ವಿಜಯಪುರ (ದೇವನಹಳ್ಳಿ): ಪುರಸಭೆ ಅಧ್ಯಕ್ಷೆ ಭವ್ಯಮಹೇಶ್ ಅವರ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ಸೋಮವಾರ ನಡೆಯಿತು.

ಪಟ್ಟಣದ ಮುಖ್ಯರಸ್ತೆಯ ಜಾಗಗಳನ್ನು ನೆಲ ಬಾಡಿಗೆ ನೀಡದೆ ಪುರಸಭೆಯಿಂದ ಮಳಿಗೆಗಳನ್ನು ನಿರ್ಮಿಸಿ, ಬಾಡಿಗೆ ನೀಡಿದರೆ ಪುರಸಭೆಗೆ ಆದಾಯ ಹೆಚ್ಚಲಿದೆ. ಇತ್ತೀಚಿಗೆ ಚಿನ್ನದ ಬೆಲೆ ಏರಿಕೆಯಾಗಿದೆ. ಹೀಗಾಗಿ ಬಂಗಾರದ ಅಂಗಡಿಗಳಿಗೆ ಉದ್ದಿಮೆ ಪರವಾನಾಗಿ ಮೊತ್ತ ಹೆಚ್ಚಿಸಬೇಕು. ಸಾರ್ವಜನಿಕರಿಗೆ ಹೊರೆಯಾಗದಂತೆ ಬಜೆಟ್ ಮಂಡಿಸಬೇಕು ಎಂದು ಹಾಲಿ ಸದಸ್ಯ ಸಿ.ನಾರಾಯಣಸ್ವಾಮಿ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದರು.

ಒಂದೇ ಸೂರಿನಡಿ ಚಿಕನ್, ಮಟನ್, ಫೀಶ್ ಮಳಿಗೆಗಳನ್ನು ತೆರೆಯುವುದು, ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸುವುದು. ಅಪಾಯಕಾರಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದು, ಒಳಚರಂಡಿ ವ್ಯವಸ್ಥೆ ಸರಿಪಡಿಸುವುದು. ಪುರಸಭೆಗೆ ಆದಾಯ ಬರುವ ನಿಟ್ಟಿನಲ್ಲಿ ಹಲವು ಕ್ರಮ ಜರುಗಿಸಬೇಕು ಎಂದು ಸದಸ್ಯ ನಂದಕುಮಾರ್ ಹೇಳಿದರು.

ಅನಧಿಕೃತ ಕಂದಾಯವನ್ನು ಕಂದಾಯ ಪುಸ್ತಕದಲ್ಲಿ ನಮೂದಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ವಹಿಸಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದು, ಸ್ವಚ್ಛತೆ, ರಸ್ತೆಗಳ ಅಭಿವೃದ್ಧಿ, ಬೀದಿ ದೀಪ ಸೇರಿದಂತೆ ಹಲವು ವಿಷಯಗಳನ್ನು ಸದಸ್ಯ ಬೈರೇಗೌಡ ಪ್ರಸ್ತಾಪಿಸಿದರು.

ಪಟ್ಟಣದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಿದೆ. ಅವುಗಳನ್ನು ನಿಯಂತ್ರಿಸಲು ನಾಯಿಗಳನ್ನು ಹಿಡಿದು ಶಸ್ತ್ರ ಚಿಕಿತ್ಸೆ ಮಾಡಿ, ಕಿವಿ ಗುರುತು ಹಾಕಿ ಚಿಕಿತ್ಸೆ ಪಡೆದ ಸ್ಥಳದಲ್ಲಿಯೇ ಬಿಡಲು ಕ್ರಮವಹಿಸುವುದು, ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಮತ್ತು ಹಾವು ಕಚ್ಚಿದ ಔಷಧಿಗಳನ್ನು ಒದಗಿಸಬೇಕೆಂದು ಸದಸ್ಯ ಇಕ್ಬಾಲ್ ಹೇಳಿದರು.

ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಕಂದಾಯ ಮತ್ತು ನೀರಿನ ಬಿಲ್ ಪ್ರಮುಖ ಆದಾಯ ಮೂಲಗಳಾಗಿದ್ದು, ಸಾರ್ವಜನಿಕರು ಇವುಗಳನ್ನು ನಿಗದಿತ ಸಮಯಕ್ಕೆ ಪಾವತಿಸುವ ಮೂಲಕ ಪುರಸಭೆಯನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ ಮನವಿ ಮಾಡಿದರು.

ಪಟ್ಟಣದ ನೈರ್ಮಲ್ಯ ಕಾಪಾಡಲು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಮಕ್ಕಳ ಡೈಪರ್ ಮುಂತಾದವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಹಕರಿಸಬೇಕು ಎಂದು ತಿಳಿಸಿದರು.

ಪುರಸಭೆ ಉಪಾಧ್ಯಕ್ಷೆ ತಾಜುನ್ನೀಸ ಮಹಬೂಬ್ ಪಾಷ, ಸದಸ್ಯರಾದ ಹನೀಫುಲ್ಲಾ, ಇಕ್ಬಾಲ್ ಹಾಜರಿದ್ದರು.

ಶವ ಸಾಗಿಸುವ ವಾಹನ ಕಲ್ಪಿಸಿ

ಇದಕ್ಕೂ ಮುನ್ನ ಶಹರಿ ರೋಜ್ಗಾರ್ ಯೋಜನೆಯ ಕಟ್ಟಡದಲ್ಲಿ ವಿವಿಧ ಸಂಘ ಸಂಸ್ಥೆಗಳು ಸಂಘಟನೆಗಳು ಸಾರ್ವಜನಿಕರೊಂದಿಗೆ ನಡೆಸಿದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಟ್ಟಣದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆಗೆ ಕೊಂಡೊಯ್ಯಲು ವಾಹನದ ಸೌಲಭ್ಯವಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಆದ್ದರಿಂದ ಪುರಸಭೆಯಿಂದಲೇ ಮುಕ್ತ ವಾಹನವನ್ನು ಖರೀದಿಸಿ ವ್ಯವಸ್ಥೆ ಮಾಡಬೇಕೆಂದು ಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದರು.

ಹಲವು ವಿಷಯಗಳು ಚರ್ಚೆ

ಸಭೆಯಲ್ಲಿ ಪುರಸಭೆಗೆ ಆದಾಯ ಹೆಚ್ಚಿಸಲು ಆಸ್ತಿ ತೆರಿಗೆ ಕಟ್ಟಡ ಉದ್ದಿಮೆ ಪರವಾನಗಿ ನೀರಿನ ಶುಲ್ಕ ಜಾಹೀರಾತು ಪುರಸಭೆಯ ಹಳೆಯ ಅಂಗಡಿಗಳನ್ನು ಸರಿಪಡಿಸಿ ಬಾಡಿಗೆ ಬರುವಂತೆ ಮಾಡುವುದು ಎಲ್ಲ ಕಲ್ಯಾಣ ಮಂಟಪಗಳು ಪರವಾನಗಿ ಪಡೆಯುವುದು ಸೇರಿದಂತೆ ಹಲವು ವಿಷಯಗಳು ಚರ್ಚೆಯಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.