ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊತ್ತಂಬರಿ ಸೊಪ್ಪಿನ ಬೆಲೆ ಏರಿಕೆ | ಮಾರುಕಟ್ಟೆಗಳಲ್ಲಿ ಒಂದು ಕಟ್ಟಿಗೆ ₹40–50

Last Updated 19 ಸೆಪ್ಟೆಂಬರ್ 2022, 4:06 IST
ಅಕ್ಷರ ಗಾತ್ರ

ವಿಜಯಪುರ(ಬೆಂ.ಗ್ರಾಮಾಂತರ): ಇತ್ತಿಚೆಗೆ ಬಿದ್ದ ಭಾರಿ ಮಳೆಯಿಂದಾಗಿ ಎಲ್ಲೆಡೆ ತರಕಾರಿ ಬೆಳೆ ನೀರಿನಲ್ಲಿ ಮುಳುಗಿ ನಷ್ಟವಾಗಿರವ ಕಾರ ಸೊಪ್ಪು–ತರಕಾರಿ ಬೆಲೆ ಗಗನಕ್ಕೆ ಏರಿದೆ. ಕೊತ್ತಂಬರಿ ಸೊಪ್ಪಿನ ಬೆಲೆ ಕೂಡ ಹೆಚ್ಚಾಗಿದ್ದು, ಗ್ರಾಹಕರ ಕೈ ಸುಡುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯದಿರುವ ಸೊಪ್ಪಿಗೆ ಸ್ಥಳೀಯ ಎಪಿಎಂಸಿ ಸೇರಿದಂತೆ ಬೆಂಗಳೂರಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಸದ್ಯ ಸ್ಥಳೀಯವಾಗಿ ₹40–60ಗೆ ಮಾರಾಟವಾಗುತ್ತಿದೆ. ಹೊರ ರಾಜ್ಯಗಳಲ್ಲಿ ₹100–120 ದರದಲ್ಲಿ ಮಾರಾಟವಾಗುತ್ತಿದೆ. ಬಹುತೇಕ ವ್ಯಾಪಾರಿಗಳು ಇಲ್ಲಿಂದ ಕಡಿಮೆ ದರದಲ್ಲಿ ಸೊಪ್ಪು ಖರೀದಿಸಿ ಆಂಧ್ರದ ಹಿಂದೂಪುರ, ಅನಂತಪುರ, ವರಂಗಲ್‌ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾತ್ರವಲ್ಲದೆ ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಇನ್ನಿತರೆ ಜಿಲ್ಲೆಗಳಲ್ಲಿ ಕೊತ್ತಂಬರಿ ಸೊಪ್ಪು ಬೆಳೆದಿದ್ದ ರೈತರು ನಷ್ಟಕ್ಕೀಡಾಗಿದ್ದಾರೆ. ಇದರಿಂದ ಅಸಮರ್ಪಕ ಪೂರೈಕೆಯಿಂದ ಸೊಪ್ಪಿನ ಬೆಲೆ ಏರಿಕೆಯಾಗಿದೆ.

ಸೊಪ್ಪುಗಳ ಬೆಲೆಯೂ ಏರಿಕೆ

ಒಂದು ಕೆ.ಜಿ.ಬಿತ್ತನೆ ದನಿಯಾ ₹100ಗೆ ಮಾರಾಟವಾಗುತ್ತಿದ್ದು, ಕಟಾವಿಗೆ ಬಂದಿರುವ ಸೊಪ್ಪಿನ ಬೆಲೆ 100 ಕಟ್ಟುಗಳು ಇರುವ ಒಂದು ಮೂಟೆಗೆ ಮಾರುಕಟ್ಟೆಯಲ್ಲಿ ₹5,000 ವರೆಗೂ ಮಾರಾಟವಾಗುತ್ತಿದೆ. ದಂಟು, ಪಾಲಕ್, ಪುದೀನಾ, ಸಬಸ್ಸಿಗೆ, ಮೆಂತ್ಯೆ ಮತ್ತು ಕರಿಬೇವಿನ ಸೊಪ್ಪು ಬೆಲೆ ಕೂಡಾ ಏರಿಕೆಯಾಗಿದೆ. ‌ಈ ಹಿಂದೆ ಒಂದು ಕಟ್ಟಿಗೆ ₹10–15ಗೆ ಮಾರಾಟವಾಗುತ್ತಿದ್ದ ಈ ಸೋಪ್ಪುಗಳು ಈಗ ₹30–40ವರೆಗೂ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT