ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ | ಹಣಕ್ಕಾಗಿ ಸ್ನೇಹಿತನನ್ನೇ ಕೊಲೆಗೈದ ಟ್ಯಾಕ್ಸಿ ಚಾಲಕ

Published 10 ಜುಲೈ 2024, 14:35 IST
Last Updated 10 ಜುಲೈ 2024, 14:35 IST
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟ್ಯಾಕ್ಸಿಗಳ ನಿಲ್ದಾಣ ಪಿ–7ನಲ್ಲಿ ಮಂಗಳವಾರ ತಡರಾತ್ರಿ ಕೆಎಸ್‌ಟಿಡಿಸಿ ಟ್ಯಾಕ್ಸಿ ಚಾಲಕನನ್ನು ಚೂಪದ ಕೀ ಮಾದರಿಯ ವಸ್ತು ಚುಚ್ಚಿ ಕೊಲೆ ಮಾಡಲಾಗಿದೆ.

ಮೃತನನ್ನು ದೇವನಹಳ್ಳಿಯ ರಾಮುಹಳ್ಳಿ ನಿವಾಸಿ ಲೋಕೇಶ್‌ (35) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ಕನಕಪುರದ ಟ್ಯಾಕ್ಸಿ ಚಾಲಕ ಮುತ್ತುರಾಜು ಎನ್ನಲಾಗಿದೆ.

ಇಬ್ಬರೂ ಸ್ನೇಹಿತರಾಗಿದ್ದು, ಲೋಕೇಶ್ ಅವರಿಂದ ಮುತ್ತುರಾಜ್ ಹಣ ಪಡೆದಿದ್ದರು ಎನ್ನಲಾಗಿದೆ. ಮಂಗಳವಾರ ತಡರಾತ್ರಿ ಕೆಎ 05 ಎಜೆ 4094 ಸಂಖ್ಯೆ ಟ್ಯಾಕ್ಸಿಯಲ್ಲಿ ಕುಳಿತು ಹಣ ವಾಪಸ್ ವಿಚಾರ ಮಾತನಾಡುತ್ತಿದ್ದರು. ಈ ವೇಳೆ ಮಾತು ವಿಕೋಪಕ್ಕೆ ತಿರುಗಿ, ಮುತ್ತುರಾಜ್ ತಮ್ಮ ಕೈಯಲ್ಲಿದ್ದ  ಕೀ ಮಾದರಿಯ ಚೂಪಾದ ವಸ್ತುವನ್ನು ಎದೆಯ ಭಾಗಕ್ಕೆ ಜೋರಾಗಿ ಚುಚ್ಚಿದ ಪರಿಣಾಮ ಲೋಕೇಶ್‌ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ಪ್ರಕರಣ ಕುರಿತಂತೆ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೂರು ದಾಖಲಾಗಿದೆ. ಏರ್‌ಪೋರ್ಟ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT