ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ವೈಭವ: ಹುಲಿಕಲ್‌ಗೆ ಆಹ್ವಾನ

Last Updated 11 ಜನವರಿ 2022, 7:01 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಆಯೋಜಿಸಿರುವ ಹಾಲುಮತ ಸಂಸ್ಕೃತಿ ವೈಭವದ‘ಸಿದ್ದಶ್ರೀ’ ಪ್ರಶಸ್ತಿಗೆ ಪವಾಡ ಬಯಲು ಕಾರ್ಯಕ್ರಮ ನಡೆಸುವ ಮೂಲಕ ಮೂಢನಂಬಿಕೆ ವಿರುದ್ಧ ಅರಿವು ಮೂಡಿಸುತ್ತಿರುವ ಹುಲಿಕಲ್ ನಟರಾಜ್ ಆಯ್ಕೆಯಾಗಿದ್ದಾರೆ.

ಸಂಸ್ಕೃತಿ ವೈಭವದಲ್ಲಿ ಭಾಗವಹಿಸುವಂತೆ ರಾಜ್ಯ ಕುರುಬರ ಸಂಘದ ನಿರ್ದೇಶಕ ಹಾಗೂ ಕನಕ ಗುರುಪೀಠದ ಧರ್ಮದರ್ಶಿ ಕೆ.ಎಂ. ಕೃಷ್ಣಮೂರ್ತಿ ಅವರು ಸೋಮವಾರ ಹುಲಿಕಲ್‌ ನಟರಾಜ್‌ ಅವರ ಮನೆಗೆ ತೆರಳಿ ಅಧಿಕೃತ ಆಹ್ವಾನ ನೀಡಿದರು.

ಈ ಬಗ್ಗೆ ಮಾಹಿತಿ ನೀಡಿದ ಕೃಷ್ಣಮೂರ್ತಿ, ‘ನಮ್ಮ ತಾಲ್ಲೂಕಿನವರಿಗೆ ಈ ಬಾರಿ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಸಾಧಕರನ್ನು ಗುರುತಿಸಿ ಗೌರವದಿಂದ ನಡೆಸಿಕೊಳ್ಳುವುದು ಮಠದ ಸಂಸ್ಕೃತಿಯಾಗಿದೆ. ಜ. 13ರಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸುವಂತೆ ಆಹ್ವಾನ ನೀಡಲಾಗಿದೆ’ ಎಂದರು.

ಕನ್ನಡ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ಪಿ. ಆಂಜನೇಯ, ಪರಮೇಶ್, ಪ್ರಾಂಶುಪಾಲ ಎಂ.ಸಿ. ಮಂಜುನಾಥ್, ಶಿಕ್ಷಕ ಗಿರಿರಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT