ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣಗುಡುತ್ತಿದ್ದ ಬನ್ನೇರುಘಟ್ಟ ಉದ್ಯಾನ

ಕೇವಲ 1,750 ಜನರ ಭೇಟಿ– ವೃತ್ತದಲ್ಲಿ ಕಾಂಗ್ರೆಸ್‌ ಮಾನವ ಸರಪಳಿ
Last Updated 10 ಸೆಪ್ಟೆಂಬರ್ 2018, 19:40 IST
ಅಕ್ಷರ ಗಾತ್ರ

ಆನೇಕಲ್: ಬಂದ್‌ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನ ಬಿಕೋ ಎನ್ನುತ್ತಿತ್ತು. ಸದಾ ಜನರಿಂದ ತುಂಬಿರುತ್ತಿದ್ದ ಪ್ರವೇಶ ಕೌಂಟರ್‌ಗಳು ಖಾಲಿಯಾಗಿದ್ದವು.

ಜೈವಿಕ ಉದ್ಯಾನದ ಆರು ವಾಹನಗಳು ಹಾಗೂ ಕೆಎಸ್‌ಟಿಡಿಸಿಯ 23 ವಾಹನಗಳು ಸೇರಿದಂತೆ ಸಫಾರಿಗೆ ಕೊಂಡೊಯ್ಯಲು 29 ವಾಹನಗಳಿವೆ. ಆದರೆ ಸೋಮವಾರ ಬೆಳಗ್ಗೆ 11 ಗಂಟೆಯಾಗಿದ್ದರೂ ಯಾವುದೇ ವಾಹನಗಳು ಸಫಾರಿಗೆ ತೆರಳಲಿಲ್ಲ. ಮಧ್ಯಾಹ್ನದ ನಂತರ ಜನ ಉದ್ಯಾನಕ್ಕೆ ಬಂದರು. ಸೋಮವಾರ 1,750 ಮಂದಿ ಉದ್ಯಾನಕ್ಕೆ ಭೇಟಿ ನೀಡಿದ್ದರು ಎಂದು ಉದ್ಯಾನದ ಮೂಲಗಳು ತಿಳಿಸಿವೆ.

ತೈಲ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬನ್ನೇರುಘಟ್ಟ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಬಿಜೆಪಿ ಸರ್ಕಾರದ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಟೈರುಗಳನ್ನು ಸುಟ್ಟರು. ಭೂತ ದಹನ ಹಾಗೂ ರಸ್ತೆಯಲ್ಲಿ ಸಿಲಿಂಡರ್ ಇಟ್ಟು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಅತ್ತಿಬೆಲೆಯಲ್ಲಿ ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ಮಂಜುನಾಥ ದೇವ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT