ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ | ಜಿಂಕೆ ಬೇಟೆ; ಅರಣ್ಯ ಅಧಿಕಾರಿಗಳ ದಾಳಿ

Published 24 ಮೇ 2023, 5:18 IST
Last Updated 24 ಮೇ 2023, 5:18 IST
ಅಕ್ಷರ ಗಾತ್ರ

ಕನಕಪುರ: ಚಿಲಂದವಾಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಿಂಕೆ ಬೇಟೆಯಾಡಿರುವುದು ಮಂಗಳವಾರ ಪತ್ತೆಯಾಗಿದೆ.

ಸಂಗಮ ಕನಕಪುರ ರಸ್ತೆ ಕುಳಿಕಡದಗ್ಗು ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಅಕ್ರಮವಾಗಿ ಬೇಟೆಯಾಡಿ ಅದರ ಮಾಂಸವನ್ನು ಸಾಗಿಸುತ್ತಿದ್ದಾಗ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಉಯ್ಯಂಬಳ್ಳಿ ಹೋಬಳಿ ಬೊಮ್ಮಸಂದ್ರ ಗ್ರಾಮದ ಜಡಿಯಪ್ಪನ ಮಗ ಕುಮಾರ್, ಬಸಪ್ಪನ ಮಗ ಮಾದೇಶ್ ಆರೋಪಿಗಳು.

ಸಹಾಯಕ ಸಂರಕ್ಷಣಾಧಿಕಾರಿ ನಾಗೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಡಿ.ದೇವರಾಜು ನೇತೃತ್ವದಲ್ಲಿ ಅರಣ್ಯ ರಕ್ಷಕರು ದಾಳಿ ನಡೆಸಿದ್ದಾರೆ.

ಅರಣ್ಯ ಗಸ್ಟು ಪಾಲಕರಾದ ಸುಭಾಷ್ ಸಾವಳಗಿ, ಮಂಜುನಾಥ್ ಬಡಿಗೇರ, ಮಲ್ಲಿಕಾರ್ಜುನ್ ಆರ್.ಪೂಜಾರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆರೋಪಿಗಳಿಂದ ಎಂಟು ಕೆಜಿ ಜಿಂಕೆ ಮಾಂಸ, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT