ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್ | ಬಿಸಿ ಬಿಸಿ ಮಸಾಲೆ ದೋಸೆ, ಇಡ್ಲಿ, ವಡೆ

Published : 4 ಆಗಸ್ಟ್ 2024, 4:37 IST
Last Updated : 4 ಆಗಸ್ಟ್ 2024, 4:37 IST
ಫಾಲೋ ಮಾಡಿ
Comments

ಆನೇಕಲ್: ಬಿಸಿ ಬಿಸಿ ದೋಸೆ, ಇಡ್ಲಿ, ವಡೆ, ಚಟ್ನಿ, ಜಿಲೇಬಿ, ಬಾದಾಮ್‌ಪುರಿ, ಬಾದೂಷ, ಮದ್ದೂರು ವಡೆ.... ಎಂಬ ಗಟ್ಟಿ ಧ್ವನಿಯ ಶಬ್ಧ ಕೇಳುತ್ತಿದ್ದಂತೆ ಬಾಯಲ್ಲಿ ನೀರೂರುತ್ತದೆ. ಅಚ್ಚ ಕನ್ನಡದಲ್ಲಿ ಗ್ರಾಹಕರನ್ನು ಕೈಬೀಸಿ ಕರೆಯುವ ಧ್ವನಿ ಕಿವಿ ನಿಮಿರುವಂತೆ ಮಾಡುತ್ತದೆ.

ಇಂತಹ ಧ್ವನಿ ಆನೇಕಲ್‌ ದೇವರಕೊಂಡಪ್ಪ ವೃತ್ತದಲ್ಲಿನ ಆನೇಕಲ್‌ನ ಅತ್ಯಂತ ಪುರಾತನ ಹೋಟೆಲ್‌ ರಾಘವೇಂದ್ರ ಭವನದಲ್ಲಿ ನಿತ್ಯ ಝೇಂಕರಿಸುತ್ತದೆ.

1945ರಲ್ಲಿ ಪ್ರಾರಂಭವಾದ ರಾಘವೇಂದ್ರ ಭವನವು ಸುಮಾರು ಎಂಟು ದಶಕಗಳಿಂದ ಆನೇಕಲ್ ಜನತೆಯ ಅಚ್ಚುಮೆಚ್ಚಿನ ಹೋಟೆಲ್‌ ಆಗಿದೆ. 1945ರಲ್ಲಿ ಉಡುಪಿಯ ಐರೋಡಿಯಿಂದ ಬಂದ ಐರೋಡಿ ಕೃಷ್ಣಕಾರಂತ ರಾಘವೇಂದ್ರ ಭವನದ ಸಂಸ್ಥಾಪಕರು. ಅನಂತರ ಐರೋಡಿ ಸೀತಾರಾಮ ಕಾರಂತ ನಂತರ ರಾಮದಾಸ ಕಾರಂತ ಮತ್ತು ಮಗ ಸುಹಾಸ್‌ ಕಾರಂತರು ಹೋಟೆಲ್‌ ಅನ್ನು ನಡೆಸುತ್ತಿದ್ದಾರೆ. ಇವರ ಕುಟುಂಬದ ನಾಲ್ಕು ತಲೆಮಾರುಗಳು ಬದುಕು ಕಟ್ಟಿಕೊಂಡಿದ್ದಾರೆ.

ಬೆಳಗ್ಗೆ 6ಗಂಟೆಯಿಂದಲೂ ಕಾಫೀ, ಟೀ ಲಭ್ಯವಿರುತ್ತದೆ. ಇಲ್ಲಿಯ ಮಸಾಲೆ ದೋಸೆ ಆನೇಕಲ್‌ ಬ್ರ್ಯಾಂಡ್‌ ಆಗಿರುವುದು ವಿಶೇಷ. ಆನೇಕಲ್‌ಗೆ ಬಂದವರು ರಾಘವೇಂದ್ರ ಭವನದ ದೋಸೆಯನ್ನು ಸವಿಯಬೇಕೆಂಬ ಸಂಪ್ರದಾಯದಂತಿದೆ. ಪ್ರತಿದಿನ ಒಂದು ಸಾವಿರಕ್ಕೂ ಹೆಚ್ಚು ದೋಸೆಗಳು ಮಾರಾಟವಾಗುತ್ತವೆ.

ಅಡುಗೆಯಲ್ಲಿ ಯಾವುದೇ ಸೋಡ ಉಪಯೋಗಿಸುವುದಿಲ್ಲ. ಕಲಬೆರಕೆ ಮಾಡುವುದಿಲ್ಲ. ಶ್ರದ್ಧೆ, ಆಸಕ್ತಿ, ಸೇವೆಯು ವೃತ್ತಿಯಲ್ಲಿ ತೃಪ್ತಿ ನೀಡಿದೆ ಎನ್ನುತ್ತಾರೆ ಹೋಟೆಲ್‌ನ ಮಾಲೀಕ ರಾಮದಾಸ್‌ ಕಾರಂತ.

ನಮ್ಮ ಪೂರ್ವಿಕರು ಸೌಟ್‌ ಹಿಡಿದುಕೊಂಡು ಬರಿಗೈಲಿ ಉಡುಪಿಯ ಐರೋಡಿಯಿಂದ ಆನೇಕಲ್‌ಗೆ ಬಂದೆವು. ಇಂದು ಉತ್ತಮವಾಗಿ ಜೀವನ ಸಾಗಿಸುತ್ತಿದ್ದೇವೆ. ಇದಕ್ಕೆ ಗ್ರಾಹಕರ ತೃಪ್ತಿಯೇ ನಮ್ಮ ಸಾಧನೆಯ ಮೈಲಿಗಲ್ಲು ಎಂದರು.

ರಾಘವೇಂದ್ರ ಭವನದ ದೋಸೆ, ಚಿತ್ರಾನ್ನ ಅತ್ಯಂತ ಪ್ರಸಿದ್ದಿಯಾಗಿದೆ. ಸುತ್ತಮುತ್ತಲ ಹಳ್ಳಿಗಳವರು ಸಹ ಇಲ್ಲಿಯ ಖಾಯಂ ಗಿರಾಕಿಗಳು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಯುವಕರು ಇಲ್ಲಿಯ ಟೀ ಪಾರ್ಟಿಯಲ್ಲಿ ಸೇರುವುದು ವಿಶೇಷ.

ರಾಘವೇಂದ್ರ ಭವನದ ಮಾಲೀಕ ಐರೋಡಿ ರಾಮದಾಸ್‌ ಕಾರಂತ
ರಾಘವೇಂದ್ರ ಭವನದ ಮಾಲೀಕ ಐರೋಡಿ ರಾಮದಾಸ್‌ ಕಾರಂತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT