ಸೂಲಿಬೆಲೆ(ಹೊಸಕೋಟೆ): ಹೋಬಳಿಯ ಗಿಡ್ಡಪ್ಪನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಒಳಗೆರೆಪುರ ಗ್ರಾಮದ ಸರ್ವೆ ನಂ.41 ರಲ್ಲಿ ಅತ್ತಿಬೆಲೆ ಗ್ರಾಮದ ದಲಿತ ಸಮುದಾಯಕ್ಕೆ ಮೀಸಲು ಇಟ್ಟಿರುವ ಜಾಗವನ್ನು ನಿವೇಶನವಾಗಿ ಮಂಜೂರು ಮಾಡಿ ವಿತರಣೆ ಮಾಡಬೇಕಾಗಿ ಅಂಬೇಡ್ಕರ್ ಸೇವಾ ಸಮಿತಿಯ ಆಗ್ರಹಿಸಿದೆ.

ತಾಲ್ಲೂಕಿನ ಸೂಲಿಬೆಲೆ ಹೋಬಳಿ ಒಳಗೆರೆಪುರ ಗ್ರಾಮದ ಸರ್ವೆ ನಂ. 41 ರಲ್ಲಿ 1 ಎಕರೆ 5 ಗುಂಟೆ ಮೀಸಲು ಜಾಗವನ್ನು ಅತ್ತಿಬೆಲೆ ಗ್ರಾಮದ ದಲಿತರಿಗಾಗಿ ನಿವೇಶನ ಹಂಚಿಕೆ ಮಾಡಲು 2002ರಲ್ಲಿ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿಯಿಂದ ಮಂಜೂರು ಮಾಡಲಾಗಿತ್ತು. ಆದರೆ ಇದುವರೆವಿಗೂ ಹಂಚಿಕೆ ಮಾಡಿಲ್ಲ. ಇತ್ತೀಚೆಗೆ ಈ ಜಾಗವನ್ನು ಕೆಲವು ಬಲಿಷ್ಟರು ಒತ್ತುವರಿ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹಾಗಾಗಿ ಕೂಡಲೇ ದಲಿತರಿಗೆ ಹಂಚಿಕೆ ಮಾಡಬೇಕೆಂದು ಸಮಿತಿ ಒತ್ತಾಯಿಸಿದೆ.

ಈ ಸಮಸ್ಯೆ ಬಗೆಹರಿಸದಿದ್ದರೆ ತಾಲ್ಲೂಕಿನ ದಲಿತ ಸಂಘಟನೆಗಳ ಸಹಯೋಗದಲ್ಲಿ ಆಹೋರಾತ್ರಿ ಪ್ರತಿಭಟನೆ ಆರಂಭಿಸಲಾಗುವುದು ಎಂದು ಸಮಿತಿ ಎಚ್ಚರಿಸಿದೆ.

‘ನ್ಯಾಯಯುತವಾಗಿ ನಾವು ಬೇಡಿಕೆ ಇಟ್ಟಿದ್ದೆವೆ ದಲಿತರಿಗೆ ಸೇರಬೇಕಾದ ನಿವೇಶನಗಳನ್ನು ಶೀಘ್ರವಾಗಿ ವಿತರಣೆ ಮಾಡಿ ಅನ್ಯಾಯ ಸರಿಪಡಿಸಬೇಕು ಮತ್ತು ಒತ್ತುವರಿ ತೆರವು ಮಾಡಬೇ’ ಎಂದು ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸಂದೇಶ್ ಆಗ್ರಹಿಸಿದ್ದಾರೆ.

ಅತ್ತಿಬೆಲೆ ಗ್ರಾಮ ಪಂಚಾಯಿತಿ ಸದಸ್ಯ ಮುನಿಯಲ್ಲಪ್ಪ,  ಮುನಿವೆಂಕಟಪ್ಪ, ಚಿನ್ನಪ್ಪ, ಬಾಬು, ಮಧು, ಗಂಗಾಧರ್, ಮೋಹನ್, ರವಿಕಿರಣ್, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.