ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಕೊರೊನಾ ತಡೆಗೆ ಮುಂಜಾಗ್ರತೆ ವಹಿಸಿ -ಪ್ರಾಧ್ಯಾಪಕ ಸುನಿಲ್‌ಕುಮಾರ್

ದೇವರಾಜ ಅರಸ್‌ ವ್ಯವಹಾರ ನಿರ್ವಹಣಾ ಕಾಲೇಜಿನಲ್ಲಿ ಉಪನ್ಯಾಸ
Last Updated 18 ಮಾರ್ಚ್ 2021, 3:42 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಧನಾತ್ಮಕ ಚಿಂತನೆಯಿಂದ ವ್ಯಕ್ತಿತ್ವ ವಿಕಸನದ ಜತೆಗೆ ಗುರಿ ಸಾಧನೆ ಸಾಧ್ಯ. ಇಂತಹ ಆಲೋಚನೆಯಿಂದ ಕೊರೊನಾದಂತಹ ಮಹಾಮಾರಿಯನ್ನು ಗೆಲ್ಲುವ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ಆರ್.ಎಲ್. ಜಾಲಪ್ಪ ತಾಂತ್ರಿಕ ಮಹಾವಿದ್ಯಾಲದ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ. ಸುನಿಲ್‌ಕುಮಾರ್ ಹೇಳಿದರು.

ನಗರದ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯೂತ್‌ ರೆಡ್‌ಕ್ರಾಸ್‌ ಘಟಕದ ಸಹಯೋಗದಲ್ಲಿ ಬುಧವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೋವಿಡ್ ನಿರ್ವಹಣೆಯಲ್ಲಿ ಯುವಜನರ ಪಾತ್ರ’ ಕುರಿತು ಮಾತನಾಡಿದರು.

ಕೊರೊನಾ ಕಾಲಘಟ್ಟವು ಮನುಷ್ಯರಲ್ಲಿ ಹಲವು ಶಿಸ್ತುಗಳನ್ನು ರೂಢಿಸಿಕೊಳ್ಳುವಂತೆ ಮಾಡಿದೆ. ಸ್ವಚ್ಛತೆ ಮತ್ತು ವ್ಯಕ್ತಿಗತ ಅಂತರದ ಮಹತ್ವ ಸಾರಿದೆ. ರೋಗ ನಿರೋಧಕ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಪ್ರಚುರಪಡಿಸಿದೆ. ಹಲವು ದೃಷ್ಟಿಕೋನಗಳಲ್ಲಿ ಇದು ಭವಿಷ್ಯವನ್ನು ಉತ್ತಮಗೊಳಿಸುವ ಪ್ರಯತ್ನವಾಗಿದೆ. ಸಾಂಕ್ರಾಮಿಕಗಳಿಂದ ಕಲಿತ ಪಾಠ ಹೊಸ ಬಗೆಯ ಸಾಮಾಜಿಕ ವ್ಯವಸ್ಥೆಯ ಬೆಳವಣಿಗೆಗೆ ಕಾರಣವಾಗಿದೆ ಎಂದರು.

ಗೆಲ್ಲುವ ಆತ್ಮವಿಶ್ವಾಸ ಮನುಷ್ಯವನ್ನು ಎಂತಹ ಸಂಕಷ್ಟದ ಸಂದರ್ಭದಿಂದಲೂ ಮುಕ್ತವಾಗುವಂತೆ ಮಾಡುತ್ತದೆ. ಅದೇ ರೀತಿ ಓದು, ಸಾಧನೆ ಮತ್ತು ಕಾರ್ಯಯೋಜನೆ ಬಗ್ಗೆ ವಿದ್ಯಾರ್ಥಿಗಳು ಉತ್ಸುಕತೆ ಮತ್ತು ಆತ್ಮವಿಶ್ವಾಸ ರೂಢಿಸಿಕೊಂಡರೆ ಮಹತ್ತರ ಸಾಧನೆಗೆ ನೆರವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಪ್ರೊ.ಕೆ.ಆರ್. ರವಿಕಿರಣ್ ಮಾತನಾಡಿ, ಕೊರೊನಾ ಕಾಲಘಟ್ಟ ಮನುಷ್ಯತ್ವದ ಮುಖಗಳನ್ನು ಪರಿಚಯಿಸಿದೆ. ಸಾಮಾ ಜಿಕ ಅಸಮಾನತೆಯನ್ನು ಬಟಾಬಯಲು ಗೊಳಿಸಿದ್ದು, ಸಮಸಮಾಜ ನಿರ್ಮಾಣದ ಪರಿಕಲ್ಪನೆಯ ಸಾಕಾರ ಅಗತ್ಯ ಎಂಬುದನ್ನು ಸಾರಿ ಹೇಳಿದೆ ಎಂದರು.

ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಡಾ.ಎಂ. ಚಿಕ್ಕಣ್ಣ, ಕೋವಿಡ್-19 ಸಂದರ್ಭದಲ್ಲಿ ಎನ್‍ಎಸ್‍ಎಸ್ ಘಟಕ ನಿರ್ವಹಿಸಿದ ಮಹತ್ವದ ಜವಾಬ್ದಾರಿಗಳ ಮಾಹಿತಿ ನೀಡಿದರು.

ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪಿ. ಚೈತ್ರಾ, ಸಹಾಯಕ ಎನ್‍ಎಸ್‍ಎಸ್ ಅಧಿಕಾರಿಕೆ. ದಕ್ಷಿಣಾಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT