ಗುರುವಾರ , ಅಕ್ಟೋಬರ್ 29, 2020
28 °C

ಕ್ಯಾಟ್‌ಫಿಷ್‌ ಸಾಕಣೆ ಹೊಂಡ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ತಾಲ್ಲೂಕಿನ ಇಂಡ್ಲಬೆಲೆಯಲ್ಲಿ ಅಕ್ರಮವಾಗಿ ಕ್ಯಾಟ್‌ಫಿಷ್‌ ಸಾಕಣೆ ಹೊಂಡಗಳ ಮೇಲೆ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಹೊಂಡಗಳನ್ನು ನಾಶ ಪಡಿಸಿದ್ದಾರೆ.

ಇಂಡ್ಲಬೆಲೆಯ ವೆಂಕಟೇಶ್‌ ಎಂಬುವರು ತಮ್ಮ ಜಮೀನಿನಲ್ಲಿ ಹೊಂಡಗಳಲ್ಲಿ ನಿಷೇಧಿತ ಕ್ಯಾಟ್‌ಫಿಷ್‌ ಸಾಕಣೆ ಮಾಡುತ್ತಿದ್ದರು.ತಹಶೀಲ್ದಾರ್‌ ಸಿ.ಮಹಾದೇವಯ್ಯ ನೇತೃತ್ವದಲ್ಲಿ ಅತ್ತಿಬೆಲೆಯ ಪಿಎಸ್‌ಐ ಮುರಳಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಹೊಂಡಗಳನ್ನು ನಾಶಪಡಿಸಿದರು.

ಇಲ್ಲಿ ಸುಮಾರು₹20 ಲಕ್ಷಕ್ಕೂ ಹೆಚ್ಚು ಮೌಲ್ಯದ ಕ್ಯಾಟ್‌ಫಿಷ್‌ ಸಾಕಾಲಾಗುತ್ತಿತ್ತು ಎಂದು ತಹಶೀಲ್ದಾರ್‌
ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.