ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಬರಹ, ಭಾಷಣಕ್ಕೆ ಆಡಿಯೊ ರೂಪ: ಇದೇ 19ರಂದು ಧ್ವನಿ ಸುರುಳಿ ಬಿಡುಗಡೆ

ಇದೇ 19ಕ್ಕೆ ಕೋಲಾರದ ಮಾಲೂರಿನಲ್ಲಿ ಬಿಡುಗಡೆ
Last Updated 16 ಫೆಬ್ರವರಿ 2023, 5:47 IST
ಅಕ್ಷರ ಗಾತ್ರ

ಹೊಸಕೋಟೆ: ‘ಡಾ.ಬಿ.ಆರ್. ಅಂಬೇಡ್ಕರ್‌ ಅವರ ಜೀವನಾಧಾರಿತವಾದ ಚಿಂತನೆಗಳು ಹಾಗೂ ಬರಹಗಳನ್ನು ಒಳಗೊಂಡ ಧ್ವನಿ ಸುರುಳಿಯನ್ನು ಇದೇ 19ರಂದು ಕೋಲಾರ ಜಿಲ್ಲೆಯ ಮಾಲೂರಿನ ಹೊರಾಂಗಣ ಕ್ರೀಡಾಂಗಣದಲ್ಲಿ ಬಿಡುಗಡೆ ಮಾಡಲಾಗುತ್ತದೆ’ ಎಂದು ದಲಿತ ಯುವ ಮುಖಂಡ ಆನಂದ್ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಧುನಿಕ ಪ್ರಪಂಚದಲ್ಲಿ ಪುಸ್ತಕ ಓದಿಗೆ ಜನರು ಹೆಚ್ಚು ಗಮನ ಹರಿಸುತ್ತಿಲ್ಲ. ಡಿಜಿಟಲ್‌ ಮಾಧ್ಯಮದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಬರಹಗಳು ಮತ್ತು ವಿವಿಧ ವೇದಿಕೆಯಲ್ಲಿ ಮಾಡಿರುವ ಭಾಷಣಗಳನ್ನು ಜನರಿಗೆ ಒದಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಅವರ ಲಕ್ಷಾಂತರ ಲೇಖನಗಳು ಇಂದಿನ ಯುವಜನತೆ ಅರಿತುಕೊಳ್ಳುವ ಅಗತ್ಯತೆ ಇದೆ. ಅದಕ್ಕಾಗಿ ಮಾಹಿತಿ ಕ್ರೋಢಿಕರಿಸಿ, ಅವುಗಳ ಧ್ವನಿ ಸುರಳಿ ಮಾಡಲಾಗಿದೆ. ಬಿಡುವಿನ ವೇಳೆ ಅದನ್ನು ಕೇಳುವಂತೆ ವಿನ್ಯಾಸ ಮಾಡಲಾಗಿದೆ ಎಂದರು.

ಇಡೀ ಪ್ರಪಂಚದಲ್ಲಿ ಅಂಬೇಡ್ಕರ್‌ ಅವರ ಬರಹ, ಲೇಖನ, ಭಾಷಣಗಳ ಸಂಗ್ರಹ ಭಾಗ ಆಡಿಯೊ ರೂಪದಲ್ಲಿ ಮೊಟ್ಟ ಮೊದಲ ಬಾರಿಗೆ ಪರಿಚಯ ಮಾಡಲಾಗುತ್ತಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT