ದೊಡ್ಡಬಳ್ಳಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎನ್ನುವ ಕಲಾವಿದರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೂನ್ 3ರಂದು ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಒಕ್ಕೂಟದಿಂದ ಹಮ್ಮಿಕೊಂಡಿರುವ ವಿಧಾನಸೌಧ ಚಲೊ ಸಾಂಸ್ಕೃತಿಕ ಹೋರಾಟಕ್ಕೆ ಸಂಘ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಾಗುತ್ತಿದೆ ಎಂದು ತಾಲ್ಲೂಕು ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್ ಹೇಳಿದರು.

ನಗರದ ಕಲಾವಿದರ ಸಂಘದ ಕಾರ್ಯಾಲಯದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಲಾವಿದರು ಮಾಸಾಶನ ಪಡೆಯಲು ವರ್ಷಾನುಗಟ್ಟಲೇ ಅಲೆದಾಡುವಂತಾಗಿದೆ. ಇದರೊಂದಿಗೆ ಈಗಾಗಲೇ ಪಡೆಯುತ್ತಿರುವ ಬೇರೆ ರೀತಿ ಮಾಸಾಶನ ನಿಲ್ಲಿಸಿ ಕಲಾವಿದರ ಮಾಸಾಶನ ಪಡೆಯಲು ಸಹ ಕಾಯಬೇಕಿದೆ. ಯಾವುದೇ ರೀತಿಯ ಮಾಸಾಶನ ಸಿಗದೆ ಕಲಾವಿದರು ಮಾಸಾಶನದಿಂದ ವಂಚಿತರಾಗಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರು.

ಸರ್ಕಾರ ಕಲಾವಿದರಿಗೆ ₹2,500 ಮಾಸಾಶನ ನೀಡುತ್ತಿದೆ. ಇದಕ್ಕೆ ಕಲಾವಿದರು 58 ವರ್ಷ ತುಂಬಿದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿ ಹಾಕಬೇಕು. ಮಾಸಾಶನಕ್ಕೆ ಅರ್ಜಿ ಹಾಕಿದ ಮೂರ್ನಾಲ್ಕು ವರ್ಷದ ನಂತರ ಮಾಸಾಶನ ಮಂಜೂರು ಅಗುತ್ತಿದೆ. ಅದರೆ, ಅರ್ಜಿ ಹಾಕುವಾಗಲೇ ಇಲಾಖೆಯವರು ಕಂದಾಯ ಇಲಾಖೆಯಿಂದ ನಿಡುವ ವೃದ್ದಾಪ್ಯ ವೇತನ ಪಡೆಯಬಾರದೆಂದು ಒಂದು ವೇಳೆ ಪಡೆಯುತ್ತಿದ್ದರೂ ಅದನ್ನು ನಿಲ್ಲಿಸಿ, ಅರ್ಜಿ ಹಾಕಬೇಕೆಂದೂ ಹೇಳಿದ್ದಾರೆ. ಇತ್ತ ಕಲಾವಿದರ ಮಾಸಾಶನ ಇಲ್ಲದೆ ವೃದ್ಧಾಪ್ಯ ವೇತನ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಮಂಜೂರು ಮಾಡಿದ ನಂತರ ವೃದ್ದಾಪ್ಯ ವೇತನ ನಿಲ್ಲಿಸಿ ನಂತರ ಕಲಾವಿದರಿಗೆ ಮಾಸಾಶನ ಬಿಡುಗಡೆ ಮಾಡಬೇಕೆಂದು ಕಲಾವಿದರ ಸಂಘ ಒತ್ತಾಯಿಸಿದೆ. ಕಲಾವಿದರ ಮಾಸಾಶನಕ್ಕೆ ಅರ್ಜಿ ಹಾಕುವ ಮೊದಲೇ ಕಂದಾಯ ಇಲಾಖೆಯಿಂದ ನೀಡುವ ₹1,200 ವೃದ್ಧಾಪ್ಯ ವೇತನ ನಿಲ್ಲಿಸುವ ನಿಯಮ ಬದಲಿಸಬೇಕು. ಈ ಬಗ್ಗೆ ಇಲಾಖೆ ನಿರ್ದೆಶಕರು ಹಾಗೂ ಸಚಿವರು ಪರಿಶೀಲಿಸಿ ಮರು ಅದೇಶ ಮಾಡಬೇಕು ಎಂದು ಒತ್ತಾಯಿಸಿದರು.

ಶೀಘ್ರ ಸಂದರ್ಶನ ನಡೆಸಿ: ಕಲಾವಿದರ ಮರಣ ನಂತರ ಕಲಾವಿದರ ಪತ್ನಿಯರಿಗೆ ನೀಡುವ ವಿಧವಾ ವೇತನ ಕೇವಲ ₹500 ಮಾತ್ರ, ಆದರೆ, ಕಂದಾಯ ಇಲಾಖೆಯು ನೀಡುವ ವಿಧವಾ ವೇತನ ₹1,200 ಆಗಿದೆ. ಗ್ಯಾರಂಟಿ ಯೋಜನೆ ಎಲ್ಲ ಮಹಿಳೆಯರಿಗೂ ₹2,000 ಬರುತ್ತಿದೆ. ಇದರಿಂದ ಕಲಾವಿದರ ಪತ್ನಿಯರಿಗೆ ನೀಡುವ ವಿಧವಾ ವೇತನ ಬಹಳ ಕಡಿಮೆ ಇದೆ. ಯಾರೂ ಸಹ ವಿಧವಾ ವೇತನ ಪಡೆಯಲು ಅರ್ಜಿ ಸಲ್ಲಿಸದಂತಾಗಿದೆ. ಕಲಾವಿದರಿಗೆ ಅವಮಾನ ಮಾಡಿದಂತೆ ಅಗಿದೆ. ಕಲಾವಿದರಿಗೆ ನೀಡುವ ಮಾಸಾಶನದ ಮೊತ್ತ ₹2,500 ಕಲಾವಿದರ ಮರಣದ ನಂತರ ಅವರ ಪತ್ನಿಯರಿಗೂ ನೀಡುವ ಬಗ್ಗೆ ಸರ್ಕಾರ ಮರು ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಮಾತನಾಡಿ, ಕಲಾವಿದರಿಗೆ ಅನಾರೋಗ್ಯವಾದರೆ ಅವರಿಗೆ ಯಾವುದೇ ನೆರವು ಇರುವುದಿಲ್ಲ. ಈ ದಿಸೆಯಲ್ಲಿ ಸರ್ಕಾರ ಮಾಸಾಶನ ವಯಸ್ಸು 50 ವರ್ಷಕ್ಕೆ ಸೀಮಿತವಾಗಿಸಬೇಕು. ಕಲಾವಿದರಿಗೆ ಇಂದಿನ ಪರಿಸ್ಥಿತಿಗೆ ತಕ್ಕಂತೆ ₹5 ಸಾವಿರಕ್ಕೆ ಏರಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಕಲಾವಿದರ ಸಂಘದ ಉಪಾಧ್ಯಕ್ಷ ಎಚ್.ಪ್ರಕಾಶರಾವ್, ಖಜಾಂಚಿ ಎಚ್.ಮುನಿಪಾಪಯ್ಯ, ಸಹಕಾರ್ಯದರ್ಶಿ ಎ.ಮಂಜುನಾಥ್, ಜಂಟಿಕಾರ್ಯದರ್ಶಿ ಮುದ್ದುಕೃಷ್ಣಪ್ಪ, ನಿರ್ದೇಶಕರಾದ ರವಿಕುಮಾರ್, ತಮ್ಮಣ್ಣ, ಶಶಿಧರ್, ಜಿ.ರಾಮು, ಸಂಚಾಲಕ ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.