ವಿಜಯಪುರ(ದೇವನಹಳ್ಳಿ): ಪಟ್ಟಣದಲ್ಲಿ ಹಾಗೂ ಮೂಲಕ ಸಂಚರಿಸುವ ಬಹುತೇಕ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಬಾಗಿಲು ಇಲ್ಲದೆ, ಅಪಾಯಕಾರಿಯಾಗಿ ಸಂಚರಿಸುತ್ತಿವೆ.

ಶಕ್ತಿ ಯೋಜನೆ ಜಾರಿ ಬಳಿಕ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಪ್ರಯಾಣಿಕರು ಬಾಗಿಲಿನಲ್ಲಿ ನಿಂತುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಬಾಗಿಲು ಇಲ್ಲದ ಪ್ರಯಾಣಿಕರು ನೇತುಡಿಕೊಂಡು ಪ್ರಯಾಣಿಸುತ್ತಿರುವುದು ಅಪಾಯ ಆಹ್ವಾನಿಸುತ್ತಿದೆ. ಶಕ್ತಿ ಯೋಜನೆ ಅನುಷ್ಠಾನದ ಬಳಿಕ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರ ಸುರಕ್ಷಿತ ಬಗ್ಗೆ ಗಮನ ಹರಿಸುತ್ತಿಲ್ಲ. ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದ್ದರೂ ಕೇಳುವರರರು ಯಾರು ಇಲ್ಲದಂತಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಬೆಂಗಳೂರು-ಶಿಡ್ಲಘಟ್ಟದ ನಡುವೆ ಸಂಚರಿಸುವ ಹಲವು ಸಾರಿಗೆ ಬಸ್ಗಳಿಗೆ ಬಾಗಿಲು ಇಲ್ಲದ ಕಾರಣ, ಬಸ್ಸಿಗೆ ಹತ್ತಿರುವ ಪ್ರಯಾಣಿಕರು, ಯುವಕರು, ಬಾಗಿಲಲ್ಲೆ ನಿಂತುಕೊಂಡು ಪ್ರಯಾಣಿಸುತ್ತಿದ್ದಾರೆ. ಇವರ ಜೊತೆಯಲ್ಲೆ ನಿರ್ವಾಹಕರು ಸಹಾ ಬಾಗಿಲಿನಲ್ಲೆ ನಿಂತುಕೊಂಡು ಪ್ರಯಾಣ ಮಾಡುತ್ತಿದ್ದಾರೆ. ಪ್ರಯಾಣಿಕರು ಸ್ವಲ್ಪ ಎಚ್ಚರ ತಪ್ಪಿದರೂ ಭಾರಿ ಅನಾಹುತ ಸಂಭವಿಸಲಿದ್ದು, ಸಾರಿಗೆ ಇಲಾಖೆಯ ಅಧಿಕಾರಿಗಳಾಗಲಿ, ಪೊಲೀಸ್ ಇಲಾಖೆಯವರಾಗಲಿ ಗಮನಹರಿಸುತ್ತಿಲ್ಲ.

ಬಾಗಿಲ್ಲ ಇಲ್ಲದೆ ಕೆಎಸ್ಆರ್ಟಿಸಿ ಬಸ್ಗಳಿಗೆ ಬಾಗಿಲು ಅಳವಡಿಸಬೇಕು, ಸಡಿಲಗೊಂಡಿರುವುದನ್ನು ದುರಸ್ತಿಗೊಳಿಸಿ ಪ್ರಯಾಣಿಕರ ಸುರಕ್ಷಿತಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಬಸ್ ಗಳು ನಿಲ್ಲಿಸುವುದಿಲ್ಲ: ಇತ್ತಿಚೆಗೆ ಬೆಂಗಳೂರಿನ ಕಡೆಗೆ ಹೋಗುವ ಬಸ್ಗಳು ಮಹಿಳೆಯರನ್ನು ಕಂಡರೆ ನಿಲ್ಲಿಸುವುದಿಲ್ಲ. ಕೂಲಿ ಕೆಲಸಗಳಿಗೆ ಹೋಗುವವರು, ಉದ್ಯೋಗಗಳಿಗೆ ಹೋಗುವವರಿಗೆ ತೊಂದರೆಯಾಗುತ್ತಿದೆ. ಬಸ್ ಖಾಲಿ ಇದ್ದರೂ ಕೆಲವು ಚಾಲಕರು ಮಹಿಳೆಯರಿಗೆ ಉಚಿತವೆಂದು ನಿಲ್ಲಿಸದೇ ಹೋಗುತ್ತಿದ್ದಾರೆ ಎಂದು ಮಹಿಳಾ ಪ್ರಯಾಣಿಕರು ಆರೋಪಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಚಾಲಕರು ಹೀಗೆ ಮಾಡಿದರೆ, ಬಸ್ಸುಗಳನ್ನು ಅಡ್ಡಗಟ್ಟಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.