ಭಾನುವಾರ, ಆಗಸ್ಟ್ 1, 2021
26 °C

ಒಟಿಪಿ ಆಧಾರಿತ ಪಡಿತರ ವಿತರಣೆಗೆ ಜಿಲ್ಲಾಧಿಕಾರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ಆಧಾರಿತ ಒಟಿಪಿ ಮೇರೆಗೆ ಪಡಿತರ ವಿತರಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ಅಲ್ಫಾಬೆಟಿಕ್(Alphabetic)ನಿಂದ ನ್ಯೂಮರಿಕ್(Numeric)ಗೆ ಪಡಿತರ ಕಾರ್ಡ್‌ ಸಂಖ್ಯೆ ಬದಲಾವಣೆ ಮೇರೆಗೆ ಯಾವುದೇ ಕಾರ್ಡ್‌ದಾರರಿಂದ ಹಣ ಪಡೆಯದೆ ಕಾರ್ಡ್ ಮೇಲೆ ಹೊಸ ಕಾರ್ಡ್ ನಂಬರ್‌ ಬರೆಯಲು ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ತಿಳಿಸಿದೆ.

ಅಂತ್ಯೋದಯ ಅನ್ನ(ಎಎವೈ) ಪಡಿತರ ಚೀಟಿಗೆ ಎನ್ಎ‌ಫ್‌ಎಸ್‌ಎ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ 20 ಕೆ.ಜಿ ರಾಗಿ ಹಾಗೂ 15 ಕೆ.ಜಿ ಅಕ್ಕಿ ಹಾಗೂ ಪಿಎಂಜಿಕೆವೈ ಯೋಜನೆಯಡಿ ಪ್ರತಿ ಕುಟುಂಬ ಸದಸ್ಯರಿಗೆ(1 ಯೂನಿಟ್)ಗೆ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. 

ಪಿಎಚ್‌ಎಚ್ (ಬಿಪಿಎಲ್) ಪಡಿತರ ಚೀಟಿಗೆ ಎನ್ಎ‌ಫ್ಎ‌ಸ್‌ಎ ಯೋಜನೆಯಡಿ ಪ್ರತಿ ಕುಟುಂಬದ ಸದಸ್ಯರಿಗೆ(1 ಯೂನಿಟ್) 3 ಕೆ.ಜಿ ರಾಗಿ ಹಾಗೂ 2 ಕೆ.ಜಿ ಅಕ್ಕಿ ಹಾಗೂ ಪಿಎಂಜಿಕೆವೈ  ಯೋಜನೆಯಡಿ ಪ್ರತಿ ಕುಟುಂಬ ಸದಸ್ಯರಿಗೆ(1 ಯೂನಿಟ್)ಗೆ 5 ಕೆ.ಜಿ ಅಕ್ಕಿ ಉಚಿತ‌ ನೀಡಲಾಗುತ್ತದೆ.

ಹೊಸ ಪಡಿತರ ಚೀಟಿ(ಪಿಎಚ್‌ಎಚ್‌)ಗೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಪ್ರತಿ ಅರ್ಜಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ ಮತ್ತು ಹೊಸ ಪಡಿತರ ಚೀಟಿ (ಎನ್‌ಪಿಎಚ್‌ಎಚ್)ಗೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಪ್ರತಿ ಕೆ.ಜಿ ಅಕ್ಕಿಗೆ ₹ 15ನಂತೆ 10 ಕೆ.ಜಿ. ಅಕ್ಕಿ ಹಾಗೂ ಎನ್‌ಪಿಎಚ್‌ಎಚ್(ಎಪಿಎಲ್) ನೀಡಿರುವ ಪಡಿತರ ಚೀಟಿದಾರರಿಗೆ ಏಕ ಸದಸ್ಯನಿಗೆ 5 ಕೆ.ಜಿ ಅಕ್ಕಿ, ಎರಡು ಮತ್ತು ಹೆಚ್ಚಿನ ಸದಸ್ಯರಿಗೆ 10 ಕೆ.ಜಿ ಅಕ್ಕಿಯನ್ನು ಕೆ.ಜಿಯೊಂದಕ್ಕೆ ₹ 15ನಂತೆ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು