ದೇವನಹಳ್ಳಿ: ಸಮುದಾಯ ಜೀವನ ಶಿಬಿರ ಆಯೋಜಿಸುವುದರಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನ ಶೈಲಿ ಅರಿವಿಗೆ ಬರಲಿದೆ ಎಂದು ತಹಶೀಲ್ದಾರ್ ಎಚ್.ಬಾಲಕೃಷ್ಣ ತಿಳಿಸಿದರು.

ತಾಲ್ಲೂಕಿನ ಕೋಡಗುರ್ಕಿ ಬಳಿ ಇರುವ ಕತ್ತಿಮಾರಮ್ಮ ದೇವಾಲಯದ ಸಮುದಾಯ ಭವನದಲ್ಲಿ ನಳಂದ ಶಿಕ್ಷಣ ಮಹಾವಿದ್ಯಾಲದಿಂದ ಹಮ್ಮಿಕೊಂಡಿದ್ದ ಸಮುದಾಯ ಜೀವನ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಯುವ ಪೀಳಿಗೆ ಪಟ್ಟಣದ ವಾತಾವರಣಕ್ಕೆ ಹೊಂದಿಕೊಂಡಿದ್ದು ಹಳ್ಳಿ ವಾತಾವರಣವನ್ನೇ ಮರೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ವಾತಾವರಣ, ಶುಚಿತ್ವ, ಶಿಕ್ಷಣ ಸೇರಿದಂತೆ ಅನೇಕ ವಿಷಯ ಕಲಿಯುವುದರ ಜತೆಗೆ ನಿತ್ಯ ಸ್ವಚ್ಛತಾ ಕಾರ್ಯ ಮಾಡುವುದರಿಂದ ವಿದ್ಯಾರ್ಥಿಗಳು ದೈಹಿಕ, ಮಾನಸಿಕವಾಗಿ ಆರೋಗ್ಯವಂತರಾಗಿರುತ್ತಾರೆ ಎಂದರು.

ಚಿಕ್ಕಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೊಡಿರಂಗಪ್ಪ ಮಾತನಾಡಿ, ಶಿಬಿರದಲ್ಲಿ ಭಾಗವಹಿಸಿರುವ ಪ್ರತಿಕ್ಷಣಾರ್ಥಿಗಳೇ ಮುಂದೆ ಶಿಕ್ಷಕರಾಗಲಿದ್ದಾರೆ. ಹಳ್ಳಿಯ ಜೀವನ ಶೈಲಿ ಕುರಿತು ತಿಳಿದುಕೊಳ್ಳುವುದರಿಂದ ಮುಂದೆ ಮಕ್ಕಳಿಗೆ ಮೌಲ್ಯೌಯುತ ಶಿಕ್ಷಣ ನೀಡಲು ಸಾಧ್ಯವಾಗಲಿದೆ ಎಂದರು.

ನಳಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಟಿ.ಸಿ.ವೆಂಕಟೇಶ್‌ಗೌಡ, ಶಿಕ್ಷಕ ರಮೇಶ್, ಕತ್ತಿಮಾರಮ್ಮ ದೇವಾಲಯದ ಪ್ರಧಾನ ಅರ್ಚಕ ಶ್ರೀಧರ್ ದೀಕ್ಷಿತ್, ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್.ಎ, ಮಕ್ಕಳ ತಜ್ಞ ಡಾ.ಎಸ್.ಸಂತೋಷ್, ಉಪನ್ಯಾಸಕರಾದ ಈಶ್ವರಪ್ಪ, ಪಾರ್ವತಮ್ಮ, ಪ್ರತಾಪ್ ರೆಡ್ದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.