ಭಾನುವಾರ, ಜನವರಿ 19, 2020
29 °C

ಹೊಸಕೋಟೆ: ಶಾಸಕರಿಂದ ಸ್ವಚ್ಛತಾ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ನಗರದ ಪೊಲೀಸ್ ಠಾಣೆಯ ಸುತ್ತ ಹಾಗೂ ಆಕಾಶವಾಣಿ ಕೇಂದ್ರದ ಬಳಿ ಶನಿವಾರ ಶಾಸಕ ಶರತ್ ಬಚ್ಚೇಗೌಡರ ನೇತೃತ್ವದಲ್ಲಿ ನಗರಸಭೆಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ರಾಷ್ಠೀಯ ಹೆದ್ದಾರಿಯ ಅಕ್ಕಪಕ್ಕದ ಜಾಗಗಳಿಗೆ ಶಾಸಕರು ಭೇಟಿ ನೀಡಿದರು. ಸಾರ್ವಜನಿಕರಿಗೆ ಬಸ್ ನಿಲ್ದಾಣ ಹಾಗೂ ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳ ಪರಿಶೀಲಿಸಿದರು.

ನಗರಸಭೆ ಆಯುಕ್ತ ನಿಸಾರ್ ಅಹಮದ್, ಸಬ್ ಇನ್‌ಸ್ಪೆಕ್ಟರ್‌ ರಾಜು, ಲ್ಯಾಂಕೋ ಟೋಲ್ ಸಂಸ್ಥೆಯ ಅಧಿಕಾರಿಗಳು ಜತೆಗಿದ್ದರು. ಶರತ್‌ ಇದೇವೇಳೆ ಕುಂದುಕೊರತೆಗಳನ್ನೂ ಪರಿಶೀಲಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು