ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್| ಕಂಟೈನರ್‌ಗೆ ಬೆಂಕಿ: ಸುಟ್ಟುಕರಕಲಾದ ದ್ವಿಚಕ್ರ ವಾಹನ

Published 1 ಮಾರ್ಚ್ 2024, 23:30 IST
Last Updated 1 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಆನೇಕಲ್ : ಆನೇಕಲ್‌ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಉಳೀರನಹಳ್ಳಿ ಬಳಿ ಶುಕ್ರವಾರ ಸಂಜೆ ಎಲೆಕ್ಟ್ರಿಕ್‌ ಬೈಕ್‌ ಸಾಗಾಣಿಕೆ ಮಾಡುತ್ತಿದ್ದ ಕಂಟೈನರ್‌ನಲ್ಲಿ ಬೆಂಕಿ ಹೊತ್ತಿಕೊಂಡು 20 ದ್ವಿಚಕ್ರ ವಾಹನಗಳು ಸಂಪೂರ್ಣ ಸುಟ್ಟುಕರಕಲಾಗಿವೆ.

ಏಥರ್‌ ಕಂಪನಿಗೆ ಸೇರಿದ ವಿದ್ಯುತ್ ಬೈಕ್‌ಗಳನ್ನು ಕಂಟೈನರ್‌ನಲ್ಲಿ ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಂಟೈನರ್‌ ಒಳಗೆ ಬೆಂಕಿ ಕಾಣಿಸಿಕೊಂಡು ಕಂಟೈನರ್‌ ಮೇಲ್ಭಾಗದಲ್ಲಿದ್ದ ಬೈಕ್‌ಗಳು ಸುಟ್ಟವು.

ಕೂಡಲೇ ವಾಹನ ನಿಲ್ಲಿಸಿದ ಚಾಲಕ ಡೆಂಕಣಿಕೋಟೆ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದವರು ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ತಮಿಳುನಾಡಿನ ಮತ್ತಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT