ದೊಡ್ಡಬಳ್ಳಾಪುರ: ಗಾಳಿ, ಮಳೆಗೆ ಮುರಿದ ಬಾಳೆಗಿಡಗಳು

ಸೋಮವಾರ, ಮೇ 27, 2019
27 °C

ದೊಡ್ಡಬಳ್ಳಾಪುರ: ಗಾಳಿ, ಮಳೆಗೆ ಮುರಿದ ಬಾಳೆಗಿಡಗಳು

Published:
Updated:
Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿ ಮಳೆಗೆ ನೆರಳೆಘಟ್ಟ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಬಾಳೆಗಿಡಗಳು ಮುರಿದುಬಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

‘ಎರಡೂವರೆ ಎಕರೆ ಪ್ರದೆಶದಲ್ಲಿ ಬೆಳೆದಿದ್ದ ಏಲಕ್ಕಿ ಬಾಳೆ ಗೊನೆಗಳು ಇನ್ನು ಒಂದೆರಡು ತಿಂಗಳಲ್ಲಿ ಕಟಾವು ಮಾಡುವ ಹಂತಕ್ಕೆ ಬೆಳೆದು ನಿಂತಿದ್ದವು. ಬಾಳೆ ಗಿಡ ಬೆಳೆಯಲು ಬ್ಯಾಂಕಿನಿಂದ ₹4 ಲಕ್ಷಗಳಷ್ಟು ಸಾಲ ಮಾಡಲಾಗಿತ್ತು’ ಎಂದು ಆಳಲು ತೋಡಿಕೊಂಡವರು ರೈತ ಬೈರೇಗೌಡ.

‘ಗಾಳಿ, ಮಳೆಗೆ ಇಡೀ ತೋಟದಲ್ಲಿನ ಬಾಳೆಗಿಡಗಳೆಲ್ವು ನೆಲಕ್ಕೆ ಉರುಳಿ ಬಿದ್ದಿವೆ. ‘ಬ್ಯಾಂಕಿನಿಂದ ಪಡೆದಿದ್ದ ಸಾಲದ ಹಣವನ್ನೆಲ್ಲವು ಬಾಳೆಗಿಡ ಬೆಳೆಯಲು ತೊಡಗಿಸಲಾಗಿತ್ತು. ಈಗ ನೋಡಿದರೆ ಕೈಗೆ ಬಂದ ಫಸಲು ನೆಲಕಚ್ಚಿದೆ. ಬ್ಯಾಂಕಿನಿಂದ ಪಡೆದಿರುವ ಸಾಲವನ್ನು ಹೇಗೆ ತೀರಿಸುವುದು ಎನ್ನುವುದೇ ದೊಡ್ಡ ಚಿಂತೆಯಾಗಿದೆ’ ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !