರು.

ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಸ್ವಾಮಿ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘ ಸಿಬ್ಬಂದಿ ಕಾಳಜಿಯಿಂದ ಒಕ್ಕೂಟ ಬೆಳವಣಿಗೆಗೆ ಕಾರಣವಾಗಿದೆ. ಗುಣಮಟ್ಟದಲ್ಲಿ ಕಳಪೆ ಇಲ್ಲ. ಹಾಲಿನ ಕೊಬ್ಬಿನಾಂಶ ಶೇ8.5ರ ಆಸುಪಾಸು ಇದೆ. ಒಕ್ಕೂಟ ನೌಕರರು ಮತ್ತು ಪಶುಪಾಲಕರ ಹಿತದೃಷ್ಟಿಕೊಂಡು ಒಕ್ಕೂಟ ಕೆಲಸ ಮಾಡುತ್ತಿದ್ದು ಕನಕಪುರದಲ್ಲಿ ಈಗಾಗಲೇ ₹600 ಕೋಟಿ ವೆಚ್ಚದಲ್ಲಿ ಶೀಥಲಿಕರಣ ಘಟಕ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆ ಘಟಕ ಕಾರ್ಯಾರಂಭ ಮಾಡಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿ ಮಾತನಾಡಿ, ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ಯಾವುದೇ ಕಾರಣಕ್ಕೂ ಮೊಟಕೊಗೊಳಿಸುವ ಪ್ರಯತ್ನ ಮಾಡಬಾರದು. ನೌಕರರ ಸಂಘ ಮತ್ತು ಒಕ್ಕೂಟ ನೀಡುತ್ತಿರುವ ಸೌಲಭ್ಯ ಸದ್ಬಳಕೆಯಾಗಬೇಕು ಎಂದರು.

ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ಮಾತನಾಡಿ, ಶ್ರಮಜೀವಿಗಳಾದ ಹಾಲು ಉತ್ಪಾದಕರು ತಮ್ಮ ಮಕ್ಕಳನ್ನು ಶಿಕ್ಷಣದ ಮೂಲಕ ಆಸ್ತಿಯನ್ನಾಗಿಸಬೇಕು ಎಂದರು.

ಬಮೂಲ್ ನಿರ್ದೇಶಕ ಮಂಜುನಾಥ್, ಬಿ.ಶ್ರೀನಿವಾಸ್, ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಲೋಕೇಶ್ ಸಂಘದ ವಾರ್ಷಿಕ ಆಯವ್ಯಯ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಎ.ಸಿ.ನಾಗರಾಜ್, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮುನಿರಾಜು, ಖಾದಿ ಬೋರ್ಡ್ ಅಧ್ಯಕ್ಷ ನಾಗೇಗೌಡ, ಬಮೂಲ್ ಮಾಜಿ ನಿರ್ದೇಶಕ ಸೊಮಣ್ಣ, ಪ್ರಧಾನ ವ್ಯವಸ್ಥಾಪಕ ಡಾ.ಜಗದೀಶ್, ಉಪವ್ಯವಸ್ಥಾಪಕ ಡಾ.ಗಂಗಯ್ಯ, ಸಂಘದ ಅಧ್ಯಕ್ಷ ಎಚ್. ಚನ್ನಕೇಶವ, ಖಜಾಂಚಿ ಎನ್ ರಮೇಶ್, ಸಂಘಟನಾ ಕಾರ್ಯದರ್ಶಿಗಳಾದ ಬಿ.ರಾಜಣ್ಣ, ವಿಜಯಕುಮಾರ್, ನಿರ್ದೇಶಕರಾದ ಮುನೇಗೌಡ, ಮುನಿರಾಜು, ಮುನಿಕೃಷ್ಣ, ಜಯರಾಮಯ್ಯ, ನಾರಾಯಣಸ್ವಾಮಿ, ಅಶ್ವಥನಾರಾಯಣಸ್ವಾಮಿ, ಮಂಜುನಾಥ್, ಕೆ.ಸಿ. ಉಮಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT