ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ: ಮಳೆ ನೀರಿನೊಂದಿಗೆ ತೇಲಿ ಬಂದ ಆಸ್ಪತ್ರೆ ತ್ಯಾಜ್ಯ

Published 21 ಮೇ 2024, 14:23 IST
Last Updated 21 ಮೇ 2024, 14:23 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ಬೂದಿಗೆರೆ ಗ್ರಾಮದಲ್ಲಿ ಕಳೆದೆರೆಡು ದಿನಗಳಿಂದ ಬಿದ್ದ ಭಾರಿ ಮಳೆಯ ಪರಿಣಾಮವಾಗಿ, ಚರಂಡಿಗಳಲ್ಲಿ ಹಾಕಲಾಗಿದ್ದ ಆಸ್ಪತ್ರೆ ತ್ಯಾಜ್ಯವೂ ರಸ್ತೆಯಲ್ಲಿ ಹರಿದಾಡಿದ್ದು ಸ್ಥಳೀಯರನ್ನು ಭಯಭೀತರನ್ನಾಗಿ ಮಾಡಿದೆ.

ಆಸ್ಪತ್ರೆ ತ್ಯಾಜ್ಯಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದೇ, ಅವುಗಳನ್ನು ರಸ್ತೆಯ ಬದಿಯಲ್ಲಿ ಹಾಗೂ ರಾಜಕಾಲುವೆ ತುಂಬಿದ್ದು, ಮಳೆ ನೀರು ಹರಿದ ಪರಿಣಾಮ ಸಿರಿಂಜ್‌ ಸೇರಿದಂತೆ ಮಾತ್ರೆಗಳು ಜನರು ವಾಸಿಸುವ ಪ್ರದೇಶದೆಡೆಗೆ ನುಗ್ಗಿದೆ.

ಈ ತ್ಯಾಜ್ಯಗಳಿಂದ ಸ್ಥಳೀಯರ ಆರೋಗ್ಯಕ್ಕೆ ಧಕ್ಕೆ ಆಗುವ ಸಾಧ್ಯತೆಗಳು ಇದ್ದು, ಬೂದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳು, ಔ‍ಷಧಿ ಮಳಿಗೆಗಳಲ್ಲಿ ಸೂಕ್ತವಾಗಿ ತಾಜ್ಯ ವಿಲೇವಾರಿ ಆಗದೇ ಇರುವುದನ್ನು ಸ್ಥಳೀಯರು ಖಂಡಿಸಿದ್ದಾರೆ.

ಘಟನೆಯಿಂದ ಎಚ್ಚೆತ್ತ ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಒಂದೆರೆಡು ಔಷಧಿ ಮಳಿಗೆಗಳಿಗೆ ನೋಟಿಜ್‌ ಜಾರಿ ಮಾಡಿದ್ದಾರೆ.

ರಸ್ತೆಯಲ್ಲಿ ಮಳೆ ನೀರಿನೊಂದಿಗೆ ಬಂದಿರುವ ಆಸ್ಪತ್ರೆ ತಾಜ್ಯವೂ ಪ್ರಾಣಿಗಳಿಗೆ ನೀಡುವ ಔಷಧಿಗಳು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT