ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್: ಏರಿಯಿಂದ ಉರುಳಿದ ಬಸ್‌, 10 ಮಂದಿಗೆ ಗಾಯ

ಓಂಶಕ್ತಿ ದೇವಾಲಯಕ್ಕೆ ಹೊರಟಿದ್ದ ಮಾಲಾಧಾರಿಗಳು
Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಆನೇಕಲ್: ಬೆಳ್ಳಂದೂರಿನಿನಂದ ಓಂಶಕ್ತಿ ದೇವಾಲಯಕ್ಕೆ ಖಾಸಗಿ ಬಸ್‌ ಶನಿವಾರ ತಾಲ್ಲೂಕಿನ ಬಿದರಗುಪ್ಪೆ ಕೆರೆ ಕಟ್ಟೆಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಹತ್ತು ಮಾಲಾಧಾರಿ ಮಹಿಳೆಯರು ಗಾಯಗೊಂಡಿದ್ದಾರೆ.

ಬೆಳ್ಳಂದೂರಿನಿಂದ 50 ಮಹಿಳಾ ಮಾಲಾಧಾರಿಗಳ ತಂಡ ಖಾಸಗಿ ಬಸ್‌ನಲ್ಲಿ ಓಂಶಕ್ತಿ ದೇವಾಲಯಕ್ಕೆ ಹೊರಟಿತ್ತು. ಬೆಳಗಿನ ಜಾವ 5.30ರ ಸುಮಾರು ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಉರುಳಿತು.

ಗಾಯಗೊಂಡಿರುವ ಬೆಳ್ಳಂದೂರಿನ ಶಾರದಮ್ಮ, ಭಾಗ್ಯಮ್ಮ, ನಾಗರತ್ನಮ್ಮ, ಕಲಾ, ಪದ್ಮಮ್ಮ, ದೀಪ, ನಾಗರತ್ನ ಎಂಬುವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 22 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ. 

ಬೆಳಗಿನ ಉಪಾಹಾರಕ್ಕಾಗಿ ತಿಂಡಿ ಜೊತೆ ಬಸ್‌ನಲ್ಲಿ ಬಿಸಿ ಸಾಂಬರ್‌ ಕೂಡ ಕೊಂಡೊಯ್ಯಲಾಗಿತ್ತು. ಬಸ್‌ ಉರುಳುತ್ತಿದ್ದಂತೆ ಬಿಸಿ  ಸಾಂಬರು ಜನರ ಮೇಲೆ ಚೆಲ್ಲಿದೆ. ಇದರಿಂದ ಅನೇಕರು ಗಾಯಗೊಂಡಿದ್ದಾರೆ. ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೇಕಲ್‌ ತಾಲ್ಲೂಕಿನ ಬಿದರಗುಪ್ಪೆ ಕೆರೆಯ ಸಮೀಪದಲ್ಲಿ ಚಾಲಕನ ಆಯ ತಪ್ಪಿ ಕೆಳಗೆ ಬಿದ್ದಿರುವುದರಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಹಿಳೆ
ಆನೇಕಲ್‌ ತಾಲ್ಲೂಕಿನ ಬಿದರಗುಪ್ಪೆ ಕೆರೆಯ ಸಮೀಪದಲ್ಲಿ ಚಾಲಕನ ಆಯ ತಪ್ಪಿ ಕೆಳಗೆ ಬಿದ್ದಿರುವುದರಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಹಿಳೆ
ಆನೇಕಲ್‌ ತಾಲ್ಲೂಕಿನ ಬಿದರಗುಪ್ಪೆ ಕೆರೆಯ ಸಮೀಪದಲ್ಲಿ ಚಾಲಕನ ಆಯ ತಪ್ಪಿ ಕೆಳಗೆ ಬಿದ್ದಿರುವುದರಿಂದ ಗಾಯಗೊಂಡು ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು ಗಾಬರಿಯಿಂದಿರುವ ಪುಟಾಣಿ ಬಾಲಕ
ಆನೇಕಲ್‌ ತಾಲ್ಲೂಕಿನ ಬಿದರಗುಪ್ಪೆ ಕೆರೆಯ ಸಮೀಪದಲ್ಲಿ ಚಾಲಕನ ಆಯ ತಪ್ಪಿ ಕೆಳಗೆ ಬಿದ್ದಿರುವುದರಿಂದ ಗಾಯಗೊಂಡು ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು ಗಾಬರಿಯಿಂದಿರುವ ಪುಟಾಣಿ ಬಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT