ಸೋಮವಾರ, ಫೆಬ್ರವರಿ 17, 2020
19 °C
ದೇವನಹಳ್ಳಿಯಲ್ಲಿ ಉಪಾಧ್ಯಾಯರ ಸಮರ್ಪಣಾ ದಿನಾಚರಣೆ

ದೀನದಯಾಳ್ ಶ್ರೇಷ್ಠ ದೇಶಭಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ದಲಿತರ ಮನೆಗಳ ಕೇರಿಯಲ್ಲಿ ಸ್ವಯಂ ಪ್ರೇರಿತರಾಗಿ ಉಪಾಹಾರ ಸೇವಿಸಿ ಸಮಾನತೆಗೆ ಮೇಲ್ಪಂಕ್ತಿ ಹಾಕಿದ ದೀನದಯಾಳ್ ಉಪಾಧ್ಯಾಯ ಒಬ್ಬ ಶ್ರೇಷ್ಠ ದೇಶ ಭಕ್ತ ಎಂದು ಬಿಜೆಪಿ ರಾಜ್ಯ ಪರಿಷದ್ ಸದಸ್ಯ ದೇ.ಸು.ನಾಗರಾಜ್ ಹೇಳಿದರು .

ಇಲ್ಲಿನ ಕೊರಚರ ಬೀದಿಯಲ್ಲಿ ತಾಲ್ಲೂಕು ಬಿಜೆಪಿ ಪಕ್ಷದವತಿಯಿಂದ ನಡೆದ ದೀನದಯಾಳ್‌ ಉಪಾಧ್ಯಾಯರ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಶ್ಪೃಶ್ಯತೆ ತೊಲಗಿದರೆ ಮಾತ್ರ ದೇಶದ ಅಭಿವೃದ್ಧಿಯಾಗಲಿದೆ ಎಂಬ ಚಿಂತನೆ ಅವರದಾಗಿತ್ತು. ದಲಿತರಿಗೆ ಸಮಾನತೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಹಂಬಲವಿತ್ತು. ಪಕ್ಷ ನಿಷ್ಠೆ ಇದ್ದರೆ ಶ್ರಮಕ್ಕೆ ತಕ್ಕಂತೆ ಹುದ್ದೆ ಸಿಗಲಿದೆ ಎಂಬುದನ್ನು ಸಾಮಾನ್ಯ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಎ.ಸಿ.ಗುರುಸ್ವಾಮಿ ಮಾತನಾಡಿ, ‘ದೀನದಯಾಳ್ ಉಪಾಧ್ಯಾಯ ರಾಜಸ್ಥಾನದಲ್ಲಿ ಜನಿಸಿದರು. ಬದುಕಿನ ಅಂತಿಮ ಘಟ್ಟದವರೆಗೆ ಸಂಕಷ್ಟದಲ್ಲೇ ಬದುಕು ಸಾಗಿಸಿದರು. ಕೇವಲ ಹಿಂದೂಗಳ ರಕ್ಷಣೆಗಾಗಿ ಆರಂಭಿಸಲಾದ ಜನಸಂಘವನ್ನು ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸಿ ಅದರ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು’ ಎಂದು ವಿವರಿಸಿದರು.

ಏಕಾತ್ಮತೆಯೇ ಭಾರತೀಯ ಸಂಸ್ಕೃತಿಯ ದೃಷ್ಟಿಕೋನ ಎಂಬುದು ಅವರ ಮುಖ್ಯ ಸಂದೇಶವಾಗಿತ್ತು. ದೇಶ ಕಂಡ ಶ್ರೇಷ್ಠ ಚಿಂತಕ ಎಂಬುದನ್ನು ತಮ್ಮ ಜೀವತಾವಧಿಯಲ್ಲಿ ನಿರೂಪಿಸಿದ್ದರು ಎಂದು ಹೇಳಿದರು.

ಬಿಜೆಪಿ ಮುಖಂಡ ರಮೇಶ್ ಕುಮಾರ್ ಮಾತನಾಡಿ, ಮಡಿವಂತಿಕೆಯ ಕುಟುಂಬದಲ್ಲಿ ಹುಟ್ಟದ ದೀನದಯಾಳ್‌ ಅವರು ಅಪಾರ ದೈವ ಭಕ್ತರಾದರೂ ಜೀವನದುದ್ದಕ್ಕೂ ಅವಿವಾಹಿತರಾಗಿಯೇ ಉಳಿದುಕೊಂಡಿದ್ದರು. ಹಿಂದೂಗಳ ಒಗ್ಗೂಡುವಿಕೆ ಅವರ ಮುಖ್ಯ ಉದ್ದೇಶವಾಗಿತ್ತು, ಕಾಂಗ್ರೆಸ್ ಪ್ರಬಲವಾಗಿ ಬೆಳೆಯುತ್ತಿರುವ ಕಾಲಘಟ್ಟದಲ್ಲಿ ಅಖಂಡ ಭಾರತ ಹಿಂದೂ ರಾಷ್ಟ್ರವಾಗಬೇಕು ಎಂದು ಜನಸಂಘ ಮೂಲಕ ಪ್ರಯತ್ನ ಪಟ್ಟಿದ್ದರು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಸನಾತನ ಸಂಸ್ಕೃತಿಯನ್ನು ಉಳಿಸಬೇಕು. ವ್ಯಕ್ತಿ, ಸಮಾಜ, ದೇಶ, ಪ್ರಕೃತಿ ಪ್ರತಿಯೊಬ್ಬರಿಗೆ ಮುಖ್ಯ. ದೀನದಯಾಳರವರ ಕನಸು ನನಸು ಮಾಡಬೇಕು. ಅವರ ಅದರ್ಶವನ್ನು ಮೈಗೊಡಿಸಿಕೊಳ್ಳಬೇಕು ಎಂದು ಹೇಳಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುನೀಲ್, ಮುಖಂಡ ಕೆ.ನಾಗೇಶ್ ಮಾತನಾಡಿದರು. ಬಿಜೆಪಿ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿಗಳಾದ ನಿಲೇರಿ ಮಂಜುನಾಥ್, ರವಿಕುಮಾರ್, ಮುಖಂಡರಾದ ರಂಗಸ್ವಾಮಿ, ಉಮೇಶ್, ಕೇಶವ, ಎಂ.ಶ್ರೀನಿವಾಸ್, ಗೋಪಾಲಕೃಷ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು