ಮಂಗಳವಾರ, ಡಿಸೆಂಬರ್ 1, 2020
17 °C

ಆನೆ ಸುಂದರನಿಗೆ ದೀಪಾವಳಿ ಗಿಫ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಪೇಟಾ ಸಂಸ್ಥೆಯ ಮಾರ್ಗದರ್ಶನದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಸುಂದರ್‌ಗೆ ಬಗೆಬಗೆಯ ಹಣ್ಣುಗಳನ್ನು ನೀಡಿ ದೀಪಾವಳಿಯ ಸಂದರ್ಭದಲ್ಲಿ ಆನೆಯ ಪುಷ್ಟೀಕರಣ ಮಾಡಲಾಯಿತು.

ಮಹಾರಾಷ್ಟ್ರದ ಕೊಲ್ಹಾಪುರದ ದೇವಾಲಯದಲ್ಲಿದ್ದ ಆನೆ ಸುಂದರ್‌ನನ್ನು ಪೇಟಾ ಸಂಸ್ಥೆಯು ಕಾನೂನು ಹೋರಾಟದ ಮೂಲಕ ಸಂರಕ್ಷಿಸಿ 2014ರಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹಸ್ತಾಂತರಿಸಲಾಗಿತ್ತು.

20 ವರ್ಷದ ಸುಂದರ್‌ 14 ವರ್ಷಗಳ ಕಾಲ ಯಾವುದೇ ಆನೆಗಳ ಸಂಪರ್ಕವಿಲ್ಲದೇ ಏಕಾಂಗಿಯಾಗಿ ಜನರೊಂದಿಗೆ ಬೆರೆತಿತ್ತು. 2014ರಲ್ಲಿ ಬನ್ನೇರುಘಟ್ಟ ಉದ್ಯಾನಕ್ಕೆ ಬಂದ ನಂತರ ಉದ್ಯಾನದ ಆನೆಗಳೊಂದಿಗೆ ಹೊಂದಿಕೊಳ್ಳಲು ಅತ್ಯಂತ ಪ್ರಯಾಸಪಡುತ್ತಿತ್ತು. ಆನೆಯನ್ನು ಪಳಗಿಸುವ ಮತ್ತು ಇತರ ಆನೆಗಳೊಂದಿಗೆ ಬೆರೆಯುವ ನಿಟ್ಟಿನಲ್ಲಿ ಮಾವುತರು ಹಲವು ಪ್ರಯತ್ನಗಳನ್ನು ನಡೆಸಿದ ಪರಿಣಾಮವಾಗಿ ನಿಧಾನವಾಗಿ ಆನೆ ಸುಂದರ್‌ ಉದ್ಯಾನಕ್ಕೆ ಹೊಂದಿಕೊಳ್ಳುತ್ತಿದ್ದು ಉದ್ಯಾನದ ಸಿಬ್ಬಂದಿಯಲ್ಲಿ ಸಂತಸ ತಂದಿದೆ.

ದೀಪಾವಳಿ ಅಂಗವಾಗಿ ಪೇಟಾ ಸಂಸ್ಥೆಯ ಮಾರ್ಗದರ್ಶನದಲ್ಲಿ ಸುಂದರ್‌ಗೆ ಹಲವು ಬಗೆಯ ಹಣ್ಣುಗಳಾದ ಕಲ್ಲಂಗಡಿ, ಆಪಲ್‌, ಬಾಳೆಹಣ್ಣು, ಅನಾನಸ್, ಕ್ಯಾರೆಟ್‌ ಸೇರಿದಂತೆ ವಿವಿಧ ಬಗೆಯ ಹಣ್ಣು ಮತ್ತು ತರಕಾರಿಗಳಿಂದ ದೀಪದ ಮಾದರಿಯಲ್ಲಿ ಸಿದ್ದಗೊಳಿಸಿ ಸುಂದರ್‌ನಿಗೆ ನೀಡಿ ಪುಷ್ಟೀಕರಣ ಮಾಡಲಾಯಿತು ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು