ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಜನ್ಮ ಭೂಮಿಯಲ್ಲ ಧಮ್ಮಾದಾನದ ಕೇಂದ್ರಸ್ಥಳ

Last Updated 30 ಜೂನ್ 2020, 9:37 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಅಯೋಧ್ಯೆ ರಾಮನ ಜನ್ಮಭೂಮಿ ಅಲ್ಲ. ಅದು ಬೌದ್ಧರ ಪವಿತ್ರ ಸ್ಥಳವಾಗಿತ್ತು’ ಎಂದುಚೌಡಪ್ಪನಹಳ್ಳಿ ಲುಂಬಿನಿ ಬೌದ್ಧ ವಿಹಾರ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಎಂ.ಲೋಕೇಶ್ ಹೇಳಿದರು.

ಇಲ್ಲಿನ ತಾಲ್ಲೂಕು ಆಡಳಿತ ಕಚೇರಿ ಸಂಕೀರ್ಣದ ಮುಂಭಾಗ ಬೌದ್ಧ ಅನುಯಾಯಿಗಳಿಂದ ಸಾಕೇತ್ ಬೌದ್ಧ ಭೂಮಿ ಮುಕ್ತ ಆಂದೋಲನದ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸಾಮ್ರಾಟ ಅಶೋಕ ಚಕ್ರವರ್ತಿಯು ಸಾಕೇತ್ ಧಮ್ಮ ಕೇಂದ್ರವನ್ನು ಅಲ್ಲಿ ನಿರ್ಮಿಸಿದ್ದ. ಇದು ಬೌದ್ಧ ಪವಿತ್ರ ಸ್ಥಳವಾಗಿತ್ತು’ ಎಂದರು.

‘1857ರ ನಂತರ ಸರ್ ಮೇಜರ್ ಜನರಲ್ ಕನ್ನಿಂಗ್ ಹ್ಯಾಮ್ ಈ ಸ್ಥಳದಲ್ಲಿ ಉತ್ಖನನ ಮಾಡಿಸಿದ್ದು. 1869ರಲ್ಲಿ ಉತ್ಖನನದ ಸಂಪೂರ್ಣ ವರದಿಯನ್ನು ಪುರಾತತ್ವ ಇಲಾಖೆ ಪ್ರಕಟಣೆ ಮಾಡಿತ್ತು. ಆದರೂ, ಆ ವರದಿ ಪ್ರಚಾರವಾಗದೆ ಮೂಲೆಗುಂಪಾಗಿದ್ದು ಹೇಗೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ’ ಎಂದರು.

‘ರಾಮಮಂದಿರವಿತ್ತು ಎಂದು ಹೇಳಲಾಗುತ್ತಿರುವ ಸ್ಥಳದ ಉತ್ಖನನ ಕಾರ್ಯ ಸಂಪೂರ್ಣವಾಗಿ ನಡೆದಿರಲಿಲ್ಲ ಎಂಬುದನ್ನು 2003ರಲ್ಲೇಅಲಹಾಬಾದ್ ಹೈಕೋರ್ಟ್‌ಸ್ಪಷ್ಟಪಡಿಸಿತ್ತು. ಇಷ್ಟೆಲ್ಲ ಪುರಾವೆಗಳಿದ್ದರೂ ಯಾವುದೂ ಪ್ರಚಾರಕ್ಕೆ ಬರಲಿಲ್ಲ. ಬೌದ್ಧ ಧರ್ಮವನ್ನು ಸಂಪೂರ್ಣ ನಾಶ ಮಾಡುವ ಏಕೈಕ ಉದ್ದೇಶದಿಂದ ಕೇಂದ್ರ ಸರ್ಕಾರವು ರಾಮಮಂದಿರ ನಿರ್ಮಾಣ ಮಾಡಲು ಹೊರಟಿದೆ’ ಎಂದು ವಕೀಲ ಸಿದ್ಧಾರ್ಥ ಆರೋಪಿಸಿದರು.

ಕೆಪಿಸಿಸಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಂ.ನಾರಾಯಣಸ್ವಾಮಿ ಮಾತನಾಡಿದರು. ಅಶೋಕ ಬುದ್ಧ ವಿಹಾರದ ಜ್ಞಾನಲೋಕ ಭಂತೇಜಿ, ಆನಂದ ಬುದ್ಧ ವಿಹಾರದ ಅನಿರುದ್ಧ ಬಂತೇಜಿ, ವಿಶ್ವಜ್ಯೋತಿ ಬುದ್ಧ ವಿಹಾರ ಪ್ರಧಾನ ಕಾರ್ಯದರ್ಶಿ ಕಾರಹಳ್ಳಿ ಕೆಂಪಣ್ಣ, ಮುಖಂಡರಾದ ನರಸಪ್ಪ, ಕೇಶವ, ವೆಂಕಟೇಶಪ್ಪ, ರಾಜಣ್ಣ, ಮಹೇಶ್ ದಾಸ್, ದಿನೇಶ್, ತ್ರಿಮೂರ್ತಿ, ಎಂ.ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT